Karnataka election 2023: ₹2.87 ಲಕ್ಷದ ಮದ್ಯ, ಮಾದಕ ವಶ; 8071 ಬ್ಯಾನರ್‌ಗಳ ತೆರವು: ಚುನಾವಣಾಧಿಕಾರಿ ದಿವ್ಯಪ್ರಭು ಮಾಹಿತಿ

ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ನೀತಿ ಸಂಹಿತೆ ಜಾರಿಗೆ ಬರುವ ಪೂರ್ವದಲ್ಲಿಯೇ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ತೀವ್ರ ನಿಗಾ ವಹಿಸಲಾಗಿದ್ದು, 2.87 ಲಕ್ಷ ರು ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.

Assembly elections: 2.87 lakh liquor, drugs seized; 8071 Clearance of banners DC Divyaprabha informed rav

ಚಿತ್ರದುರ್ಗ (ಮಾ.25) : ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ನೀತಿ ಸಂಹಿತೆ ಜಾರಿಗೆ ಬರುವ ಪೂರ್ವದಲ್ಲಿಯೇ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ತೀವ್ರ ನಿಗಾ ವಹಿಸಲಾಗಿದ್ದು, 2.87 ಲಕ್ಷ ರು ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ನಿಯಮ ಬಾಹಿರವಾಗಿ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ಹಾಕಲಾಗಿದ್ದ ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.

ಚುನಾವಣಾ ಆಯೋಗ(Election Commission) ಸೂಚನೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಹಾಗೂ ಅಂತಾರಾಜ್ಯ ಗಡಿ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್‌(Checkpost)ಗಳನ್ನು ತೆರೆದು, ದಿನದ 24 ಗಂಟೆಯೂ ಅಧಿಕಾರಿ, ಸಿಬ್ಬಂದಿ ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ. ನಗದು ಸಾಗಾಣಿಕೆ, ಮದ್ಯ ಸಾಗಾಣಿಕೆ ಅಲ್ಲದೆ ಸೀರೆ, ಕುಕ್ಕರ್‌ ಸೇರಿದಂತೆ ವಿವಿಧ ಬಗೆಯ ಸಾಮಗ್ರಿಗಳ ಸಾಗಾಣಿಕೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಗಡಿ ಹಂಚಿಕೊಂಡಿರುವ ಇತರೆ ರಾಜ್ಯಗಳ ಪ್ರಮುಖ ಅಧಿಕಾರಿಗಳೊಂದಿಗೂ ಈಗಾಗಲೇ ಸಭೆಗಳನ್ನು ನಡೆಸಿ, ಅವರಿಂದಲೂ ತೀವ್ರ ನಿಗಾ ವಹಿಸಲು ಸಹಕರಿಸುವಂತೆ ತಿಳಿಸಲಾಗಿದೆ.

 

ಹೈವೇ ಅಪಘಾತ ಕಡಿಮೆ ಮಾಡಲು ಸಿಸಿಟಿವಿ ಅಳವಡಿಕೆ: ಕೋಟೆನಾಡಿನ ಪೊಲೀಸರಿಂದ ವಿನೂತನ ಪ್ರಯೋಗ!

ಜಿಲ್ಲೆಯಲ್ಲಿ ಒಟ್ಟು 35 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡಿದ್ದು, ಈಗಾಗಲೆ ಮೊಳಕಾಲ್ಮುರು ತಾಲೂಕಿನÜ ಯದ್ದಲಬೊಮ್ಮನಹಟ್ಟಿ, ಕಣಕುಪ್ಪೆ, ಚಳ್ಳಕೆರೆ ತಾಲೂಕಿನ ಜಾಜೂರು ಮತ್ತು ನಾಗಪ್ಪನಹಳ್ಳಿ ಗೇಟ್‌, ಹಿರಿಯೂರು ತಾಲೂಕಿನÜ ಮದ್ದಿಹಳ್ಳಿ, ಪಿ.ಡಿ. ಕೋಟೆ ಕ್ರಾಸ್‌ ಮತ್ತು ಗುಯಿಲಾಳು ಟೋಲ್‌ ಹಾಗೂ ಹೊಳಲ್ಕೆರೆ ತಾಲೂಕಿನÜ ಎಮ್ಮೆಹಟ್ಟಿಸೇರಿದಂತೆ ಒಟ್ಟು 8 ಚೆಕ್‌ಪೋಸ್ಟ್‌ಗಳು ಕಾರ್ಯಾರಂಭಗೊಂಡಿವೆ. ಸಾರಿಗೆ ಇಲಾಖೆ ಅಧಿಕಾರಿಗಳು ಕೂಡ ಜಿಲ್ಲೆಯಾದ್ಯಂತ ಪ್ರಮುಖ ಹೆದ್ದಾರಿಗಳಲ್ಲಿ ವಾಹನಗಳ ತಪಾಸಣೆ ಕಾರ್ಯದಲ್ಲಿ ತೀವ್ರ ನಿಗಾ ವಹಿಸಿದ್ದು, ಕಳೆದ ಮಾ. 15ರಿಂದ ಈವರೆಗೆ ಮೋಟಾರು ವಾಹನ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ 81 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಕಳೆದ ಮಾಚ್‌ರ್‍ 15ರಿಂದ ಇದುವರೆಗೆ ಜಿಲ್ಲೆಯಲ್ಲಿ 2.57 ಲಕ್ಷ ರು. ಮೌಲ್ಯದ ಒಟ್ಟು 633.97 ಲೀ. ಅಕ್ರಮ ಮದ್ಯ ಹಾಗೂ 30500 ರು. ಅಂದಾಜು ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಚಳ್ಳಕೆರೆ ತಾಲೂಕಿನÜಲ್ಲಿ ಅತಿ ಹೆಚ್ಚು 85258 ರು. ಮೌಲ್ಯದ 224.51 ಲೀ. ಅಕ್ರಮ ಮದ್ಯ ಹಾಗೂ 15000 ರು. ಮೌಲ್ಯದ 0.514 ಕೆಜಿ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಉಳಿದಂತೆ ಮೊಳಕಾಲ್ಮುರು ತಾಲೂಕಿನಲ್ಲಿ 73156 ರು. ಮೌಲ್ಯದ 171.99 ಲೀ. ಮದ್ಯ, ಚಿತ್ರದುರ್ಗ ತಾಲೂಕಿನಲ್ಲಿ 46823 ರು. ಮೌಲ್ಯದ 113.46 ಲೀ. ಮದ್ಯ ಹಾಗೂ 10500 ರು. ಮೌಲ್ಯದ 0.541 ಕೆಜಿ ಮಾದಕ, ಹಿರಿಯೂರು ತಾಲೂಕಿನಲ್ಲಿ 22493 ರು. ಮೌಲ್ಯದ 55.94 ಲೀ. ಮದ್ಯ ಹಾಗೂ 5000 ರು. ಮೌಲ್ಯದ 0.212 ಕೆ.ಜಿ. ಮಾದಕ, ಹೊಸದುರ್ಗ ತಾಲೂಕಿನಲ್ಲಿ 11253 ರು. ಮೌಲ್ಯದ 24.48 ಲೀ. ಮದ್ಯ, ಹೊಳಲ್ಕೆರೆ ತಾಲೂಕಿನÜಲ್ಲಿ 17991 ರು. ಮೌಲ್ಯದ 43.59 ಲೀ. ಮದ್ಯ ವಶಪಡಿಸಿಕೊಂಡು, ಅಕ್ರಮ ಚಟುವಟಿಕೆ ನಡೆಸಿದವರ ವಿರುದ್ಧ ಕಾನೂನು ಕ್ರಮ ವಹಿಸಲಾಗಿದೆ ಎಂದರು.

ಬಡಾವಣೆಗೆ ಕುಡಿಯುವ ನೀರಿನ ಸಮಸ್ಯೆ ಆಗುತ್ತೆ ಎಂದಿದ್ದಕ್ಕೆ ಹಲ್ಲೆ ಮಾಡಿಸಿದ ಫ್ಯಾಕ್ಟರಿ ಮಾಲೀಕ!

ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ಅನುಮತಿ ಇಲ್ಲದೆ ಯಾವುದೇ ರೀತಿಯ ಬ್ಯಾನ​ರ್‍ಸ್, ಗೋಡೆ ಬರಹ, ಪೋಸ್ಟ್‌ರ್‌ಗಳನ್ನು ಅಳವಡಿಸುವುದು ನಿಯಮಗಳಿಗೆ ವಿರುದ್ಧವಾಗಿದ್ದು, ಇಂತಹ ಕ್ರಮವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಜಿಲ್ಲೆಯಲ್ಲಿ ಅಕ್ರಮವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಇದ್ದಂತಹ 731 ಗೋಡೆ ಬರಹಗಳು, 3301 ಪೋಸ್ಟರ್‌ಗಳು, 1733 ಬ್ಯಾನರ್‌ಗಳು ಹಾಗೂ 1041 ಇತರೆ ಬಗೆಯ ಫಲಕಗಳು ಸೇರಿದಂತೆ ಒಟ್ಟು 6805 ಬ್ಯಾನರ್‌, ಪೋಸ್ಟರ್‌ ಇತ್ಯಾದಿಗಳನ್ನು ತೆರವುಗೊಳಿಸಲಾಗಿದೆ. ಅದೇ ರೀತಿ ಅನುಮತಿ ರಹಿತವಾಗಿ ಖಾಸಗಿ ಸ್ಥಳಗಳಲ್ಲಿ ಅಳವಡಿಸಲಾಗಿದ್ದ 207 ಗೋಡೆ ಬರಹಗಳು, 537 ಪೋಸ್ಟರ್‌ಗಳು, 235 ಬ್ಯಾನರ್‌ಗಳು, 287 ಇತರೆ ಫಲಕಗಳನ್ನು ತೆರವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಾ ತಿಳಿಸಿದ್ದಾರೆ

Latest Videos
Follow Us:
Download App:
  • android
  • ios