ಬೆಂಗಳೂರು(ನ.04): ಐಪಿಎಲ್‌ ಕ್ರಿಕೆಟ್‌ ಪಂದ್ಯ ವೀಕ್ಷಿಸುತ್ತಿದ್ದ ಗುತ್ತಿಗೆದಾರನಿಗೆ ‘ನಾವು ಪಾಕಿಸ್ತಾನದವರು’ ಎಂದು ಕೂಗಾಡಿದ ಗುಂಪೊಂದು ಹಲ್ಲೆ ನಡೆಸಿರುವ ಪರಾರಿಯಾಗಿರುವ ಘಟನೆ ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಿಇಎಂಎಲ್‌ ಲೇಔಟ್‌ ನಿವಾಸಿ ತಿಲಕ್‌ ಹಲ್ಲೆಗೊಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಅಕ್ಷತ್‌ ಜೈನ್‌, ಜೆ.ಕೊಠಾರಿ ಹಾಗೂ ಇತರರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಿಲಕ್‌ ಹಾಗೂ ಆತನ ಸ್ನೇಹಿತರು, ಅ.31ರಂದು ಕೋರಮಂಗಲದ ಪಬ್‌ವೊಂದರಲ್ಲಿ ಐಪಿಎಲ್‌ ಕ್ರಿಕೆಟ್‌ ಪಂದ್ಯ ವೀಕ್ಷಿಸುತ್ತಿದ್ದರು. ಇದೇ ವೇಳೆ ಅಲ್ಲಿಗೆ ಹೋಗಿದ್ದ ಅಕ್ಷತ್‌ ಜೈನ್‌, ಕೊಠಾರಿ ಮತ್ತು ಆತನ ಸ್ನೇಹಿತರು ಗುರಾಯಿಸಿ, ಅವಾಚ್ಯವಾಗಿ ನಿಂದಿಸಿದ್ದರು. ನೀವು ಬೆಂಗಳೂರಿನವರಾ ಎಂದು ತಿಲಕ್‌ ಕೇಳಿದ್ದರು. ನಾವು ಪಾಕಿಸ್ತಾನದವರು ಎಂದು ಹೇಳಿ ಕೂಗಾಡಿದ್ದ ಆರೋಪಿಗಳು, ಅಲ್ಲಿಂದ ಹೊರಟು ಹೋಗಿದ್ದರು.

ಮನೆ ಬಾಡಿಗೆ ಕೇಳಿದ ಮಾಲೀಕರ ಮೇಲೆ ಮಹಿಳೆಯಿಂದ ಹಲ್ಲೆ

ಕೆಲ ಸಮಯದ ನಂತರ ಪಬ್‌ನ ಕೊಠಡಿಯೊಂದರಲ್ಲಿ ತಿಲಕ್‌ ಸಿಗರೇಟ್‌ ಸೇದುತ್ತಿದ್ದರು. ಅಲ್ಲಿಗೆ ಹೋಗಿದ್ದ ಆರೋಪಿಗಳು, ಜಗಳ ತೆಗೆದು ಹಲ್ಲೆ ಮಾಡಿದ್ದಾರೆ. ಟೀ ಶರ್ಟ್‌ ಹಿಡಿದು ಎಳೆದಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ತಿಲಕ್‌ ದೂರು ಕೊಟ್ಟಿದ್ದಾರೆ. ಆರೋಪಿಗಳ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.