Asianet Suvarna News Asianet Suvarna News

ಆಫ್ರಿಕಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗನ ರಕ್ಷಣೆಗೆ ಯತ್ನ..!

* ಮೆಕ್ಯಾನಿಕ್‌ ಕೆಲಸಕ್ಕೆ ನೇಮಿಸಿಕೊಂಡು 4 ತಿಂಗಳಿಂದ ವೇತನ ಕೊಡದೆ ವಂಚಿಸಿದ ಸಂಸ್ಥೆ  
*  ನನ್ನನ್ನು ಪಾರು ಮಾಡಿ ಎಂದು ಅವರನ್ನು ಬೇಡಿಕೊಂಡ ಮೆಹಬೂಬ್‌ಸಾಬ್‌ 
* ಲೈಬೀರಿಯಾದಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದ ಏಮ್‌ ಇಂಡಿಯಾ ಫೋರಂ ಸಂಸ್ಥೆ

Attempt to Protection Kannadiga Troubled in Africa grg
Author
Bengaluru, First Published Aug 9, 2021, 8:22 AM IST

ಸೋಮರಡ್ಡಿ ಅಳವಂಡಿ

ಕೊಪ್ಪಳ(ಆ.09):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಫ್ರಿಕಾ ಮೂಲದವರು ರಂಪಾಟ ಮಾಡಿ, ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದರೆ, ಅತ್ತ ಆಫ್ರಿಕಾದಲ್ಲಿ ಗಂಗಾವತಿ ಮೂಲದ ವ್ಯಕ್ತಿಯೊಬ್ಬ ಕಿರುಕುಳಕ್ಕೆ ಒಳಗಾಗಿ ತನ್ನನ್ನು ಸಂಕಷ್ಟದಿಂದ ಪಾರು ಮಾಡಿ ಎಂದು ಅಂಗಲಾಚುತ್ತಿರುವ ಬಗ್ಗೆ ಮೂಲಗಳಿಂದ ತಿಳಿದುಬಂದಿದೆ. ಆಫ್ರಿಕಾದ ಲೈಬೀರಿಯಾ ದೇಶದಲ್ಲಿ ಗಂಗಾವತಿಯ ಮೆಹಬೂಬಸಾಬ್‌ ಎನ್ನುವ ವ್ಯಕ್ತಿ ಈಗ ಸಂಕಷ್ಟದಲ್ಲಿ ಸಿಲುಕಿದ್ದು, ಅವರನ್ನು ಪಾರು ಮಾಡುವ ದಿಸೆಯಲ್ಲಿ ವಿದೇಶಿ ಕನ್ನಡಿಗರೇ ಸ್ಥಾಪಿಸಿರುವ ಏಮ್‌ ಇಂಡಿಯಾ ಸಂಸ್ಥೆ ಮುಂದಾಗಿದೆ.

ಆಗಿದ್ದೇನು?:

ಗಂಗಾವತಿ ನಿವಾಸಿ ಮೆಹಬೂಬ್‌ಸಾಬ್‌ ಹೆಡ್ರಾಲಿಕ್‌ ಮೆಕ್ಯಾನಿಕ್‌ ಆಗಿದ್ದಾರೆ. ನಾಲ್ಕು ತಿಂಗಳ ಹಿಂದೆಯಷ್ಟೇ ಅವರು ಲೈಬೀರಿಯಾದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಸೆನೊ ಎನ್ನುವ ಕಂಪನಿ ಅವರಿಗೆ ಜೆಸಿಬಿ ಮತ್ತು ಹಿಟಾಚಿ ಮೊದಲಾದ ಘನ ವಾಹನಗಳ ಮೇಲುಸ್ತುವಾರಿ ನೋಡಿಕೊಳ್ಳುವ ಕೆಲಸ ನೀಡಿದೆ. ಕೆಲಸ ನೀಡಿದ ಕಂಪನಿ, ಅವರಿಗೆ ವೀಸಾ ನೀಡಿ, ನಾಲ್ಕು ತಿಂಗಳ ಹಿಂದೆಯಷ್ಟೇ ಕರೆಯಿಸಿಕೊಂಡಿದೆ. ಅಲ್ಲಿ ಗುಡ್ಡಗಾಡೊಂದರಲ್ಲಿ ಕೆಲಸಕ್ಕೆ ನೇಮಿಸಿದೆ. ಆದರೆ, ನಾಲ್ಕು ತಿಂಗಳಿಂದ ವೇತನವನ್ನೇ ನೀಡಿಲ್ಲವಂತೆ. ಗುಡ್ಡಗಾಡು ಪ್ರದೇಶದಲ್ಲಿ ಕೆಲಸ ಮಾಡಬೇಕಾಗಿದ್ದರಿಂದ ಸರಿಯಾದ ಸಮಯಕ್ಕೆ ಊಟ, ನೀರು ಸಹ ದೊರೆಯುತ್ತಿಲ್ಲವಂತೆ.

ಮೊಬೈಲ್‌ ಸ್ವಿಚ್‌ ಆಫ್‌ ಮಾಡಂಗಿಲ್ಲ, ಸಬೂಬು ಹೇಳಂಗಿಲ್ಲ: ಖಡಕ್‌ ಎಚ್ಚರಿಕೆ ಕೊಟ್ಟ ಆಚಾರ್‌

ಈ ಕುರಿತು ಆಡಿಯೋ ಒಂದನ್ನು ಮಾಡಿ, ವಿದೇಶದಲ್ಲಿರುವ ಕನ್ನಡಿಗರೇ ಸ್ಥಾಪಿಸಿರುವ ಏಮ್‌ ಇಂಡಿಯಾ ಫೋರಂ ಸಂಸ್ಥೆಗೆ ಆನ್‌ಲೈನ್‌ ಮೂಲಕ ಸಂಪರ್ಕ ಮಾಡಿ, ನೀಡಿದ್ದಾರೆ. ನನ್ನನ್ನು ಪಾರು ಮಾಡಿ ಎಂದು ಅವರನ್ನು ಬೇಡಿಕೊಂಡಿದ್ದಾರೆ. ತಕ್ಷಣ ಸಹಾಯಕ್ಕೆ ನಿಂತಿರುವ ಸಂಸ್ಥೆ, ಲೈಬೀರಿಯಾದಲ್ಲಿ ಇರುವ ಭಾರತದ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದೆ.

ಪತ್ರ ಬರೆದ ಸಂಸ್ಥೆ:

ಏಮ್‌ ಇಂಡಿಯಾ ವಿದೇಶಾಂಗ ಸಚಿವರಿಗೆ, ರಾಜ್ಯದ ಮುಖ್ಯಮಂತ್ರಿಗೂ ಪತ್ರದ ಪ್ರತಿಯನ್ನು ರವಾನಿಸಿದೆ. ಲೈಬೀರಿಯಾದಲ್ಲಿ ಇರುವ ಭಾರತೀಯ ರಾಯಭಾರಿ ಕಚೇರಿಗೆ ಹಾಕಿರುವ ಪತ್ರದ ಪ್ರತಿ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.
ನನ್ನ ಅಣ್ಣ ನಾಲ್ಕು ತಿಂಗಳ ಹಿಂದೆಯಷ್ಟೇ ಲಿಬೇರಿಯಾಕ್ಕೆ ಹೋಗಿದ್ದಾನೆ. ಅಲ್ಲಿ ಸರಿಯಾಗಿ ವೇತನ ನೀಡುತ್ತಿಲ್ಲ, ವಾಪಸ್‌ ಬರುವುದಾಗಿ ತಿಳಿಸಿದ್ದಾನೆ. ಟಿಕೆಟ್‌ ಮಾಡಿಸಲು ಯತ್ನಿಸುತ್ತಿದ್ದು, ಸಿಗುತ್ತಿಲ್ಲ ಎಂದಷ್ಟೇ ಹೇಳಿದ್ದಾನೆ ಎಂದು ಮೆಹಬೂಬ್‌ಸಾಬ್‌ ಸಹೋದರ ಆಯೂಬ್‌ ಶೇಕ್‌ ತಿಳಿಸಿದ್ದಾರೆ.
 

Follow Us:
Download App:
  • android
  • ios