Asianet Suvarna News Asianet Suvarna News

ಬೆಂಗ್ಳೂರಿನ ಟ್ರಾಫಿಕ್‌ ಪರಿಹಾರಕ್ಕೆ ಕೃತಕ ಬುದ್ಧಿಮತ್ತೆ ಅಸ್ತ್ರಂ..!

ರಸ್ತೆಯಲ್ಲಿ ನಡೆಯುವ ಅಪಘಾತ ಅಥವಾ ಯಾವುದೇ ಘಟನೆ ಬಗ್ಗೆ ಗೂಗಲ್ ಮ್ಯಾಪ್ ಅಥವಾ ಇನ್ನಿತರಮ್ಯಾಪ್‌ಗಳ ಮೂಲಕ ಮಾಹಿತಿಯನ್ನು ಕೂಡಲೇ ಸಾರ್ವಜನಿಕರಿಗೆ ತಿಳಿಸುತ್ತದೆ. ಸಂಚಾರ ನಿಯಂತ್ರಣ ಕೇಂದ್ರ (ಟಿಎಂಸಿ) ಇವುಗಳ ಮೇಲೆ ನಿಗಾವಹಿಸಲಾಗುತ್ತದೆ.

Artificial Intelligence for Bengaluru Traffic Solution grg
Author
First Published Jan 14, 2024, 2:28 PM IST

ಬೆಂಗಳೂರು(ಜ.14): ರಾಜಧಾನಿನಲ್ಲಿ ಟ್ರಾಫಿಕ್‌ ನಿವಾರಣೆಗೆ ದೇಶದಲ್ಲೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌) ತಂತ್ರಜ್ಞಾನ ಬಳಸಿಕೊಂಡು ಸಂಚಾರ ನಿರ್ವಹಣೆಗೆ ಪೊಲೀಸರು ಈಗ 'ಅಸ್ಪಂ' ಪ್ರಯೋಗಿಸಿದ್ದಾರೆ.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸಂಚಾರ ಪೊಲೀಸರು ಹಾಗೂ ರಾಜ್ಯ ಸಾರಿಗೆ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ 'ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ' ಕಾರ್ಯಕ್ರಮದಲ್ಲಿ 'ಬೆಂಗಳೂರಿನ ಟ್ರಾಫಿಕ್ ಎಂಜಿನ್'ಗೆ (ಆಸ್ತಂ ಆ್ಯಪ್) ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ತಂತ್ರಜ್ಞಾನ ತುರ್ತುಸೇವೆ ವಾಹನಗಳ (ಆ್ಯಂಬುಲೆನ್ಸ್) ಓಡಾಟ ಹಾಗೂ ಸಂಚಾರ ದಟ್ಟಣೆ ಉಂಟಾದ ಕೂಡಲೇ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿಸುಗಮ ಸಂಚಾರಕ್ಕೆ ನೆರವಾಗಲಿದೆ.

ವಿಶ್ವದ 2ನೇ ಅತ್ಯಂತ ಜನದಟ್ಟಣೆ ನಗರ ಬೆಂಗಳೂರಿಗೆ ಮತ್ತೊಂದು ಕುಖ್ಯಾತಿ, ದೆಹಲಿಯ ಮೀರಿಸಿದ ಉದ್ಯಾನನಗರಿ!

ಅಸ್ವಂ ಕಾರ್ಯನಿರ್ವಹಣೆ ಹೇಗೆ?

ಸಂಚಾರ ದಟ್ಟಣೆ ಮಾಹಿತಿ: ತಮ್ಮ ಠಾಣಾ ವ್ಯಾಪ್ತಿಯ ಯಾವ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾ ಗಿದೆ ಎಂಬ ಮಾಹಿತಿಯನ್ನು ಪ್ರತಿ 15 ನಿಮಿಷಕ್ಕೊಮ್ಮೆ ಇನ್‌ಸ್ಪೆಕ್ಟರ್‌ಗಳಿಗೆ ಎಚ್ಚರಿಕೆ ಸಂದೇಶ (ಅಲರ್ಟ್ ಮೆಸೇಜ್) ರವಾನಿಸುತ್ತದೆ. ಇದನ್ನು ಈ-ಆಟೆಂಗ್ಟನ್ಆ್ಯಪ್‌ನ ಜೊತೆ ಸಂಯೋಜಿಸಲಾಗಿದೆ. ಹಾಗೆ ಜಂಕ್ಷನ್ ಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸರಿಗೆ ಸಹ ನೀಡಲಾಗುತ್ತದೆ. ಹೀಗಾಗಿ ದಟ್ಟಣೆ ಉಂಟಾದ ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿ ವಾಹನಗಳ ಸುಗಮ ಓಡಾಟಕ್ಕೆ ಕ್ರಮವಹಿಸಲಿದ್ದಾರೆ.

ಡ್ಯಾಶ್ ಬೋರ್ಡ್ ಅವಲೋಕನ: 

ರಸ್ತೆಯಲ್ಲಿ ಸಂಚಾರ ದಟ್ಟಣೆ, ವಾಹನಗಳ ಸಂಖ್ಯೆ, ಯಾವ ಮಾದ ರಿಯ ವಾಹನಗಳು ಟ್ರಾಫಿಕ್‌ನಲ್ಲಿ ಸಿಲುಕಿವೆ, ಹೀಗೆ ಕೃತಕ ಬುದ್ದಿಮತ್ತೆಯ ಅಸ್ವಂ ಆ್ಯಪ್ ಬಿಡುಗಡೆ ಸಮಾರಂಭದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾ‌ರ್. ಪ್ರತಿ ಮಾಹಿತಿಯನ್ನು ಅವಲೋಕಿಸಿ ಮಾಹಿತಿ ನೀಡುತ್ತದೆ. ಇದರಿಂದ ಪರಿಣಾಮಕಾರಿ ಸಂಚಾರ ನಿರ್ವಹಣೆಗೆ ನೆರವಾಗಲಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಉಂಟಾಗುವ ಪಟ್ಟಣೆ ಬಗ್ಗೆ ಮುನ್ಸೂಚನೆ ಸಹ ನೀಡಲಿದೆ. ಈ ದತ್ತಾಂಶವು ಸೂಕ್ತ ಸಂಚಾರ ಯೋಜನೆ ರೂಪಿಸಲು ಪೊಲೀಸರಿಗೆ ಅನುಕೂಲವಾಗಲಿದೆ.

ಬಿಓಟೆ ಬಳಕೆ ಘಟನಾ ಸ್ಥಳದ ವರದಿ: 

ರಸ್ತೆಯಲ್ಲಿ ನಡೆಯುವ ಅಪಘಾತ ಅಥವಾ ಯಾವುದೇ ಘಟನೆ ಬಗ್ಗೆ ಗೂಗಲ್ ಮ್ಯಾಪ್ ಅಥವಾ ಇನ್ನಿತರಮ್ಯಾಪ್‌ಗಳ ಮೂಲಕ ಮಾಹಿತಿಯನ್ನು ಕೂಡಲೇ ಸಾರ್ವಜನಿಕರಿಗೆ ತಿಳಿಸುತ್ತದೆ. ಸಂಚಾರ ನಿಯಂತ್ರಣ ಕೇಂದ್ರ (ಟಿಎಂಸಿ) ಇವುಗಳ ಮೇಲೆ ನಿಗಾವಹಿಸಲಾಗುತ್ತದೆ.

ಕಾರ್ಯಕ್ರಮಗಳಿಂದ ಸಂಚಾರ ದಟ್ಟಣೆ: 

ನಗರದ ವಿವಿಧೆಡೆ ನಡೆಯುವ ಕಾರ್ಯಕ್ರಮಗಳಿಂದ ಉಂಟಾಗುವ ಟ್ರಾಫಿಕ್ ಸಮಸ್ಯೆ ಬಗ್ಗೆ ವಿಶ್ಲೇಷಿಸಿ ಅದಕ್ಕೆ ಮುಂದಿನ ದಿನಗಳಲ್ಲಿ ಪರಿಹಾರೋಪಾಯ ಕಂಡುಕೊ ಳ್ಳಲು ನೆರವು ನೀಡಲಿದೆ.

ಆ್ಯಂಬುಲೆನ್ಸ್ ಆ್ಯಪ್: 

ನಗರದಲ್ಲಿ ಸಂಚರಿಸುವ ಆ್ಯಂಬುಲೆನ್ಸ್‌ ಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದೆ. ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಆ್ಯಂಬುಲೆನ್ಸ್‌ ಗಳನ್ನು ನೋಂದಾಯಿಸಿಕೊಂಡು ಅವು ಗಳು ಎಲ್ಲಿಂದ ಮತ್ತು ಎಲ್ಲಿಗೆ ಹೋಗಬೇಕು ಎಂಬ ಮಾಹಿತಿಯನ್ನು ಪಡೆಯಲಿದೆ. ಸಂಚಾರ ದಟ್ಟಣೆ ಯಲ್ಲಿ ಯಾವುದೇ ಆ್ಯಂಬುಲೆನ್ಸ್ ಎರಡು ನಿಮಿಷ ಸಿಲುಕಿದರೆ ಕೂಡಲೇ ಈ ಆ್ಯಪ್ ಮೂಲಕ ಎಸ್‌ಓಎಸ್ ಬಟನ್ ಆ್ಯಕ್ಟಿವೇಟ್ ಆಗಿ ಕ್ಷಣದಲ್ಲಿ ಆ್ಯಂಬುಲೆನ್ಸ್ ಸಂಚಾರಕ್ಕೆ ಅವಕಾಶ ಕಲ್ಪಿಸುತ್ತದೆ.

ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಹೊಸ ತಂತ್ರಜ್ಞಾನ, ಪೊಲೀಸರ ಜೊತೆ ಕೈಜೋಡಿಸಿದ NMIT

ಡ್ರೋನ್ ಕ್ಯಾಮೆರಾ ಬಳಕೆ: 

ನಗರದ ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಪೀಕ್ ಅವರ್‌ಗಳ ಸಂಚಾರನಿರ್ವಹಣೆಗೆ 10 ಡೋನ್ ಕ್ಯಾಮೆರಾಗಳನ್ನು ಬಳಸಲಾಗುತ್ತದೆ. ಇವುಗಳನ್ನು ಟಿಎಂಸಿ ನೇರ ಪ್ರಸಾರ ದಲ್ಲಿ ವೀಕ್ಷಿಸಿ ಮಾಹಿತಿ ಪಡೆಯಬಹುದು.

ನೆದರ್‌ಲ್ಯಾಂಡ್‌ ಕಂಪನಿ ನೆರವು

ಸಂಚಾರ ಸಮಸ್ಯೆಗೆ ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಜಂಟಿ ಆಯುಕ್ತ (ಸಂಚಾರ) ಎಂ.ಎನ್. ಅನುಚೇತ್ ಅವರು, ಎಐ ತಂತ್ರಜ್ಞಾನವನ್ನು ಸಂಚಾರ ನಿರ್ವಹಣೆಗೂ ಸಹ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ನೆದರ್‌ಲ್ಯಾಂಡ್ ಮೂಲದ ಆರ್ಕೆಡ್ಸ್ ಕಂಪನಿಯ ಸಹಕಾರದಲ್ಲಿ ಆಸ್ತ್ರಂ (ಆ್ಯಕ್ಷನಲ್ ಇಂಟೆಲಿಜೆನ್ಸಿ ಫಾರ್‌ ಸಸ್ಟ್ಐಬಲ್‌  ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌) ಆಪ್‌ ಅನ್ನು ಅಭಿವೃದ್ಧಿಪಡಿಸಿದ್ದರು.  ಸಂಚಾರ ನಿರ್ವಹಣೆಗೆ ಆ್ಯಪ್ ಅಬ್ಬಿದ್ಧಿಪಡಿಸುವ ಆರ್ಕಿಡ್ಸ್ ಕಂಪನಿ, ಈಗಾಗಲೇ ಹೈದರಾಬಾರ್ ಪೊಲೀಸರಿಗೆ ಸಹ ಪ್ರತ್ಯೇಕ ಆ್ಯಪ್ ರೂಪಿಸಿದೆ. ಆದರೆ ಎಬ ತಂತ್ರಜ್ಞಾನ ಬಳಕೆ ಮಾತ್ರ ಬೆಂಗಳೂರಿನಲ್ಲಿ ಮಾತ್ರವೇ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios