ವಿಜಯಪುರದ ಮಹಿಳಾ ವಿವಿಯಲ್ಲಿ ಕೃತಕ ಬುದ್ಧಿಮತ್ತೆ ನ್ಯೂಸ್‌ ಆ್ಯಂಕರ್‌ ರೆಡಿ..!

ಟಿವಿ ಆರಂಭಿಸಿ ಐದು ವರ್ಷಗಳಲ್ಲಿಯೇ ವಿಭಾಗದ ವಿದ್ಯಾರ್ಥಿನಿಯರು ಇದೀಗ ಪ್ರಾಯೋಗಿಕವಾಗಿ ಕೃತಕ ಬುದ್ಧಿಮತ್ತೆಯ ಸುದ್ದಿ ನಿರೂಪಕಿಯನ್ನು ರೂಪಿಸಿ ನ್ಯೂಸ್‌ ಚಾನೆಲ್‌ ಆರಂಭಿಸುವ ಮೂಲಕ ಮತ್ತೊಂದು ಸಾಧನೆಯ ಮೈಲುಗಲ್ಲು ತಲುಪಿದ್ದಾರೆ. ಆ ಮೂಲಕ ಮತ್ತೊಮ್ಮೆ ಕ್ರಿಯಾಶೀಲತೆಯನ್ನು ಸಾಬೀತುಪಡಿಸಿದ್ದಾರೆ. 

Artificial Intelligence News Anchor Ready in Women's University Vijayapura grg

ರುದ್ರಪ್ಪ ಆಸಂಗಿ

ವಿಜಯಪುರ(ಜು.20): ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ತನ್ನ ಅಕ್ಕ ಟಿವಿಯಲ್ಲಿ ಬುಧವಾರ ಪ್ರಾಯೋಗಿಕವಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸುದ್ದಿ ನಿರೂಪಕಿಯೊಂದಿಗೆ ನ್ಯೂಸ್‌ ಚಾನೆಲ್‌ ಆರಂಭಿಸಿರುವುದು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿನಿಯರ ಸಾಧನೆಗೆ ಮತ್ತೊಂದು ಗರಿ ಮೂಡಿದೆ.

ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿನಿಯರು 2018ರಲ್ಲಿ ಮೊಟ್ಟ ಮೊದಲ ಬಾರಿಗೆ ವಿಶ್ವ ವಿದ್ಯಾಲಯದಲ್ಲಿ ಅಕ್ಕ ಟಿವಿ ಆರಂಭಿಸಿ ವಿಶೇಷ ಸಾಧನೆ ತೋರುವ ಮೂಲಕ ಗಮನ ಸೆಳೆದಿದ್ದರು.

ಮಲೆನಾಡಿಗೂ ಬಂದ್ಳು ಕೃತಕ ಸುಂದರಿ; ಸಹ್ಯಾದ್ರಿ ಟಿವಿ ಚಾನೆಲ್‌ಗೂ ಎಐ ನಿರೂಪಕಿ!

ಟಿವಿ ಆರಂಭಿಸಿ ಐದು ವರ್ಷಗಳಲ್ಲಿಯೇ ವಿಭಾಗದ ವಿದ್ಯಾರ್ಥಿನಿಯರು ಇದೀಗ ಪ್ರಾಯೋಗಿಕವಾಗಿ ಕೃತಕ ಬುದ್ಧಿಮತ್ತೆಯ ಸುದ್ದಿ ನಿರೂಪಕಿಯನ್ನು ರೂಪಿಸಿ ನ್ಯೂಸ್‌ ಚಾನೆಲ್‌ ಆರಂಭಿಸುವ ಮೂಲಕ ಮತ್ತೊಂದು ಸಾಧನೆಯ ಮೈಲುಗಲ್ಲು ತಲುಪಿದ್ದಾರೆ. ಆ ಮೂಲಕ ಮತ್ತೊಮ್ಮೆ ಕ್ರಿಯಾಶೀಲತೆಯನ್ನು ಸಾಬೀತುಪಡಿಸಿದ್ದಾರೆ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿನಿಯರು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಪ್ರಾಯೋಗಿಕವಾಗಿ ಅಕ್ಕ ಟಿವಿಯಲ್ಲಿ ನ್ಯೂಸ್‌ ಬುಲೆಟಿನ್‌ ಅನ್ನು ನಿರ್ಮಿಸಿ ಕೌಶಲ ಮೆರೆದಿದ್ದಾರೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸಹಾಯದಿಂದ ಸುದ್ದಿ ನಿರೂಪಕಿಯ ಧ್ವನಿ ಹಾಗೂ ದೃಶ್ಯವನ್ನು ಸೃಷ್ಟಿಮಾಡಲಾಗಿದೆ.

ನ್ಯೂಸ್‌ ಚಾನೆಲ್‌ನಲ್ಲಿ ಸುದ್ದಿ ನಿರೂಪಕಿಯ ಧ್ವನಿ ಹಾಗೂ ದೃಶ್ಯ ನಿಜ ನಿರೂಪಕಿಯನ್ನು ಮೀರಿಸುವಂತಿದೆ. ವೀಕ್ಷಕರಿಗೆ ಇದು ಕೃತಕ ಬುದ್ಧಿಮತ್ತೆಯ ಸುದ್ದಿ ನಿರೂಪಕಿಯ ಧ್ವನಿ ಹಾಗೂ ದೃಶ್ಯವೆಂದು ಗೊತ್ತಾಗದ ರೀತಿ ಕೌಶಲ್ಯತೆ ಅಳವಡಿಸಿದ್ದಾರೆ.

ಈ ಬುಲೆಟಿನ್‌ ಅನ್ನು ನಾಲ್ಕು ಹಂತಗಳಲ್ಲಿ ನಿರ್ಮಾಣ ಮಾಡಲಾಗಿದೆ. ಮೊದಲ ಹಂತದಲ್ಲಿ ಸಾಂಪ್ರದಾಯಿಕ ವಿಧಾನದಲ್ಲಿ ನ್ಯೂಸ್‌ ಸ್ಕ್ರಿಪ್ಟ್‌ ಬರೆದು ವಿಡಿಯೋ ಫäಟೇಜ್‌ಗಳನ್ನು ರೆಕಾರ್ಡ್‌ ಮಾಡಲಾಗಿದೆ. ಎರಡನೇ ಹಂತದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಗಾರಿಕೆ (ಎಐ) ಯನ್ನು ಬಳಸಿ ಸ್ಕ್ರಿಪ್ಟ್‌ಗೆ ಧ್ವನಿ ನೀಡಲಾಗಿದೆ. ಮೂರನೇ ಹಂತದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಮುದ್ರಿಸಿದ ಧ್ವನಿಗೆ ಮತ್ತೊಂದು ಬುದ್ಧಿಮತ್ತೆ ತಂತ್ರಗಾರಿಕೆಯಿಂದ ವೆಬ್‌ಸೈಟ್‌ನ ಸಹಾಯದಿಂದ ನ್ಯೂಸ್‌ ಆ್ಯಂಕರ್‌ ಅನ್ನು ರಚಿಸಲಾಗಿದೆ. ಕೊನೆ ಹಂತದಲ್ಲಿ ನ್ಯೂಸ್‌ ಆ್ಯಂಕರ್‌, ವಿಡಿಯೋ ಫುಟೇಜ್‌, ಗ್ರಾಫಿಕ್ಸ್‌ ಹಾಗೂ ಹಿನ್ನೆಲೆ ಸಂಗೀತ ಸೇರಿಸಿ ಎಡಿಟ್‌ ಮಾಡಲಾಗಿದೆ.

ಈಗಾಗಲೇ ಕನ್ನಡ ಭಾಷೆಯ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನ್ಯೂಸ್‌ ಆ್ಯಂಕರ್‌ ಅನ್ನು ಕೆಲವೊಂದು ಸುದ್ದಿ ವಾಹಿನಿಗಳು, ಯೂಟ್ಯೂಬ್‌ ವಾಹಿನಿಗಳು ಪರಿಚಯಿಸಿದ್ದು, ಅವುಗಳಲ್ಲಿ ಕೆಲವೊಂದರಲ್ಲಿ ನೈಜ ಹಿನ್ನೆಲೆ ಧ್ವನಿಗೆ ಎಐ ವಿಜ್ಯುವೆಲ್ಸ್‌ ಅನ್ನು ಜೋಡಿಸಲಾಗಿದೆ. ಆದರೆ ಅಕ್ಕ ಟಿವಿಯಲ್ಲಿ ನಿರೂಪಕಿಯ ಧ್ವನಿ ಹಾಗೂ ದೃಶ್ಯ ಎರಡನ್ನೂ ಎಐ ಸಹಾಯದಿಂದ ನಿರ್ಮಾಣ ಮಾಡಿರುವುದು ಒಂದು ವಿಶೇಷವಾಗಿದೆ.

ವಿಜಯಪುರ: ಲೋಕಾಯುಕ್ತ ಡಿವೈಎಸ್ಪಿ ಹೃದಯಘಾತದಿಂದ ಸಾವು

ನೈಜ ಟಿವಿ ನ್ಯೂಸ್‌ ಚಾನೆಲ್‌ಗಳನ್ನು ಮೀರಿಸುವ ಮಹಿಳಾ ವಿಶ್ವವಿದ್ಯಾಲಯದ ಈ ಕೃತಕ ಬುದ್ಧಿಮತ್ತೆ ನ್ಯೂಸ್‌ ಚಾನೆಲ್‌ ನಿಜಕ್ಕೂ ಕ್ರಾಂತಿಕಾರಿ ಹಾಗೂ ಕುತೂಹಲ ಮೂಡಿಸುವ ಚಾನೆಲ್‌ ಆಗಿದೆ. ಗುರುವಾರ ಶುಭಾರಂಭ ಮಾಡಿರುವ ಪ್ರಾಯೋಗಿಕ ನ್ಯೂಸ್‌ ಚಾನೆಲ್‌ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಾರ್ವಜನಿಕರಲ್ಲಿ ಈ ಟಿವಿ ನ್ಯೂಸ್‌ ಟಾನೆಲ್‌ ಕೂಡಾ ಅಷ್ಟೇ ಕೌತುಕ ಮೂಡಿಸಿದೆ.

ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ಓಂಕಾರ ಕಾಕಡೆ ಮಾರ್ಗದರ್ಶನದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಸಂದೀಪ ಹಾಗೂ ಡಾ.ತಹಮೀನಾ ಮತ್ತು ವಿದ್ಯಾರ್ಥಿಯರ ಸತತ ಪರಿಶ್ರಮದಿಂದ ಕೃತಕ ಬುದ್ಧಿಮತ್ತೆ ತಂತ್ರಗಾರಿಕೆಯ ಎಐ ನ್ಯೂಸ್‌ ಚಾನೆಲ್‌ ಸಾಕಾರಗೊಂಡಿದೆ.

Latest Videos
Follow Us:
Download App:
  • android
  • ios