Asianet Suvarna News Asianet Suvarna News

Vijayapura: ಜಾತ್ಯಾತೀತ ಇಂಚಗೇರಿ ಮಠಕ್ಕೆ ವಿದೇಶಿ ಭಕ್ತರ ಆಗಮನ: ಸ್ವಾತಂತ್ರ್ಯಕ್ಕೆ ಹೋರಾಟದಲ್ಲೂ ಸೇವೆ

• ಉ‌‌.ಕರ್ನಾಟಕದ ಜಾತ್ಯಾತೀತ ಮಠಕ್ಕೆ ಬಂತು ಫಾರಿನ್ ಭಕ್ತರ ದಂಡು..!
• ಇಂಚಗೇರಿ ಮಠಕ್ಕೆ 10ಕ್ಕು ಅಧಿಕ ದೇಶಗಳಿಂದ ಬರ್ತಾರೆ ಭಕ್ತರು..!
•  ಮಠದ ತತ್ವಾದರ್ಶಕ್ಕೆ ವಿದೇಶಿಗರೆ ಫಿದಾ..! 

Arrival of Foreign Devotees to Secular Inchageri Mutt Service in Freedom Struggle sat
Author
First Published Jan 25, 2023, 3:11 PM IST

ವರದಿ- ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್
ವಿಜಯಪುರ (ಜ.25): ನಮ್ಮ ದೇಶದಲ್ಲಿ ಜಾತಿಗೊಂದರಂತೆ ಮಠಗಳಿವೆ. ಆದರೆ ವಿಜಯಪುರದಲ್ಲಿರೋ ಈ ಮಠ ಪಕ್ಕಾ ಜಾತ್ಯಾತೀತ ಮಠ. ಈ ಮಠದ ಆದರ್ಶಗಳಿಗೆ ಮೆಚ್ಚಿರುವ ವಿದೇಶಿಗರು ಫಿದಾ ಆಗಿದ್ದಾರೆ. ವರ್ಷಕ್ಕೊಮ್ಮೆ ನಡೆಯುವ ಮಾಘ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕನ್ನಡ, ಮರಾಠಿ ಭಾಷೆಗಳಲ್ಲಿ ಭಜನೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ತಂಡೋಪ ತಂಡವಾಗಿ 10ಕ್ಕು ಅಧಿಕ ದೇಶಗಳಿಂದ ಬರುವ ಭಕ್ತರು ಮಠದಲ್ಲಿ ಗುರುಗಳ ಗದ್ದುಗೆ ದರ್ಶನ ಮಾಡ್ತಾರೆ. ಆರತಿ ಮಾಡಿ, ಹಣೆಗೆ ನಾಮ ಧರಿಸಿ ಸದ್ಗುರು ಸಮರ್ಥ ಭಾಹುಸಾಹೇಬ ಮಹಾರಾಜರಿಗೆ ಜೈಕಾರ ಹಾಕ್ತಾರೆ..

ನಮ್ಮ ದೇಶದಲ್ಲಿರೋ ಸಾವಿರಾರು ಮಠಗಳಲ್ಲಿ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಇಂಚಗೇರಿ ತುಂಬಾನೇ ಡಿಪ್ರೆಂಟ್. ನಾಡಿನ ಮೂಲೆ ಮೂಲೆಗೂಂದರಂತೆ ಜಾತಿಗೊಂದು ಮಠಗಳು, ಪೀಠಗಳು ಹುಟ್ಟಿಕೊಳ್ತಿರೋದರ ಮಧ್ಯೆ ಇಂಚಗೇರಿ ಮಠ ಪಕ್ಕಾ ಜಾತ್ಯಾತೀತ ಮಠ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಧ್ಯ ಮಠದ ತತ್ವಾದರ್ಶಗಳಿಗೆ ಫೀದಾ ಆಗಿರೋ ವಿದೇಶಿಗರು ಇಲ್ಲಿ ಪ್ರತಿ ವರ್ಷ ನಡೆಯುವ ಮಾಘ ಸಪ್ತಾಹದಲ್ಲಿ ಪಾಲ್ಗೊಳ್ತಾರೆ. ಬ್ರೆಜಿಲ್‌ ದೇಶದಿಂದ ಆಗಮಿಸಿ ಪರ್ನಾಂಡೋ ಎನ್ನುವ ಮಠದ ಶಿಷ್ಯ ತಮ್ಮ ತಂಡದ ಜೊತೆಗೆ ಗುರುಗಳ ಗದ್ದುಗೆಯ ದರ್ಶನ ಪಡೆದಿದ್ದಾನೆ.

ಇದನ್ನೂ ಓದಿ- Vijayapura: ದ್ರಾಕ್ಷಿ ಬೆಳೆ ರಕ್ಷಣೆಗೆ ಹೊಸ ಅಸ್ತ್ರ ಹುಡುಕಿಕೊಂಡ ರೈತರು: ಹಕ್ಕಿಗಳ ಕಾಟಕ್ಕೆ ಸಿಕ್ತು ಮುಕ್ತಿ

ಹತ್ತಾರು ದೇಶಗಳಿಂದ ಭಕ್ತರ ಆಗಮನ: ಪ್ರತಿ ವರ್ಷ ಮಾಘ ಸಪ್ತಾಹದಂದು 10ಕ್ಕು ಅಧಿಕ ದೇಶಗಳಿಂದ ವಿದೇಶಿ ಭಕ್ತರು ಬರ್ತಾರೆ. ಜರ್ಮನ್‌, ರಷ್ಯಾ, ಅಮೆರಿಕಾ, ಇಟಲಿ ಸೇರಿದಂತೆ ಹಲವು ದೇಶಗಳಿಂದ ಮಠಕ್ಕೆ ಆಗಮಿಸುತ್ತಾರೆ. ವಿಮಾನಗಳ ಮೂಲಕ ಮುಂಬೈಗೆ ಆಗಮಿಸಿ, ಅಲ್ಲಿರುವ ಇಂಚಗೇರಿ ಸಾಂಪ್ರದಾಯದ ಭಕ್ತರ ಜೊತೆಗೂಡಿ ಇಂಚಗೇರಿಗೆ ಆಗಮಿಸುತ್ತಾರೆ. ಮಠದ ನೆಲದಲ್ಲಿ ಅಡ್ಡಾಡಿ ಗುರುಗಳ ಗದ್ದುಗಗಳಿಗೆ ಭಕ್ತಿಯಿಂದ ನಮಿಸುತ್ತಾರೆ.

ಕನ್ನಡ-ಮರಾಠಿ ಭಾಷೆಯಲ್ಲಿ ಭಜನೆ: ಇನ್ನೊಂದು ವಿಶೇಷ ಅಂದ್ರೆ ಇಲ್ಲಿ ಬರುವ ಫಾರಿನ್‌ ಭಕ್ತರು ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿರುವ ಇಂಚಗೇರಿ ಸಾಂಪ್ರದಾಯದ ಭಜನೆ, ಆರತಿ ಪದಗಳನ್ನ ಅಚ್ಚುಕಟ್ಟಾಗಿ ಹಾಡ್ತಾರೆ. ಆರಂಭದಲ್ಲಿ ಇಂಗ್ಲಿಷ್‌, ಫ್ರೆಂಚ್‌ ಭಾಷೆಯಲ್ಲಿ ಮಠದ ಆರತಿ ಪದಗಳನ್ನ ಬರೆದಿಟ್ಟುಕೊಂಡು ಅವುಗಳನ್ನ ಕಂಠಪಾಠ ಮಾಡ್ತಾರೆ ಬಳಿಕ ನಿತ್ಯವು ಗುರುಗಳ ಪೋಟೊಗಳ ಎದುರು ಆರತಿ ಹಚ್ಚಿ ಕನ್ನಡ-ಮರಾಠಿ ಭಜನೆ, ಆರತಿ ಪದಗಳನ್ನ ಹಾಡುತ್ತಾರೆ. ಮರಾಠಿ ಭಾಷೆಯಲ್ಲಿರುವ ರಾಮದಾಸ ಮಹಾರಾಜರು ಬರೆದ ಶ್ರೀಮದ್‌ ಧಾಸಭೋದ ಗ್ರಂಥವನ್ನ ತಮ್ಮ ಭಾಷೆಗಳಿಗೆ ತರ್ಜುಮೆ ಮಾಡಿಸಿಕೊಂಡು ಪಠಣೆ ಮಾಡ್ತಾರೆ.

ನೆಲದ ಮೇಲೆ ಕುಳಿತು ಪ್ರಸಾದ ಸೇವನೆ: ಇನ್ನು ಇಲ್ಲಿ ಬರುವ ಫಾರಿನ್ ಭಕ್ತರು ನೆಲದ ಮೇಲೆ ಕುಳಿತೆ ಪ್ರಸಾದ ಸ್ವೀಕರಿಸುತ್ತಾರೆ. ಮಠದಲ್ಲಿ ಮಾಡುವ ಗೋಧಿ ಸಜ್ಜಕ, ಅನ್ನಾ ಸಾಂಬಾರ್ ಸವಿಯುತ್ತಾರೆ. ವಿಶೇಷ ಅಂದ್ರೆ ಮಠದ ಅಂಗಳದಲ್ಲಿ ಪ್ರಸಾದಕ್ಕೆ ವ್ಯವಸ್ಥೆ ಮಾಡಿದ ಜಾಗದಲ್ಲೆ ಕುಳಿತು ಊಟ ಮಾಡ್ತಾರೆ ಅನ್ನೋದು. ಇದೀಷ್ಟೆ ಅಲ್ಲ. 500 ವರ್ಷಗಳ ಹಿಂದೆ ಸ್ಥಾಪನೆಯಾದ ಈ ಮಠದ ಪ್ರತಿಯೊಂದು ಸಪ್ತಾಹಗಳಲ್ಲಿ ಹಿಂದು-ಮುಸ್ಲಿಂ, ಕ್ರಿಸ್ತಿಯನ್, ದಲಿತರು ಯಾವ ಬೇದ-ಬಾವವು ಇಲ್ಲದೆ ಪಾಲ್ಗೊಂಡು ಗುರುಗಳ ಗದ್ದುಗೆಗಳಿಗೆ ಪೂಜೆ ಸಲ್ಲಿಸುತ್ತಾರೆ. ಇನ್ನು ಈ ಮಠಕ್ಕೆ ಈ ವರೆಗೆ ಲಕ್ಷಕ್ಕು ಅಧೀಕ ಅಂತರ್ ಧರ್ಮಿಯ, ಅಂತರ್ ಜಾತಿಯ ಮದುವೆಗಳು ನಡೆದಿವೆ.

ವಿಜಯಪುರ ಸಿದ್ದರಾಮೇಶ್ವರ ಜಾತ್ರೆ: ಕಂಕಣ ಭಾಗ್ಯ ಕರುಣಿಸುವ ನಂದಿಕೋಲು

ಇಂಚಗೇರಿ ಮಠಕ್ಕು ಫಾರಿನರ್ಸ್‌ ಗು ಹೇಗೆ ಸಂಬಂಧ..!? : ಇಂಚಗೇರಿ ಮಠ ಎಂದರೆ ಇದರು ಗುರು-ಶಿಷ್ಯ ಪರಂಪರೆಯ ಮಠ. ಈ ಮಠದಲ್ಲಿ 200 ವರ್ಷಗಳ ಹಿಂದೆ ಇದ್ದ ಭಾಹುಸಾಹೇಬ್‌ ಮಹಾರಾಜರಿಗೆ ಸಿದ್ದರಾಮೇಶ್ವರ ಮಹಾರಾಜರು ಶಿಷ್ಯರಾಗಿದ್ದರು, ಇವರಿಗೆ ನಿಸರ್ಗದತ್ತ ಮಹಾರಾಜರು ಶಿಷ್ಯರಾದ್ರು, ಬಳಿಕ ಇವರ ಶಿಷ್ಯರಾದ ರಣಜೀತ್‌ ಮಹಾರಾಜರು ಇಂಚಗೇರಿ ಸಾಂಪ್ರದಾಯದ ತತ್ವಾದರ್ಶನಗಳನ್ನ ವಿದೇಶಗಳಲ್ಲು ಪ್ರಚಾರ ಮಾಡಿದರು. ಜರ್ಮನ್‌, ಯು.ಕೆ, ಯು.ಎಸ್‌, ಬ್ರೆಜಿಲ್‌, ರಷ್ಯಾ, ಇಟಲಿ ಸೇರಿದಂತೆ ನಾನಾ ದೇಶಗಳಿಗೆ ಸುತ್ತಾಡಿ ಅಲ್ಲಿ ಇಂಚಗೇರಿ ಸಾಂಪ್ರದಾಯದ ಭಕ್ತಿ ಪ್ರಚಾರ ಮಾಡಿದರು. ಮಠದ ತತ್ವಾದರ್ಶನಗಳನ್ನ ಮೆಚ್ಚಿದ ಅದೇಷ್ಟೋ ವಿದೇಶಿಗರು ರಣಜೀತ್‌ ಮಹಾರಾಜರ ಶಿಷ್ಯರಾದ್ರು. ಮಠದ ಶಿಷ್ಯರಾದವರ ವಂಶಜರು ಇಂದಿಗು ಇಂಚಗೇರಿ ಮಠಕ್ಕೆ ನಡೆದುಕೊಳ್ತಾರೆ. ಪ್ರತಿ ವರ್ಷ ಮಾಘ ಸಪ್ತಾಹದಂದು ಇಂಚಗೇರಿ ಮಠಕ್ಕೆ ಆಗಮಿಸಿ ಸದ್ಗುರು ಸಮರ್ಥ ಭಾಹುಸಾಹೇಬ್‌ ಮಹಾರಾಜರ ಗದ್ದುಗೆಯ ದರ್ಶನ ಮಾಡ್ತಾರೆ.

ರಷ್ಯಾ ಸಮ್ಮೇಳನದಲ್ಲಿ ಭಾರತ ಪ್ರತಿನಿಧಿಸಿದ್ದ ಇಂಚಗೇರಿ ಮಠ:  ಇನ್ನು ಮಠದ 7ನೇ ಧರ್ಮಾಧಿಕಾರಿಗಳಾಗಿದ್ದ ಗುರುಪುತ್ರೇಶ್ವರ ಮಹಾರಾಜರು 25 ವರ್ಷಗಳ ಹಿಂದೆ ರಷ್ಯಾ ದೇಶದ ಜುಕೋಸ್ಲೋವಾಕಿಯಾದ ಪ್ರಾಗ ನಗರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದರು. ಹಾಗೇ ವಿಶ್ವದ ನಾನಾ ದೇಶಗಳ ಪರ್ಯಟನೆ ನಡೆಸಿದ್ದರು. ಹೀಗಾಗಿ ಮಠದ ತತ್ವಾದರ್ಶ, ಸಿದ್ದಾಂತಗಳಿಗೆ ಮನಸೋತ ಅದೇಷ್ಟೋ ವಿದೇಶಿಗರು ಇಂದಿಗು ಸಾಂಪ್ರದಾಯ ಮೆಚ್ಚಿ ಕೊಂಡಾಡುತ್ತಿದ್ದಾರೆ. ರಷ್ಯಾದೇಶದಲ್ಲಿರುವ ಗುರುಪುತ್ರೇಶ್ವರ ಮಹಾರಾಜರು ಶಿಷ್ಯರು ಆಗಾಗ್ಗ ಇಂಚಗೇರಿ ಮಠಕ್ಕೆ ಭೇಟಿಕೊಡುತ್ತಲೆ ಇರ್ತಾರೆ.

ಗಾಂಧೀಜಿ ಮೊಮ್ಮಗ ಶ್ರೀಮಠದ ಶಿಷ್ಯ: ಮಹಾತ್ಮಾ ಗಾಂಧೀಜಿಯವರ ಸ್ವಂತ ಮೊಮ್ಮಗ ವರುಣಗಾಂಧಿ ಇಂಚಗೇರಿ ಸಾಂಪ್ರದಾಯದ ಶಿಷ್ಯ. ಗುರುಪುತ್ರೇಶ್ವರ ಮಹಾರಾಜರು ಇದ್ದಾಗ ಸ್ವತಃ ವರುಣಗಾಂಧಿ ಇಂಚಗೇರಿ ಮಠಕ್ಕೆ ಭೇಟಿ ನೀಡಿದ್ದರು. ಭೇಟಿ ನೀಡಿ ತೆರಳಿದ ಬಳಿಕ ವಿದೇಶಗಳಲ್ಲಿ ಅತ್ಯಧಿಕ ಪ್ರಸಾರವಿದ್ದ ದಿ ಇಂಪ್ರೀಂಟ್‌ ಎನ್ನುವ ಇಂಗ್ಲಿಷ್‌ ಪತ್ರಿಕೆಯಲ್ಲಿ ಇಂಚಗೇರಿ ಮಠ, ಇಲ್ಲಿನ ಸಂಪ್ರದಾಯ, ತತ್ವಾದರ್ಶಗಳ ಬಗ್ಗೆ ಬರೆದಿದ್ದರು. ಈ ಮೂಲದಿಂದಲು ವಿದೇಶಿಗರು ಇಂಚಗೇರಿ ಮಠಕ್ಕೆ ಭಕ್ತರಾಗಿದ್ದಾರೆ.

ದೇಶದ ಸ್ವಾತಂತ್ರ್ಯಕ್ಕಾಗಿಯೂ ಹೋರಾಡಿದ ಮಠ: ಅಷ್ಟೆ ಅಲ್ಲ ದೇಶದ ಸ್ವಾತಂತ್ರ್ಯ ಹೋರಾಟದಲ್ಲು ಇಂಚಗೇರಿ ಮಠದ ಪಾತ್ರ ಬಹುದೊಡ್ಡದಾಗಿದೆ. 1942 ರ ಅವಧಿಯಲ್ಲಿ ಮಠದ ಪೀಠಾಧಿಕಾರಿಗಳಾಗಿದ್ದ ಮಾಧವಾನಂದ ಶ್ರೀಗಳು ಭಾರತ ಸ್ವಾತಂತ್ರ್ಯ ಹೋರಾಟಕ್ಕಾಗಿ ಸಾವಿರಾರು ಭಕ್ತರನ್ನ ಕಟ್ಟಿಕೊಂಡು ಸ್ವಾತಂತ್ರ್ಯ ಚಳುವಳಿ, ಕರ್ನಾಟಕ ಏಕಿಕರಣ, ಗೋವಾ ವಿಮೋಚನೆಗಾಗಿ ಹೋರಾಟ ಮಾಡಿದ್ದರು. ಮಹಾರಾಷ್ಟ್ರದ ಜತ್ ತಾಲೂಕಿನ ಸೊನ್ಯಾಳ, ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮಗಳಲ್ಲಿ ಆರ್ಮ್ ಫ್ಯಾಕ್ಟರಿಗಳನ್ನ ಆರಂಭಿಸಿ ಸ್ವಾತಂತ್ರ್ಯ ಹೋರಾಟಗಾರರಿಗೆ ಬಂದೂಕುಗಳನ್ನ ನೀಡಿ ಬ್ರೀಟಿಷರ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಭಕ್ತರೊಂದಿಗೆ 30 ಕ್ಕೂ ಅಧಿಕ ಬಾರಿ ಜೈಲು ಸೇರಿದ್ದರು.

Follow Us:
Download App:
  • android
  • ios