ಬಾಗಲಕೋಟೆ (ಡಿ.15): ಗ್ರಾಮ ಪಂಚಾಯತ್ ಚುನಾವಣೆ ವಿಚಾರವಾಗಿ ಯೋಧರೋರ್ವರ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಲಾಗಿದೆ. 

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಶಿರಗುಪ್ಪಿ ಗ್ರಾಮದ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ಛತ್ತಿಸಗಡದಲ್ಲಿ ಕಾರ್ಯನಿರ್ವಹಿಸುತ್ತಿರುವ CRPF ಯೋಧ ಜಗದೀಶ್ ಬರಗಾಲ ಕುಟುಂಬ ಈ ಬಗ್ಗೆ ಕಣ್ಣೀರಿಟ್ಟಿದೆ. 

 ಯೋಧನ ತಂದೆತಾಯಿ, ಸಹೋದರು ತಮ್ಮ ಅಳಲು ತೋಡಿಕೊಂಡಿದ್ದು, ರಕ್ಷಣೆ ನೀಡಬೇಕೆಂದು ಕೋರಿದ್ದಾರೆ. 

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬೆಂಬಲಿಸುವ ವಿಚಾರವಾಗಿ ಗಲಾಟೆ ನಡೆದಿದ್ದು, ಕಾರಿನಲ್ಲಿದ್ದ ಯೋಧನ ಸಹೋದರನನ್ನು ಹೊರಗೆ ಎಳೆದು ತಂದು ಕಲ್ಲಿನಿಂದ ತಲೆಗೆ ಹಲ್ಲೆ ಮಾಡಿದ್ದಾರೆ. 

ಬಾಗಲಕೋಟೆ: ತಳ್ಳಾಟದಿಂದ ಗರ್ಭಪಾತವಿಲ್ಲ, ಉಲ್ಟಾ ಹೊಡೆದ ಪುರಸಭೆ ಸದಸ್ಯೆ ಪತಿ ...  

ಮತ್ತೊಂದು ಕುಟುಂಬದ ಐದು ಜನ ಸೇರಿ ಹಲ್ಲೆ ಮಾಡಿದ್ದಾರೆ ಎಂದು ಯೋಧನ ಕುಟುಂಬಸ್ಥರು ಆರೋಪಿಸಿದ್ದಾರೆ. ಗಲಾಟೆ ನಡೆಯುತ್ತಿದ್ದ ವೇಳೆ ಬಿಡಿಸಲು ಬಂದಿದ್ದ ಯೋಧನ ತಂದೆಗೆ ಕೈಗೆ ಕಚ್ಚಿ ಗಾಯ ಮಾಡಿದ್ದು ಇದೀಗ ಈ ಕುಟುಂಬ ನ್ಯಾಯಕ್ಕಾಗಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮೊರೆ ಹೋಗಿದೆ. 
 
ಯೋಧನ ಸಹೋದರ ರಮೇಶ್ ನೊಂದಿಗೆ ಕಾತರಕಿ ಗ್ರಾಮ ಪಂಚಾಯಿತಿ ಬಳಿ ಗಲಾಟೆ ಮಾಡಿದ್ದು, ಇದೀಗ ಯೋಧನ ಸಹೋದರ ರಮೇಶ್ ಬರಗಾಲ, ಯೋಧನ ತಂದೆ ರಂಗಪ್ಪ, ತಾಯಿ ಲಕ್ಕವ್ವ ಎಸ್ಪಿ ಕಚೇರಿಗೆ ತೆರಳಿದ್ದಾರೆ. 

ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.