Asianet Suvarna News Asianet Suvarna News

ಹೇಮಾವತಿ ಲಿಂಕ್ ಚಾನೆಲ್ ಯೋಜನೆಗೆ ಅನುಮೋದನೆ: ರೈತರ ಬಹುವರ್ಷಗಳ ಬೇಡಿಕೆಗೆ ಮನ್ನಣೆ

ಮಾಗಡಿ ತಾಲೂಕಿನ ಶ್ರೀರಂಗ ಏತ ನೀರಾವರಿ ಯೋಜನೆಯಡಿ ಕುಡಿಯುವ ನೀರಿನ ಯೋಜನೆಯ ಸಲುವಾಗಿ ಮಾಗಡಿ ತಾಲೂಕಿನ ಕೆರೆಗಳಿಗೆ ಹೇಮಾವತಿ ನದಿ ನೀರನ್ನು ಹರಿಸಲು ಎರಡು ಹಂತದಲ್ಲಿ ಲಿಂಕ್ ಕೆನಾಲ್ ಯೋಜನೆಗೆ 995 ಕೋಟಿ ರು.ಗಳ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. 
 

Approval for Hemavati Link Channel Project At Ramanagaara District gvd
Author
First Published Jan 7, 2024, 12:08 PM IST

ಗಂ. ದಯಾನಂದ ಕುದೂರು

ಕುದೂರು (ಜ.07): ಮಾಗಡಿ ತಾಲೂಕಿನ ಶ್ರೀರಂಗ ಏತ ನೀರಾವರಿ ಯೋಜನೆಯಡಿ ಕುಡಿಯುವ ನೀರಿನ ಯೋಜನೆಯ ಸಲುವಾಗಿ ಮಾಗಡಿ ತಾಲೂಕಿನ ಕೆರೆಗಳಿಗೆ ಹೇಮಾವತಿ ನದಿ ನೀರನ್ನು ಹರಿಸಲು ಎರಡು ಹಂತದಲ್ಲಿ ಲಿಂಕ್ ಕೆನಾಲ್ ಯೋಜನೆಗೆ 995 ಕೋಟಿ ರು.ಗಳ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಈ ಭಾಗದ ಜನರ ಬಹುವರ್ಷಗಳ ಬೇಡಿಕೆಯಾದ ಹೇಮಾವತಿ ಕಡೆಗೂ ಸರ್ಕಾರದಿಂದ ಅನುದಾನಕ್ಕೆ ಮಂಜೂರಾತಿ ದೊರೆತಿದ್ದು, ತಾಲೂಕಿನ ನೀರಿನ ಬವಣೆಗೆ ಪರಿಹಾರ ದೊರಕುವ ಆಶಾಭಾವನೆ ಮೂಡಿಸಿದೆ.

995 ಕೋಟಿ ಮಂಜೂರು: ತುಮಕೂರು ಶಾಖಾ ನಾಲೆಯ ಎಕ್ಸ್‌ಪ್ರೆಸ್ ಚಾನೆಲ್ ಮೂಲಕ 70 ಕಿ.ಮೀ. ದೂರದಿಂದ ಗುರುತ್ವಾಕರ್ಷಣೆ ಪೈಪ್‌ಲೈನ್ ಅಳವಡಿಸುವ ಮೂಲಕ ಶ್ರೀರಂಗ ಕೆರೆ ತುಂಬಿಸುವ ಯೋಜನೆಯ ಸಲುವಾಗಿ 17ಕಿ.ಮೀ.ವರೆಗಿನ 2ನೇ ಹಂತಕ್ಕೆ 490 ಕೋಟಿ ರು.. ಮೊತ್ತದ ವಿವರವಾದ ಯೋಜನಾ ವರದಿಗೆ ಹಣ ಬಿಡುಗಡೆ ಮಾಡಲಾಗಿದೆ. ನಬಾರ್ಡ್ ಯೋಜನೆಯ ಅಡಿಯಲ್ಲಿ ಆರ್‌ಐಡಿಎಫ್ ಟ್ರಂಚ್ 29ರಲ್ಲಿ ಮಾಗಡಿ ಮತ್ತು ಕುಣಿಗಲ್ ಕುಡಿಯುವ ನೀರು ಯೋಜನೆಯಡಿ 35.54 ಕಿ.ಮೀ. ಕಾಮಗಾರಿಗೆ 495.8 ಕೋಟಿ ರು.ಗಳನ್ನು ಎರಡನೇ ಹಂತದಲ್ಲಿ ಆಡಳಿತಾತ್ಮಕ ಅನುಮೋದನೆಯನ್ನು ನೀಡುವ ಜತೆಗೆ ಎರಡು ಹಂತದ ಕಾಮಗಾರಿಗೆ ಒಟ್ಟು 995 ಕೋಟಿ ರು. ಅನುದಾನಕ್ಕೆ ಆಡಳಿತ್ಮಾಕ ಅನುಮೋದನೆ ದೊರತಿದೆ.

ರಾಜಕೀಯ ಚರ್ಚೆ ನಡೆಸಲು ಎಚ್‌ಡಿಕೆ ಭೇಟಿಯಾಗಿದ್ದೆ: ಸಿ.ಪಿ.ಯೋಗೇಶ್ವರ್‌

ಏನಿದು ಯೋಜನೆ?: ಕುಣಿಗಲ್ ಹೆಬ್ಬೂರು ನಡುವೆ ಹೇಮಾವತಿ ಎಡದಂಡೆ ನಾಲೆಯ 180-200 ಕಿ.ಮೀ. ಅಂತರದಲ್ಲಿ ಒಂದು ಏತ ನೀರಾವರಿಯನ್ನು ರೂಪಿಸಿ ಮಾಗಡಿ ತಾಲೂಕಿಗೆ ಕುಡಿಯವ ನೀರಿಗಾಗಿ ಸರ್ಕಾರಕ್ಕೆ 1996ರಲ್ಲಿ ಉನ್ನತ ಮಟ್ಟದ ಸಮಿತಿ ಶಿಫಾರಸ್ಸು ಮಾಡಿತ್ತು. ಈ ಸಮಿತಿಯಲ್ಲಿ ಮಾಗಡಿಯ ಎಚ್.ಎಂ.ರೇವಣ್ಣ, ಟಿ.ಎ.ರಂಗಯ್ಯ ಮತ್ತು ಎಚ್.ಸಿ.ಬಾಲಕೃಷ್ಣ ಸದಸ್ಯರಾಗಿದ್ದರು. ಮಾಗಡಿ ತಾಲೂಕಿನಲ್ಲಿ ಬರುವ ಕೆರೆಗಳಿಗೆ 103 ಕ್ಯುಸೆಕ್‌ ನೀರನ್ನು ಹೇಮಾವತಿ ನದಿಯಿಂದ ಹರಿಸಬೇಕು. ತುಮಕೂರು ನಾಲಾ ಶಾಖೆಯ ಕಿಮೀ 90 ರಿಂದ 120 ಮೀಟರ್ ಎತ್ತರಕ್ಕೆ ಲಿಪ್ಟ್ ಮಾಡಿಕೊಡುವ ಯೋಜನೆಯನ್ನು ಸಿದ್ಧಪಡಿಸಿ ಸರ್ಕಾರದಿಂದ ತಾತ್ವಿಕ ಒಪ್ಪಿಗೆಯನ್ನು ಪಡೆದು ಈ ಯೋಜನೆಗೆ ಶ್ರೀರಂಗ ಏತ ನೀರಾವರಿ ಯೋಜನೆಯೆಂದು ಹೆಸರಿಡಲಾಯಿತು.

ಬದಲಾದ ಸನ್ನಿವೇಶದಲ್ಲಿ 167 ಕ್ಯುಸೆಕ್ಸ್‌ ನೀರು ಮಾಗಡಿ ತಾಲೂಕಿಗೆ ಹರಿಯಬೇಕೆಂದು ತೀರ್ಮಾನವಾಗಿ 240 ಕಿ.ಮೀ. ನೀರು ಹರಿಯಬೇಕಿತ್ತು. ಆದರೆ ಸಂಪೂರ್ಣ ಯೋಜನೆ ಜಾರಿಗೆ ಆಡಳಿತಾತ್ಮಕ ಅನಮೋದನೆ ದೊರೆತಿರಲಿಲ್ಲ. ಆದರೆ, ಇದೀಗ ಸಂಪುಟಸಭೆಯಲ್ಲಿ ಯೋಜನೆಗೆ ಆಡಳಿತ್ಮಾಕ ಮಂಜೂರಾತಿ ದೊರೆತಿದ್ದು, ಮಾಗಡಿಯ 186ಕ್ಕೂ ಹೆಚ್ಚು ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸಲು ಕರ್ನಾಟಕ ಸರ್ಕಾರ ಹಣ ಬಿಡುಗಡೆ ಮಾಡಿರುವುದನ್ನು ಸಚಿವ ಎಚ್.ಕೆ.ಪಾಟೀಲ್ ಪ್ರಕಟಿಸಿದ್ದಾರೆ. ಆದಷ್ಟು ಬೇಗ ಯೋಜನೆ ಪೂರ್ಣಗೊಂಡು ಈ ಭಾಗದ ನೀರಿನ ಸಮಸ್ಯೆ ಪರಿಹಾರವಾಗಲಿ ಎಂದು ತಾಲೂಕಿನ ಜನ ಆಶಿಸಿದ್ದಾರೆ.

ಶ್ರೀರಂಗ ಯೋಜನೆಗೂ ಈಗ ಬಿಡುಗಡೆಯಾಗಿರುವ ಯೋಜನೆಗೂ ಸಂಬಂಧ ಇಲ್ಲ. ಇದು ಎಕ್ಸ್‌ಪ್ರೆಸ್ ಯೋಜನೆ ಕಾಮಗಾರಿಯದ್ದು. ನೀರು ಬಳಸಿಕೊಂಡು ಬರುತ್ತದೆ. ಅದಕ್ಕಾಗಿ ನೇರವಾಗಿ ಬರುವ ಯೋಜನೆ ಇದಾಗಿದೆ. ಮಾಗಡಿ ಸಮೀಪದಲ್ಲಿರುವ ಕುಣಿಗಲ್ಲಿನ ಕೆರೆಗೆ ಈಗಾಗಲೇ ಹೇಮಾವತಿ ನದಿ ನೀರು ಬಂದಿದೆ. ಅಲ್ಲಿಂದ ಮಾಗಡಿಗೆ ನೀರು ತರಲು ಕಷ್ಟ ಏಕೆ ಪಡಬೇಕು. ಎಕ್ಸ್‌ಪ್ರೆಸ್ ಚನಾಲ್‌ಗೆ ಹಣ ಮಂಜೂರಾತಿ ಮಾಡಬೇಕೆಂದು ಈ ಹಿಂದಿನ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಹೇಮಾವತಿ ಸುಲಭವಾಗಿ ನೀರು ಹರಿಸುವ ಕೆಲಸಕ್ಕೆ ಚಾಲನೆ ನೀಡಬೇಕಿತ್ತು. ಸಣ್ಣ ಪುಟ್ಟ ತೊಂದರೆಗಳಿತ್ತು. ಅದನ್ನು ಸರಿಪಡಿಸಿಕೊಂಡರೆ ಶೀಘ್ರವಾಗಿ ಮಾಗಡಿ ಕೆರೆಗಳಿಗೆ ಹೇಮೆ ಹರಿಯುತ್ತಾಳೆ. ಅದನ್ನು ಬಿಟ್ಟು ಈ ಯೋಜನೆಗೆ 995 ಕೋಟಿ ಹಣಕ್ಕೆ ಒಪ್ಪಿಗೆ ನೀಡಿರುವುದು ನೋಡಿದರೆ ಇದೊಂದು ದುಡ್ಡು ಹೊಡೆಯುವ ಯೋಜನೆಯಂತೆ ಕಾಣುತ್ತಿದೆ.
-ಎ.ಮಂಜುನಾಥ್, ಮಾಜಿ ಶಾಸಕ

ಶ್ರೀಕಾಂತ್ ಪೂಜಾರಿ ಒಬ್ಬನೇನ ಹಿಂದೂ?: ಸಚಿವ ಪರಮೇಶ್ವರ್

ಚುನಾವಣೆ ವೇಳೆ ಮಾಗಡಿ ಕೆರೆಗಳಿಗೆ ಹೇಮೆಯನ್ನು ಹರಿಸುತ್ತೇವೆ ಎಂದು ಭರವಸೆ ನೀಡಿದ್ದೆವು. ಎಕ್ಸ್‌ಪ್ರೆಸ್ ಚೆನಾಲ್ ಯೋಜನೆಗೆ ಸರ್ಕಾರ 995 ಕೋಟಿ ರು.ಗಳನ್ನು ಎರಡು ಹಂತದಲ್ಲಿ ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ. 170 ಕಿ.ಮೀ. ದೂರದಿಂದ ಬಳಸಿಕೊಂಡು ಕುಣಿಗಲ್ ಶಾಖಾ ನಾಲೆಗೆ ನೀರು ಹರಿಯುತ್ತಿತ್ತು. ಈಗ 30 ಕಿ.ಮೀ. ದೂರದಿಂದ ಬರುವ ಯೋಜನೆ ಇದಾಗಿದೆ. ಇದರ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಮಾಗಡಿಗೆ ನೀರು ಹರಿಯಬಾರದೆಂದು ತುಮಕೂರು ಕಡೆಯ ಶಾಸಕರು ಸಾಕಷ್ಟು ವಿರೋಧ ಮಾಡಿದ ನಡುವೆಯೂ ಯೋಜನೆಗೆ ಹಣ ಮಂಜೂರು ಮಾಡಲಾಗಿದೆ. ಇನ್ನರೆಡು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗೆ ಚಾಲನೆ ನೀಡಲಾಗುವುದು. ಯೋಜನೆಗೆ ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಶ್ರಮವಿದ್ದು, ತಾಲೂಕಿನ ಜನರ ಪರವಾಗಿ ಸರ್ಕಾರಕ್ಕೆ ಹಾಗೂ ಸಂಸದರಿಗೆ ಅಭಿನಂದನೆ ಸಲ್ಲಿಸುತ್ತೇನೆ.
-ಎಚ್.ಸಿ.ಬಾಲಕೃಷ್ಣ, ಶಾಸಕರು, ಮಾಗಡಿ

Follow Us:
Download App:
  • android
  • ios