ಸಾಮೂಹಿಕ ವಿವಾಹದಲ್ಲಿ ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಪುತ್ರಿ ಮದುವೆ
ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಪುತ್ರಿ ವಿವಾಹ ಕಾರ್ಯಕ್ರಮವು ಸಾಮೂಹಿಕ ವಿವಾಹದಲ್ಲಿ ನೆರವೇರಿದೆ. ಈ ವೇಳೆ ಹಲವು ಗಣ್ಯರು ಪಾಲ್ಗೊಂಡು ವಧುವರರಿಗೆ ಶುಭ ಹಾರೈಸಿದ್ದಾರೆ.
ಶಿವಮೊಗ್ಗ [ಜ.30]: ಬಿಜೆಪಿ ಮುಖಂಡ ಹಾಗೂ MLC ಅಯನೂರು ಮಂಜುನಾಥ್ ತಮ್ಮ ಮಗಳ ಮದುವೆಯ ಜೊತೆಗೆ ಸಾಮೂಹಿಕ ವಿವಾಹವನ್ನು ನೇರವೇರಿಸಿದ್ದಾರೆ.
ಶಿವಮೊಗ್ಗದ ಶ್ರೀರಾಮ ಪುರದ ಪೆಸಿಟ್ ಕಾಲೇಜಿನ ಪ್ರೇರಣಾ ಹಾಲ್ ನಲ್ಲಿ ತಮ್ಮ ಧರ್ಮಶ್ರೀ ಟ್ರಸ್ಟ್ ವತಿಯಿಂದ ಸಾಮೂಹಿಕ ವಿವಾಹ ನೆರವೇರಿಸಿದ್ದು, 51 ಜೋಡಿಗಳು ನವ ಜೀವನಕ್ಕೆ ಕಾಲಿಟ್ಟಿದ್ದಾರೆ.
ಆಯನೂರು ಮಂಜುನಾಥ್ ಪುತ್ರಿ ಶಮಾತ್ಮಿಕಾ ಹಾಗೂ ಮಹೇಂದ್ರ ಅವರು ಸಾಮೂಹಿಕ ವಿವಾಹದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ವಿಶಿಷ್ಟ ರೀತಿಯಲ್ಲಿದೆ ತಾ.ಪಂ ಸದಸ್ಯನ ಪುತ್ರನ ವಿವಾಹ ಆಹ್ವಾನ ಪತ್ರಿಕೆ...
51 ಜೋಡಿಗಳು ನವಜೀನವಕ್ಕೆ ಕಾಲಿಟ್ಟಿದ್ದು, ತಂದೆ ತಾಯಿಗಳಿಗೆ ಬಟ್ಟೆ, ವಧುವಿಗೆ ಕಾಲುಂಗುರ, ತಾಳಿಯನ್ನ ಧರ್ಮಶ್ರೀ ಟ್ರಸ್ಟ್ ವತಿಯಿಂದ ಒದಗಿಸಲಾಗಿತ್ತು.
ಮಲೆನಾಡಿಗೆ ಪ್ರತಿದಿನ ಉಗಿಬಂಡಿ, ಶಿವಮೊಗ್ಗ-ಯಶವಂತಪುರ ಚುಕು-ಬುಕು ಸ್ಟಾರ್ಟ್!..
ವಿವಾಃ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ , ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು ನೂತನ ವಧು - ವರರಿಗೆ ಶುಭ ಹಾರೈಸಿದರು.