ಕಲಬುರಗಿ(ಮೇ.16): ಜಿಲ್ಲೆಯ ಜೇವರ್ಗಿ ತಾಲೂಕು ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಹೊರಟಿದ್ದಾಗ ಅಪಘಾತ ಸಂಭವಿಸಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಯಡ್ರಾಮಿ ತಾಲೂಕಿನ ಆಶಾ ಕಾರ್ಯಕರ್ತೆ ಶಾರದಾ ನಿಂಗಪ್ಪ ಕೋಟನೂರ (45) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 

ಈ ಕುರಿತಂತೆ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರು ಮಾಗಣಗೇರಾದಿಂದ ಶುಕ್ರವಾರ ಬೆಳಗ್ಗೆ ಹೊರಟು ಜೇವರ್ಗಿಯತ್ತ ಸಾಗುತ್ತಿದ್ದಾಗ ಚಿಗರಳ್ಳಿ ಕ್ರಾಸ್‌ ಬಳಿ ಇವರ ಬೈಕ್‌ ಅಪಘಾತಕ್ಕೀಡಾಗಿತ್ತು.

ಕೊರೋನಾ ಕಾಟಕ್ಕೆ ಸುಸ್ತಾದ ಜನ: ನಾನ್‌ ಕೋವಿಡ್‌ ರೋಗಿಗಳ ಸಮಸ್ಯೆ ಕೇಳೋರ‍್ಯಾರು..?

ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಇಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಆಶಾ ಕಾರ್ಯಕರ್ತೆ ಕೊನೆಯುಸಿರೆಳೆದಿದ್ದಾಳೆ.