ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ.

ಬೆಂಗಳೂರು (ಜ.20): ಒಂದು ತಿಂಗಳ ಹಿಂದೆ ನೆಲಮಂಗಲದಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಬೆಂಗಳೂರಿನ ಐಎಎಸ್‌ಟಿ ಸಾಫ್ಟ್‌ವೇರ್‌ ಸಲ್ಯೂಷನ್ಸ್‌ನ ಮಾಲೀಕ ಚಂದ್ರಮ್‌ ಯೇಗಪ್ಪಗೋಳ ಅವರ ಇಡೀ ಕುಟುಂಬ ಸಾವು ಕಂಡಿತ್ತು. ಈಗ ಅದೆ ರೀತಿಯ ಮತ್ತೊಂದು ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್‌ ಕಾರ್‌ನ ಡ್ರೈವರ್‌ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರಾಷ್ಟ್ರೀಯ ಹೆದ್ದಾರಿ 48ರ ಗುಂಡೇನಹಳ್ಳಿ ಬಳಿ ಘಟನೆ ನಡೆದಿದೆ. ಚಲಿಸುತ್ತಿದ್ದ ಲಾರಿಯ ಕೆಳಗೆ ಸಿಲುಕಿದ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ರಸ್ತೆ ಕಾಮಗಾರಿ ಸ್ಥಗಿತ ಅಪಘಾತಕ್ಕೆ ಕಾರಣ ಎಂದು ದೂರಲಾಗಿದೆ.

ಸ್ವಿಫ್ಟ್ ಕಾರು, ಲಾರಿ ಹಾಗೂ ಟೂರಿಸ್ಟ್ ಬಸ್ ಮಧ್ಯೆ ಅಪಘಾತ ಸಂಭವಿಸಿದೆ. ಇದರಲ್ಲಿ ಸ್ವಿಫ್ಟ್ ಕಾರು ಸಂಪೂರ್ಣ ನಜ್ಜು-ಗುಜ್ಜಾಗಿದೆ. ಕಾರಿನಲ್ಲಿದ್ದ ಚಾಲಕ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ. ಅದೃಷ್ಟವಶಾತ್ ಭಾರಿ ಅಪಘಾತ ತಪ್ಪಿದೆ.

ನೆಲಮಂಗಲ ಆಕ್ಸಿಡೆಂಟ್‌ನಲ್ಲಿ ಮಗ, ಸೊಸೆ, ಮೊಮ್ಮಕ್ಕಳ ಕಳೆದುಕೊಂಡ ಶೋಕ, ಚಂದ್ರಮ್‌ ತಂದೆ ಈರಗೊಂಡ ಕೂಡ ಸಾವು!

ಚಲಿಸುತ್ತಿದ್ದ ಲಾರಿಗೆ ಕಾರು ಹಿಂಬದಿಯಿಂದ ಡಿಕ್ಕಿಯಾಗಿದೆ. ಇನ್ನು ಕಾರಿಗೆ ಹಿಂಬದಿಯಿಂದ ಟೂರಿಸ್ಟ್‌ ಬಸ್‌ ಡಿಕ್ಕಿ ಹೊಡೆದಿದೆ. ನೆಲಮಂಗಲ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಭೀಕರ ಅಪಘಾತದಲ್ಲಿ ಪವಾಡ ರೀತಿಯಲ್ಲಿ ಕಾರು ಚಾಲಕ ಪಾರಾಗಿದ್ದಾನೆ. ತುಮಕೂರು ಜಿಲ್ಲೆಯ ಸೇಲ್ಸ್ ಟ್ಯಾಕ್ಸ್ ಕಚೇರಿಗೆ ಸೇರಿದ ಕಾರು ಚಾಲಕ ಸೇಫ್‌ ಆಗಿದ್ದಾನೆ. ಕಾರು ನುಜ್ಜುಗುಜ್ಜಾದ ರೀತಿ ನೋಡಿದರೆ, ಚಾಲಕ ಬದುಕಿದ್ದೇ ಹೆಚ್ಚು ಎನ್ನುವ ರೀತಿಯಲ್ಲಿದೆ.

ನೆಲಮಂಗಲ ಜನರಿಗೆ ಮತ್ತೆ ಕಾಡಿದ 'ನಂಬರ್‌ 6', ಹೆದ್ದಾರಿ ಅಪಘಾತಕ್ಕೂ ನಂಬರ್ ಪ್ಲೇಟ್‌ಗೂ ಏನಿದೆ ಲಿಂಕ್‌?