ವಿಜಯಪುರ ಪಾಲಿಕೆಯಲ್ಲಿ ಸದ್ದು ಮಾಡಿದ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ: ಸಭೆಯಲ್ಲಿ ಶಾಕಿಂಗ್ ವರದಿ ಬಿಚ್ಚಿಟ್ಟ ಆರೋಗ್ಯಾಧಿಕಾರಿ!

ನಾವೆಲ್ಲ ಬೀದಿಗಳಲ್ಲಿ ಸಿಗುವ ಆಹಾರ, ಪಾಸ್ಟ್ ಪುಡ್‌ಗಳನ್ನ ಚಪ್ಪರಿಸಿ ತಿನ್ತೀವಿ.‌ ನೋಡಲು ಕಲರ್.. ಕಲರ್ ನಾಲಿಗೆಗೆ ರುಚಿಸುತ್ತೆ ಅನ್ನೋ ಕಾರಣಕ್ಕೆ ಫಾಸ್ಟ್ ಪುಡ್‌ಗಳಾದ ಗೋಬಿ, ಕಬಾಬ್, ಚಿಕನ್ 65 ನಂತ ದಿಢೀರ್ ಆಹಾರಗಳಿಗೆ ಅಡಿಕ್ಟ್ ಆಗ್ತೀವಿ. 

Asianet Suvarna News report that made a noise in Vijayapura Corporation gvd

ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಆ.08): ನಾವೆಲ್ಲ ಬೀದಿಗಳಲ್ಲಿ ಸಿಗುವ ಆಹಾರ, ಪಾಸ್ಟ್ ಪುಡ್‌ಗಳನ್ನ ಚಪ್ಪರಿಸಿ ತಿನ್ತೀವಿ.‌ ನೋಡಲು ಕಲರ್.. ಕಲರ್ ನಾಲಿಗೆಗೆ ರುಚಿಸುತ್ತೆ ಅನ್ನೋ ಕಾರಣಕ್ಕೆ ಫಾಸ್ಟ್ ಪುಡ್‌ಗಳಾದ ಗೋಬಿ, ಕಬಾಬ್, ಚಿಕನ್ 65 ನಂತ ದಿಢೀರ್ ಆಹಾರಗಳಿಗೆ ಅಡಿಕ್ಟ್ ಆಗ್ತೀವಿ. ಆದ್ರೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಕವರ್ ಸ್ಟೋರಿ ನಡೆಸಿದ ಸ್ಟಿಂಗ್ ಆಫರೇಶ‌ನಲ್ಲಿ ಬೀದಿ ಬದಿಯ ಫಾಸ್ಟ್ ಫುಡ್ ಗಳ ಅಸಲಿಯತ್ತು ಬಯಲಾಗಿದ್ದು, ವಿಜಯಪುರದಲ್ಲಿ ಆಹಾರ ಗುಣಮಟ್ಟ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ‌. ಇತ್ತ‌ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲು ಸುವರ್ಣ ನ್ಯೂಸ್‌ ವರದಿ ಸದ್ದು ಮಾಡಿದೆ.

ಗುಮ್ಮಟನಗರಿಯಲ್ಲಿ ಡೆಂಜರ್ ಫಾಸ್ಟ್ ಪುಡ್: ಇತ್ತೀಚೆಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಕವರ್ ಸ್ಟೋರಿ ತಂಡ ಫಾಸ್ಟ್ ಫುಡ್‌ಗಳ ಗುಣಮಟ್ಟ, ಕೆಮಿಕಲ್ ಮಿಶ್ರಣಗಳ ಕುರಿತಾಗಿ ರಹಸ್ಯ ಕಾರ್ಯಾಚರಣೆ ಮೂಲಕ ರಿಯಾಲಿಟಿ ಚೆಕ್ ನಡೆಸಿತ್ತು. ಆಗ ನಗರದ ಆಯಕಟ್ಟಿನ ಸ್ಥಳಗಳಲ್ಲಿಯೆ ಕೆಮಿಕಲ್ ಬಣ್ಣ ಮಿಶ್ರಿತ ಕಬಾಬ್, ಗೋಬಿ ಮಂಚೂರಿ, ಎಗ್ ರೈಸ್ ಮಾರಾಟ ಮಾಡೋದು ಕಂಡು ಬಂದಿತ್ತು. ಈ ರಹಸ್ಯ ಕಾರ್ಯಾಚರಣೆ ಕವರ್ ಸ್ಟೋರಿಯಲ್ಲಿ ಪ್ರಸಾರವಾಗ್ತಿದ್ದಂತೆ ಭಾರೀ ಸದ್ದು ಮಾಡಿದೆ..

ಅದಿರು ಅಗೆದಿದ್ದಾಯ್ತು, ಇದೀಗ ಸಂಡೂರು ಬೆಟ್ಟಗಳಲ್ಲಿನ ಗುಹೆಯೊಳಗೆ ನಿಧಿ ಶೋಧ: ಹೊಸ ಟೆಕ್ನಾಲಜಿ ಬಳಸಿ ಖದೀಮರಿಂದ ಶೋಧನೆ

ವರದಿ ಬಳಿಕ ರೇಡ್, ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ರು: ವರದಿ ಪ್ರಸಾರವಾಗ್ತಿದ್ದಂತೆ ವಿಜಯಪುರದ ಪುಡ್ ಸೇಫ್ಟಿ ಅಧಿಕಾರಿಗಳು ಅಲರ್ಟ್ ಆಗಿದ್ದರು. ಏಷ್ಯಾನೆಟ್ ಸುವರ್ಣ ಜೊತೆಗೆ ಅಧಿಕಾರಿಗಳು ಕೆಮಿಕಲ್ ಆಹಾರ ಮಾರಾಟ ಮಾಡ್ತಿದ್ದ ಫಾಸ್ಟ್ ಪುಡ್ ಅಂಗಡಿಗಳ ಮೇಲೆ ರೇಡ್ ಮಾಡಿದ್ರು. ಆಗ ನಮ್ಮ ಕ್ಯಾಮರಾ ಆನ್ ಆಗ್ತಿದ್ದಂತೆ ಕೆಮಿಕಲ್ ಬಣ್ಣ ಮಿಶ್ರಣ ಮಾಡಿ ಕಬಾಬ್ ತಯಾರಿಸುತ್ತಿದ್ದ ಪಾಸ್ಟ್ ಪುಡ್ ಅಂಗಡಿ ಮಾಲಿಕ ಸ್ಥಳದಿಂದ ಕಾಲ್ಕೀಳಲು ಯತ್ನಿಸಿದ್ದ. ಈ ವೇಳೆ ಕೆಮಿಕಲ್ ಬೆರಸಿ ಆಹಾರ ತಯಾರಿಸ್ತಿದ್ದವರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು..

ಮಹಾನಗರ ಪಾಲಿಕೆಯಲ್ಲು ಸದ್ದು ಮಾಡಿದ ವರದಿ: ರೇಡ್ ವೇಳೆ ನಮ್ಮ ಏಷ್ಯಾನೆಟ್ ಸುವರ್ಣ ನ್ಯೂಸ್ ಕ್ಯಾಮರಾ ಎದುರು ಪಾಸ್ಟ್ ಪುಡ್‌ಗೆ ಕೆಮಿಕಲ್ ಮಿಶ್ರಣ ಮಾಡ್ತಿದ್ದ ಆಸಾಮಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವರದಿಯು ಪ್ರಸಾರವಾಗಿತ್ತು. ಇದನ್ನ ಕಂಡ ವಿಜಯಪುರ ನಗರದ ಜನತೆ ಶಾಕ್‌ಗೆ ಒಳಗಾಗಿದ್ರು. ಅಲ್ಲದೆ ಮಹಾನಗರ ಪಾಲಿಕೆಯ ಸದಸ್ಯರಿಗು ಈ ವಿಚಾರ ಗಾಭರಿ ಹುಟ್ಟಿಸಿತ್ತು‌. ನಿನ್ನೆ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಯನ್ನ ಪ್ರಸ್ತಾಪಿಸಿದ್ದಾರೆ. ಕೆಮಿಕಲ್ ಕಲರ್ ಪುಡ್ ಮಾರಾಟ ಬಗ್ಗೆ ಪಾಲಿಕೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಕೇಳಿದ್ದಾರೆ. ಅಲ್ಲದೆ ವಿಜಯಪುರ ನಗರದಲ್ಲಿ ನಡೆಯುತ್ತಿರು ಭಯಾನಕ ಕಲರ್ ದಂಧೆ ಸುವರ್ಣ ನ್ಯೂಸ್‌ನಂತ ರಾಜ್ಯಮಟ್ಟದ ಮಾಧ್ಯಮದಲ್ಲಿ ಗಂಭೀರ ಚರ್ಚೆಯಾಗ್ತಿರೋ ಬಗ್ಗೆ ಪಾಲಿಕೆ ಅಧಿಕಾರಿಗಳ ಎದುರು ಕ್ರಮಕ್ಕೆ ಆಗ್ರಹಿಸಿದ್ದಾರೆ. ಇಷ್ಟೆ ಅಲ್ಲದೆ ಕೆಮಿಕಲ್‌ ಪತ್ತೆಯಾದ ಪುಡ್ ಸೆಂಟರ್‌ಗಳ ಲೈಸೆನ್ಸ್ ರದ್ದು ಪಡಿಸಿ ಅಂಗಡಿಗಳಿಗೆ ಬೀಗ ಜಡಿಯಲು ಕಾರ್ಪೋರೆಟರ್  ಶಿವರುದ್ರ‌ ಬಾಗಲಕೋಟ ಆಗ್ರಹಿಸಿದ್ದಾರೆ. ಇದಕ್ಕೆ ಉಳಿದ ಸದಸ್ಯರು ಧನಿಗೂಡಿಸಿದ್ದಾರೆ..

ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಪಾಲಿಕೆ‌ ಆರೋಗ್ಯಾಧಿಕಾರಿ: ಇದೆ ವಿಷಯವಾಗಿ ನಡೆಯುತ್ತಿದ್ದ ಚರ್ಚೆಯಲ್ಲಿ ಪಾಲಿಕೆ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಪಾಲಿಕೆ ಆರೋಗ್ಯಾಧಿಕಾರಿ ಡಾ. ಲಕ್ಕನಣ್ಣನವರ್ ಶಾಕಿಂಗ್ ವಿಚಾರವನ್ನ ಬಹಿರಂಗ ಪಡೆಸಿದ್ದಾರೆ. ರಸ್ತೆ ಬದಿಗೆ ಸಿಗುವ ಆಹಾರದ 8 ಮಾದರಿಗಳನ್ನ ಲ್ಯಾಬ್‌ಗಳಿಗೆ ಕಳುಹಿಸಿ ಕೊಡಲಾಗಿತ್ತು‌. ಇದರಲ್ಲಿ 4 ಆಹಾರ ಮಾದರಿಗಳಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ ಎಂದಿದ್ದಾರೆ. ಈ ವಿಚಾರ ರಸ್ತೆ ಬದಿಗೆ ಫಾಸ್ಟ್ ಪುಡ್ ತಿನ್ನುವವರಲ್ಲಿ ಗಾಭರಿ ಹುಟ್ಟಿಸಿದೆ..

ಮಲೆನಾಡಿನಲ್ಲಿ ಧರೆ ಕುಸಿತದ ಆತಂಕದಲ್ಲಿರುವ 17 ಕುಟುಂಬಗಳು: ಬದಲಿ ಜಾಗದ ಬಗ್ಗೆ ಅಧಿಕಾರಿಗಳು ಹೇಳಿದ್ದೇನು?

ಅಲರ್ಟ್ ಆಗಿರುವ ಪುಡ್ ಸೇಪ್ಟಿ ಅಧಿಕಾರಿಗಳು: ಇನ್ನೂ ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ ಸಿಡಿದ ಕೆಮಿಕಲ್ ಆಹಾರ ಸುದ್ದಿಯಿಂದಾಗಿ ಜಿಲ್ಲೆಯ ಆಹಾರ ಗುಣಮಟ್ಟ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ವಾರಕ್ಕೆ ಒಂದು ಬಾರಿ ರಸ್ತೆ ಬದಿಯ ಅಂಗಡಿಗಳಲ್ಲಿ ರಿಯಾಲಿಟಿ ಚೆಕ್ ಮಾಡುವುದಾಗಿ ಹೇಳಿದ್ದಾರೆ‌. ಅಲ್ಲದೆ ಈಗಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕವರ ವಿರುದ್ಧ ಕಠಿಣ ಕ್ರಮಕ್ಕೆ‌ ಮುಂದಾಗಿದ್ದಾರೆ.

Latest Videos
Follow Us:
Download App:
  • android
  • ios