ಪಂಚಮಸಾಲಿಗೆ ಮೀಸಲಾತಿ ನೀಡದಿದ್ದರೆ ಬಿಎಸ್ವೈ ಸಾವು ಖಚಿತ ಎಂದ ಯುವಕನ ವಿರುದ್ಧ ಕೇಸ್ ದಾಖಲು
First Published Feb 7, 2021, 2:16 PM IST
ಬೀದರ್(ಫೆ.07): ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಿಂದನೆ ಮಾಡಿದ ವ್ಯಕ್ತಿಯ ವಿರುದ್ಧ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಂಚಮಸಾಲಿ ಲಿಂಗಾಯತರಿಗೆ-2ಎ ಮೀಸಲಾತಿ ನೀಡದಿದ್ದರೆ ಬಿಎಸ್ವೈ ಸಾವು ಖಚಿತ ಎಂದು ಬಸವರಾಜ್ ನಾಗರಾಳ ಎಂಬ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಎಂದು ತಿಳಿದು ಬಂದಿದೆ.

ಸಿಎಂ ಯಡಿಯೂರಪ್ಪ ಅವರಿಗೆ ನಿಂದನೆ ಮಾಡಿದ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಬೀದರ್‌ನ ಬಿಜೆಪಿ ನಾಯಕ ಘಾಳೆಪ್ಪ ಚಟ್ಟಳ್ಳಿ ಎಂಬುವರು ಬಸವರಾಜ ನಾಗರಾಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಫೆ. 20 ರಂದು ಬಿಎಸ್ವೈ ಸಾವು ಖಚಿತ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಬಸವರಾಜ ನಾಗರಾಳ ಎಂಬ ವ್ಯಕ್ತಿ

ಈ ಸಂಬಂಧ ಬೀದರ್‌ನ ಬಗದಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು