ದಾವ​ಣ​ಗೆರೆ (ನ.04):  ಅಕ್ರಮವಾಗಿ ಎಂ ಸ್ಯಾಂಡ್‌ ಸಂಗ್ರಹಿಸಿಟ್ಟ ಸ್ಥಳದ ಚಿತ್ರೀಕರಣಕ್ಕೆ ತೆರಳಿದ್ದ ಸುವರ್ಣ ನ್ಯೂಸ್‌ ಕ್ಯಾಮರಾಮ್ಯಾನ್‌ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ದೌರ್ಜನ್ಯ ಎಸಗಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ವರದಿಗಾರರ ಕೂಟದ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟಿಸಲಾಯಿತು.

ನಗರದ ಎಸಿ ಕಚೇರಿ ಎದುರು ವರದಿಗಾರರ ಕೂಟದ ಸಂಸ್ಥಾಪಕ ಅಧ್ಯಕ್ಷ ಕೆ.ಏಕಾಂತಪ್ಪ ನೇತೃತ್ವದಲ್ಲಿ ಪ್ರತಿಭಟಿಸಿದ ಮಾಧ್ಯಮ ಸಿಬ್ಬಂದಿ ನಂತರ ಎಸಿ ಮಮತಾ ಹೊಸಗೌಡರಿಗೆ ಮನವಿ ಅರ್ಪಿಸಿದರು.

‘ನಾವು ಪಾಕಿಸ್ತಾನದವರು’ ಎಂದು ಕೂಗಾಡಿ ವ್ಯಕ್ತಿಯ ಮೇಲೆ ಹಲ್ಲೆ ...

ಈ ವೇಳೆ ಕೂಟದ ಅಧ್ಯಕ್ಷ ಜಿ.ಎಂ.ಆರ್‌.ಆರಾಧ್ಯ, ನಗರದ ಹೊರವಲಯದಲ್ಲಿ ಅಕ್ರಮವಾಗಿ ಎಂ ಸ್ಯಾಂಡ್‌ ದಾಸ್ತಾನು ಮಾಡಿಟ್ಟಿದ್ದ ಬಗ್ಗೆ ವಿಡಿಯೋ ಮಾಡಲು ಹೋಗಿದ್ದ ಸುವರ್ಣ ನ್ಯೂಸ್‌ ಕ್ಯಾಮರಾಮ್ಯಾನ್‌ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಿ, ದೌರ್ಜನ್ಯ ಎಸಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.