ಚಾಮರಾಜನಗರ(ಜ.28): ಗುಂಡ್ಲುಪೇಟೆ ಪಟ್ಟಣಕ್ಕೆ ಭಾನುವಾರ ಬಂತೆಂದರೆ ಬ್ಯಾಂಕ್‌ಗಳ ಎಟಿಎಂಗಳಿಗೂ ಸಹ ರಜೆ ಸಿಗುತ್ತದೆ. ಬ್ಯಾಂಕ್‌ಗೆ 2 ದಿನ ರಜೆ ಇದ್ದಾಗ ಈ ಸಮಸ್ಯೆ ಇಲ್ಲಿಗೆ ಕಾಯಂ.

ಹೌದು, ಮೈಸೂರು-ಊಟಿ ರಸ್ತೆಯಲ್ಲಿರುವ ವಿಜಯ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕರ್ನಾಟಕ ಬ್ಯಾಂಕ್‌, ಕೆನರಾ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ಊಟಿ ವೃತ್ತದಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕ್‌ ಹಾಗೂ ಬಸ್‌ ನಿಲ್ದಾಣ, ಚಾಮರಾಜನಗರ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಎಟಿಎಂಗಳು ಶೋ ಕೇಸಿನ ಗೊಂಬೆಗಳಂತಾಗಿ ಹೋಗಿವೆ.

ಇನ್ಮೇಲೆ ಹೆಬ್ಬೆಟ್ಟು ಒತ್ತದಿದ್ರೂ ಪಡಿತರ ಲಭ್ಯ

ಪಟ್ಟಣದಲ್ಲಿ ಹಲವಾರು ಬ್ಯಾಂಕ್‌ಗಳ ಹತ್ತಾರು ಎಟಿಎಂಗಳಲ್ಲಿ ಭಾನುವಾರ ಬಂತೆಂದೆರೆ ಹಣ ಖಾಲಿ ಖಾಲಿ. ಕೆಲ ಎಟಿಎಂಗಳು ಬಾಗಿಲು ಬಂದ್‌ ಆಗುತ್ತವೆ. ಇನ್ನೂ ಕೆಲವುಗಳಲ್ಲಿ ಹಣ ಮಧ್ಯಾಹ್ನದ ತನಕ ಖಾಲಿಯಾಗುತ್ತದೆ. ಕೇರಳ, ತಮಿಳುನಾಡಿಗೆ ಹೋಗುವ ಪ್ರವಾಸಿಗರ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಕಾರಣ ಎಟಿಎಂಗಳಲ್ಲಿ ಹಣ ಖಾಲಿಯಾಗುತ್ತಿದೆ ಎಂಬ ಮಾಹಿತಿ ಇದ್ದರೂ ಬ್ಯಾಂಕ್‌ಗಳು ಮಾತ್ರ ಎಟಿಎಂಗೆ ಹಣ ತುಂಬುತ್ತಿಲ್ಲ. ಗ್ರಾಮಾಂತರ ಹಾಗೂ ಪಟ್ಟಣದ ಪ್ರದೇಶದ ಜನರು ಎಟಿಎಂಗೆ ಬಂದು ಹಣ ತೆಗೆಯಲು ಬಂದರೂ ಎಟಿಎಂ ಬಾಗಿಲು ಮುಚ್ಚಿರುತ್ತವೆ ಇಲ್ಲದವೆ ಬಾಗಿಲು ತೆರೆದಿದ್ದರೂ ಹಣವಿರುವುದಿಲ್ಲ.

ನಿರ್ವಹಣೆ ಮಾಡುತ್ತಿಲ್ಲ:

ಬ್ಯಾಂಕ್‌ನ ಗ್ರಾಹಕರು ಹಣ ಪಡೆಯಲು ಬ್ಯಾಂಕ್‌ ಎಟಿಎಂಗೆ ಬಂದರೂ ಹಣ ಸಿಗದಿದ್ದಾಗ ಶಪಿಸಿಕೊಂಡು ಹೋಗುವ ದೃಶ್ಯ ಅಲ್ಲಲ್ಲಿ ಕಂಡು ಬರುತ್ತಿವೆ. ಇಷ್ಟೊಂದು ಪ್ರಮಾಣದಲ್ಲಿ ಹಣ ಖಾಲಿಯಾಗುತ್ತದೆ ಎಂಬ ಅರಿವು ಬ್ಯಾಂಕ್‌ಗಳಿಗೆ ಇದ್ದರೂ ಹಣ ಹಾಕುತ್ತಿಲ್ಲ. ಬ್ಯಾಂಕ್‌ ವ್ಯವಸ್ಥಾಪಕರು ಈ ಬಗ್ಗೆ ಎಚ್ಚೆತ್ತುಕೊಂಡು ಎಟಿಎಂಗೆ ಹಣ ತುಂಬಬೇಕಿದೆ.

ಎಸಿ ವರ್ಕ್ ಆಗುತ್ತಿಲ್ಲ:

ಪಟ್ಟಣದಲ್ಲಿರುವ ಅನೇಕ ಎಟಿಎಂಗಳಲ್ಲಿ ಎಸಿ ವರ್ಕ್ ಆಗುತ್ತಿಲ್ಲ. ಬಾಗಿಲು ಮುಚ್ಚಿ ಹಣ ತೆಗೆಯಲು ಹೋದಲ್ಲಿ ಉಚಿತವಾಗಿ ಬೆವರು ಸುರಿಯುತ್ತದೆ ಎಂದು ಗ್ರಾಹಕರೊಬ್ಬರು ಹೇಳಿದರು.

ಹಣ ತುಂಬಿ ಇಲ್ಲ, ಮುಚ್ಚಿ:

ಬ್ಯಾಂಕ್‌ಗಳ ಮುಂದೆ ಹಣವಿಲ್ಲದೆ ಶೋಕೇಸಿನಂತೆ ಇರುವ ಎಟಿಎಂಗಳಿಗೆ ಎಲ್ಲ ದಿನಗಳಲ್ಲೂ ಹಣ ತುಂಬಿ ಇಲ್ಲ. ಎಟಿಎಂ ಬಾಗಿಲು ಮುಚ್ಚಿ ಎಂದು ಹಲವಾರು ಮಂದಿ ಗ್ರಾಹಕರು ಆಗ್ರಹಿಸಿದರು.

ಮೈಸೂರು ಮೇಲ್ ಮಂಜು..! ಚಿಲ್ ಎನ್ನುತ್ತಿದೆ ಸಾಂಸ್ಕೃತಿಕ ನಗರ

ಶನಿವಾರ ಬ್ಯಾಂಕ್‌ಗೆ ರಜೆ ಇದೆ. ಹಾಗಾಗಿ ಭಾನುವಾರ ಎಟಿಎಂಗಳಲ್ಲಿನ ಹಣ ಖಾಲಿಯಾಗುತ್ತದೆ. ಎಟಿಎಂಗೆ ಎಷ್ಟುಹಣ ಹಾಕಲು ಸಾಧ್ಯವೋ ಅಷ್ಟುಹಾಕುತ್ತೇವೆ. ಎರಡು ದಿನ ರಜೆ ಇದ್ದಾಗ ಈ ಸಮಸ್ಯೆ ಇರುತ್ತದೆ ಸಿಂಡಿಕೇಟ್‌ ಬ್ಯಾಂಕ್‌ ವ್ಯವಸ್ಥಾಪಕ ಶ್ರೀವತ್ಸ ಹೇಳಿದ್ದಾರೆ.