Asianet Suvarna News Asianet Suvarna News

ಚಿತ್ರದುರ್ಗ: ಖೋಖೋ ಅಂಕಣ ಅಭಿವೃದ್ಧಿಗೆ ಶಾಸಕ ತಿಪ್ಪಾರೆಡ್ಡಿಗೆ ಕ್ರೀಡಾಪಟುಗಳ ಮನವಿ

ದೇಶೀಯ ಕ್ರೀಡೆಯಾದ ಖೋಖೋ ಆಟವನ್ನು ಉಳಿಸುವ ನಿಟ್ಟಿನಲ್ಲಿ ಶಾಸಕ ತಿಪ್ಪಾರೆಡ್ಡಿ ಅಗತ್ಯ ಅನುದಾನ ನೀಡುವ ಮೂಲಕ ಖೋಖೋ ಅಂಕಣ ಅಭಿವೃದ್ಧಿಗೆ ಸಹಕರಿಸಬೇಕಾಗಿ ಮನವಿ

Athletes Request to MLA GH Thippareddy for Development of Kho Kho Court in Chitradurga grg
Author
First Published Nov 4, 2022, 2:31 PM IST

ಚಿತ್ರದುರ್ಗ(ನ.04):  ಸತತ 12 ವರ್ಷಗಳಿಂದ ಅಭಿವೃದ್ಧಿ ಕಾಣದೇ ಹಾಳಾಗಿರುವ ಖೋಖೋ ಅಂಕಣದ ಅಭಿವೃದ್ಧಿಗಾಗಿ ಅನುದಾನ ನೀಡುವಂತೆ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿಗೆ ಖೋಖೋ ಕ್ರೀಡಾಪಟುಗಳು ಮನವಿ ಸಲ್ಲಿಸಿದರು. ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಇಂದು(ಶುಕ್ರವಾರ) ಕ್ರೀಡಾಪಟುಗಳ ಅಹವಾಲು ಆಲಿಸಿದ ಶಾಸಕ ತಿಪ್ಪಾರೆಡ್ಡಿಗೆ ಖೋಖೋ ಅಂಕಣದ ಅಭಿವೃದ್ಧಿಗಾಗಿ ಹುತ್ತದ ಮಣ್ಣು ಅಗತ್ಯವಿದೆ. ಅಲ್ಲದೇ ಖೋಖೋ ಅಂಕಣದ ಸಮೀಪದಲ್ಲೇ ವಿದ್ಯುತ್ ಕಂಬ ಅಳವಡಿಸಿದ್ದೂ, ಅಲ್ಲಿ ಆಟವಾಡಲು ತೊಂದರೆಯಾಗುತ್ತಿದೆ. ಹೀಗಾಗಿ ಆ ಕಂಬವನ್ನು ತೆರವುಗೊಳಿಸಿ, ಫ್ಲಡ್‌ ಲೈಟ್ ಅಳವಡಿಸುವ ಮೂಲಕ ಖೋಖೊ ಅಂಕಣಕ್ಕೆ ಬೆಳಕಿನ ವ್ಯವಸ್ಥೆ ಕಲ್ಪಿಸುವಂತೆ ಮನವಿ ಸಲ್ಲಿಸಿದರು.

ಪ್ರತಿ ವರ್ಷ ಚಿತ್ರದುರ್ಗ ಜಿಲ್ಲೆಯಿಂದ ಕನಿಷ್ಟ ಮೂವರು ಖೋಖೋ ಪಟುಗಳು ರಾಷ್ಟ್ರಮಟ್ಟದಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸುತಿದ್ದರು. ಆದ್ರೆ ಅಗತ್ಯ ಸೌಲಭ್ಯಗಳ ಕೊರತೆಯಿಂದಾಗಿ ಖೋಖೋ ಆಡುವವರ ಆಸಕ್ತಿ ಕಡಿಮೆಯಾಗ್ತಿದೆ. ಕೇವಲ ದಸರಾ ಕ್ರೀಡಾಕೂಟ ಹಾಗು ಶಾಲಾ, ಕಾಲೇಜು ಕ್ರೀಡಾಕೂಟಗಳಿಗೆ ಖೋಖೋ ಕ್ರೀಡಾಪಟುಗಳು ಸೀಮಿತವಾಗ್ತಿದ್ದಾರೆ. ಸ್ಟೇಡಿಯಂನಲ್ಲಿ ನಿತ್ಯ ಹವ್ಯಾಸ ಮಾಡಲು ಖೋಖೋ ಅಂಕಣವಿಲ್ಲದಂತಾಗಿದೆ ಎಂದು ಶಾಸಕರ ಗಮನಕ್ಕೆ ತಂದರು. 

ಪತಿಯಿಂದ ಹಲ್ಲೆ; ಮನನೊಂದು ಇಬ್ಬರ ಮಕ್ಕಳ ಜತೆ ಚೆಕ್ ಡ್ಯಾಂ ಹಾರಿ ಪತ್ನಿ ಆತ್ಮಹತ್ಯೆ

ಇನ್ನು ಖೋಖೋ ಅಂಕಣಕ್ಕೆ ಅತಿ ಮುಖ್ಯವಾಗಿ ಅಗತ್ಯವಿರುವ ಪೋಲ್ (ಕಂಬ), ನೆಟ್ ಸ್ರ್ಯಾರ್ಪರ್, ನೀರಿನ ವ್ಯವಸ್ಥೆ ಮತ್ತು ಶೌಚಾಲಯದ ಸೌಲಭ್ಯಗಳನ್ನು ಒದಗಿಸುವಂತೆ ಕೋರಿದರು. ಕಳೆದ 12 ವರ್ಷಗಳ ಹಿಂದೆ ಸಿಂಥೇಟಿಕ್ ಟ್ರಾಕ್ ನಿರ್ಮಾಣದ ವೇಳೆ ಖೋಖೋ ಅಂಕಣವನ್ನು ಸ್ಟೇಡಿಯಂನ ಹೊರಭಾಗಕ್ಕೆ ಶಿಫ್ಟ್ ಮಾಡಲಾಗಿದೆ. ಆದರೆ ಅಂದಿನಿಂದ ಇಂದಿನವರೆಗೂ ಖೋಖೋ ಅಂಕಣವನ್ನ ಯಾವುದೇ ನಿರ್ವಹಣೆ ಮಾಡ್ತಿಲ್ಲ.

ಖೋಖೋ ಕ್ರೀಡಾಪಟುಗಳಿಗೆ ಯಾವುದೇ ಸೌಲಭ್ಯಗಳನ್ನು ಒದಗಿಸಲಾರದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಜಿಲ್ಲಾ ಯುವಜನ ಸೇವಾ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ‌ಬಾಯಿ ‌ವಿರುದ್ಧ ಶಾಸಕರ ಬಳಿ ದೂರನ್ನು ಹೇಳಿದರು. ದೇಶೀಯ ಕ್ರೀಡೆಯಾದ ಖೋಖೋ ಆಟವನ್ನು ಉಳಿಸುವ ನಿಟ್ಟಿನಲ್ಲಿ ಶಾಸಕ ತಿಪ್ಪಾರೆಡ್ಡಿಯವರು ಅಗತ್ಯ ಅನುದಾನ ನೀಡುವ ಮೂಲಕ ಖೋಖೋ ಅಂಕಣ ಅಭಿವೃದ್ಧಿಗೆ ಸಹಕರಿಸಬೇಕಾಗಿ ಮನವಿ ಮಾಡಿದರು. ಈ ವೇಳೆ ರಾಷ್ಟ್ರೀಯ ಮಟ್ಟದ ಖೋಖೋ ಕ್ರೀಡಾಪಟುಗಳು ಹಾಗೂ ಅಮೋಘ ಸ್ಪೋರ್ಟ್ಸ್ ಕ್ಲಬ್ ನ ಎಸ್. ಸಿದ್ದರಾಜು, ಪ್ರತಾಪ್, ಮಂಜುನಾಥ್, ಶ್ರೀನಿವಾಸ್, ಕಂಠಿ ಸೇರಿದಂತೆ ಹಿರಿಯ ಆಟಗಾರರಾದ ರಾಘವೇಂದ್ರ ಮಿಲಿಟರಿ ಶ್ರೀನಿವಾಸ್, ಅನಂತ್, ವೆಂಕಟೇಶ್, ಶಿವು ಮತ್ತು ಇದ್ದರು. 
 

Follow Us:
Download App:
  • android
  • ios