ಬೀದರ್‌(ಫೆ.09):  ಗಡಿ ಜಿಲ್ಲೆ ಬೀದರ್‌ ಬೆಡಗಿ ಅರುಣಾ ಪಾಟೀಲ್‌ 2021ನೇ ಸಾಲಿನ ’ಮಿಸಸ್‌ ಕ್ವೀನ್‌ ಆಫ್‌ ಇಂಡಿಯಾ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪಂಚಮಸಾಲಿಗೆ ಮೀಸಲಾತಿ ನೀಡದಿದ್ದರೆ ಬಿಎಸ್ವೈ ಸಾವು ಖಚಿತ ಎಂದ ಯುವಕನ ವಿರುದ್ಧ ಕೇಸ್‌ ದಾಖಲು

ಗ್ಲೊಬಲ್‌ ಪ್ಲೆಜೆಂಟ್ಸ್‌ ನವದೆಹಲಿಯಲ್ಲಿ ಸಂಘಟಿಸಿದ್ದ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ 29 ಸುಂದರಿಯರನ್ನು ಹಿಂದಿಕ್ಕಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಮಿಸಸ್‌ ಕ್ವೀನ್‌ ಆಫ್‌ ಇಂಡಿಯಾ ಸಾಂಪ್ರದಾಯಿಕ ಸೌಂದರ್ಯ, ಬುದ್ದಿವಂತಿಕೆ ಹಾಗೂ ಸೂಕ್ಷ್ಮತೆ ಆಧಾರಿತ ಸ್ಪರ್ಧೆಯಾಗಿದೆ. ಮಹಿಳೆ ಸಮುದಾಯ, ದೇಶ ಹಾಗೂ ಸಮಕಾಲೀನ ಜೀವನಕ್ಕೆ ನೀಡಿದ ಕೊಡುಗೆಯನ್ನೂ ಪರಿಗಣಿಸಲಾಗುತ್ತದೆ. ಸ್ಪರ್ಧೆಯಲ್ಲಿ ಅರುಣಾ ಅವರು ಮಹಿಳೆಯು ಪ್ರತಿ ಕ್ಷೇತ್ರದಲ್ಲೂ ಪುರುಷರಿಗೆ ಸರಿ ಸಮನಾಗಿರುವುದನ್ನು ಉದಾಹರಣೆ ಸಹಿತ ವಿವರಿಸಿ ಎಲ್ಲರ ಕರತಾಡನಕ್ಕೆ ಪಾತ್ರರಾದರು.

ನವದೆಹಲಿಯ ದಿ ಸೂರ್ಯಾ ಹೊಟೇಲ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಅರುಣಾಗೆ ಗ್ಲೊಬಲ್‌ ಪ್ಲೆಜೆಂಟ್ಸ್‌ ಸಿಇಒ ಶ್ವೇತಾ ಅವರು ಕಿರೀಟ ತೊಡಿಸಿ ಪ್ರಶಸ್ತಿ ಪ್ರದಾನ ಮಾಡಿದರು. ಅರುಣಾ ಅವರು ಕಾಂಗ್ರೆಸ್‌ ಮುಖಂಡ ರಾಜಶೇಖರ ಪಾಟೀಲ ಅಷ್ಟೂರ ಪುತ್ರಿಯಾಗಿದ್ದಾರೆ. ಅವರ ಪತಿ ಪ್ರವೀಣ ತುಂಬಗಿ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್‌ ಆಗಿದ್ದಾರೆ. ಪ್ರಶಸ್ತಿ ದೊರೆತಿದ್ದಕ್ಕೆ ಅಚ್ಚರಿ ಜತೆಗೆ ಅತೀವ ಖುಷಿಯಾಗಿದೆ. ಇದು, ಬೀದರ್‌ ಅಷ್ಟೇ ಅಲ್ಲ, ಇಡೀ ಕರ್ನಾಟಕಕ್ಕೆ ಸಂದ ಗೌರವವಾಗಿದೆ ಎಂದು ಅರುಣಾ ಪ್ರತಿಕ್ರಿಯಿಸಿದರು.