Hubballi: ಪ್ಲಾಸ್ಟಿಕ್‌ ಮುಕ್ತ ನಗರದತ್ತ ಮತ್ತೊಂದು ಹೆಜ್ಜೆ

ಪ್ಲಾಸ್ಟಿಕ್‌ ಮುಕ್ತ ನಗರ ಮಾಡುವ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಹಸಿರು ದಳದ ಸಹಯೋಗದಲ್ಲಿ ಚಿಂದಿ ಆಯುವವರಿಗೆ ಪೇಪರ್‌ ಬ್ಯಾಗ್‌ ತಯಾರಿಕಾ ತರಬೇತಿ ಆರಂಭಿಸಲು ಮುಂದಾಗಿವೆ. 

Another step towards plastic free city at Hubballi gvd

ಬಾಲಕೃಷ್ಣ ಜಾಡಬಂಡಿ

ಹುಬ್ಬಳ್ಳಿ (ನ.07): ಪ್ಲಾಸ್ಟಿಕ್‌ ಮುಕ್ತ ನಗರ ಮಾಡುವ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಹಸಿರು ದಳದ ಸಹಯೋಗದಲ್ಲಿ ಚಿಂದಿ ಆಯುವವರಿಗೆ ಪೇಪರ್‌ ಬ್ಯಾಗ್‌ ತಯಾರಿಕಾ ತರಬೇತಿ ಆರಂಭಿಸಲು ಮುಂದಾಗಿವೆ. ಪ್ಲಾಸ್ಟಿಕ್‌ ಬಳಕೆ ವ್ಯಾಪಾರಸ್ಥರು ಹಾಗೂ ಗ್ರಾಹಕರ ಜೀವನದ ಒಂದು ಭಾಗವಾಗಿ ಪರಿಣಮಿಸಿದೆ. ಇಂತಹ ಸಂದರ್ಭ ನಿಷೇಧಿತ ಏಕಬಳಕೆ ಪ್ಲಾಸ್ಟಿಕ್‌ ಮಾರುಕಟ್ಟೆಯಲ್ಲಿ ಕದ್ದುಮುಚ್ಚಿ, ಕೆಲವೆಡೆ ರಾಜಾರೋಷವಾಗಿ ಬಳಕೆಯಾಗುತ್ತಿದೆ. ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ಗೆ ಪೇಪರ್‌ ಬ್ಯಾಗ್‌ ಪರ್ಯಾಯವಾಗಲಿದೆ ಎನ್ನುವುದು ಪರಿಸರ ಪ್ರೇಮಿಗಳ ಅಭಿಪ್ರಾಯ.

ಪರಿಸರ ಉಳಿಸಿ, ಬೆಳೆಸುವ ಕಾರ್ಯದಲ್ಲಿ ತೊಡಗಿರುವ ಎನ್‌ಜಿಒ ಸಂಸ್ಥೆಯಾದ ಹಸಿರು ದಳ ಈಗಾಗಲೇ ಮಹಾನಗರದಲ್ಲಿ ಚಿಂದಿ ಆಯುವವರ 950 ಜನರ ಸರ್ವೇ ನಡೆಸಿದೆ. ಅವರಿಗೆ ಪಾಲಿಕೆ ವತಿಯಿಂದ ಗುರುತಿನ ಚೀಟಿ ನೀಡಲಾಗಿದೆ. ಧಾರವಾಡ ಜಿಲ್ಲೆಯ ಕುಂದಗೋಳ, ಅಣ್ಣಿಗೇರಿ, ನವಲಗುಂದ, ಅಳ್ನಾವರ, ಕಲಘಟಗಿ ತಾಲೂಕಿನ 250 ಜನರ ಸರ್ವೇ ಕೂಡ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ ಚಿಂದಿ ಆಯುವವರಿಗೆ ಪೇಪರ್‌ ತಯಾರಿಸುವ ತರಬೇತಿ ನೀಡಿ ಅವರನ್ನು ಆರ್ಥಿಕವಾಗಿ ಸದೃಢಗೊಳಿಸುವ ಕಾರ್ಯ ಹಸಿರು ದಳದಿಂದ ನಡೆದಿದೆ.

ಟಿಪ್ಪು ಜಯಂತಿಗೆ ಅವಕಾಶ ಕೊಟ್ಟರೆ ಸಂಘರ್ಷ ನಿಶ್ಚಿತ: ಪ್ರಮೋದ್‌ ಮುತಾಲಿಕ್‌

ಹುಬ್ಬಳ್ಳಿಯ ದುರ್ಗಾಶಕ್ತಿ ಕಾಲನಿ, ನೇಕಾರ ನಗರ, ಶಿವಶಂಕರ ಕಾಲನಿ, ವೀರಾಪುರ ಓಣಿ, ನಾಗಶೆಟ್ಟಿಕೊಪ್ಪ, ಗೋಪನಕೊಪ್ಪ, ಉಣಕಲ್‌ನ ಸಿದ್ದೇಶ್ವರ ಆಶ್ರಯ ಕಾಲನಿ, ವಿಶ್ವೇಶ್ವರ ನಗರದಲ್ಲಿ ವಾಸವಾಗಿರುವ ಚಿಂದಿ ಆಯುವ ಜನಾಂಗಕ್ಕೆ ತರಬೇತಿ ಆರಂಭಗೊಂಡಿದೆ. ಹುಬ್ಬಳ್ಳಿಯಲ್ಲಿ 223 ಪುರುಷ, 387 ಮಹಿಳೆಯರು ಒಟ್ಟು 610 ಜನರು ಚಿಂದಿ ಆಯುವ ಕೆಲಸದಲ್ಲಿ ತೊಡಗಿದ್ದಾರೆ. ಧಾರವಾಡದ ಸರಸ್ವತಪುರ, ಲಕ್ಷ್ಮೇ ಸಿಂಗನಕೆರೆ, ರಾಮನಗರ, ಮೃತ್ಯುಂಜಯ ನಗರದಲ್ಲಿ ವಾಸಿಸಿರುವ 143 ಪುರುಷ, 197 ಮಹಿಳೆಯರು ಸೇರಿ ಒಟ್ಟು 340 ಜನರು ಚಿಂದಿ ಆಯುವ ಕಾಯಕದಲ್ಲಿ ತೊಡಗಿದ್ದಾರೆ.

ಸೆ. 15ರಿಂದ ತರಬೇತಿ ಪ್ರಾರಂಭಿಸಲಾಗಿದೆ. ಈಗಾಗಲೇ ನಗರದ 34 ಮಂದಿಗೆ ತರಬೇತಿ ನೀಡಲಾಗಿದೆ. ಹಂತಹಂತವಾಗಿ ಪ್ರತಿಯೊಬ್ಬರನ್ನು ತಲುಪುವ ಗುರಿ ಹೊಂದಲಾಗಿದೆ. ಪ್ರತಿ ತಿಂಗಳ ಮೂರನೇ ಗುರುವಾರ ಪೇಪರ್‌ ಬ್ಯಾಗ್‌ ತಯಾರಿ ಸೇರಿ ವಿವಿಧ ವಿಷಯದ ಕುರಿತು ಚಿಂದಿ ಆಯುವ ಜನಾಂಗದ ಪುರುಷ ಮತ್ತು ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. ಕಸದಿಂದ ಗೊಬ್ಬರ ತಯಾರಿಸುವ ಕುರಿತು, ಸ್ವಸಹಾಯ ಸಂಘ ರಚನೆ, ಸರ್ಕಾರಿ ಸೌಲಭ್ಯಗಳನ್ನು ಬಳಸುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ಪೇಪರ್‌ ಬ್ಯಾಗ್‌ ತಯಾರಿಸುವುದರಿಂದ ಚಿಂದಿ ಆಯುವವರ ಬದುಕು ಆರ್ಥಿಕವಾಗಿ ಸುಧಾರಣೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಪಾಲಿಕೆ ಹಾಗೂ ಹಸಿರು ದಳದ ಈ ಕಾರ್ಯಕ್ಕೆ ಧಾರವಾಡ ಜಿಲ್ಲಾ ಅಭಿಯಾನ ಪರಿಸರ ಸಮಿತಿ ಕೈಜೋಡಿಸಿದೆ. ಸಮಿತಿ ಸಂಸ್ಥಾಪಕಿ ಜಯಶ್ರೀ ಗೌಳಿಯವರು ಚಿಂದಿ ಆಯುವವರಿಗೆ ಪೇಪರ್‌ ಬ್ಯಾಗ್‌ ತಯಾರಿಸುವ ತರಬೇತಿ ನೀಡುತ್ತಿದ್ದಾರೆ. ಪರಿಸರ ಹಾಗೂ ಮಾನವ ಸಂಕುಲಕ್ಕೆ ಸಂಚಕಾರ ತರುವ ಪ್ಲಾಸ್ಟಿಕ್‌ನಿಂದ ನಗರವನ್ನು ಮುಕ್ತಗೊಳಿಸಲು ಜನರ ಸಹಕಾರ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಬೇಕಾಗಿದೆ.

ಹುಬ್ಬಳ್ಳಿ-ಧಾರವಾಡ ಹಾಗೂ ಜಿಲ್ಲೆಯ 5 ತಾಲೂಕುಗಳಲ್ಲಿರುವ 1200ಕ್ಕೂ ಅಧಿಕ ಚಿಂದಿ ಆಯುವವರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಅಗತ್ಯವಿರುವ ತರಬೇತಿ ನೀಡಿ, ಜಾಗೃತಿ ಮೂಡಿಸಿ, ಚಿಂದಿ ಆಯುವವರ ಬದುಕು ಸುಧಾರಣೆ ಮಾಡುವ ನಿಟ್ಟಿನಲ್ಲಿ ಅವರಿಗೆ ನೆರವು ಒದಗಿಸಲಾಗುತ್ತಿದೆ.
-ಮಂಜುನಾಥ ಬಾರಕೇರ, ಹಸಿರು ದಳದ ಜಿಲ್ಲಾ ಮ್ಯಾನೇಜರ್‌

Ramanagara: ಹೊಡೆದಾಟದಲ್ಲಿ ಮಾಜಿ ಶಾಸಕ ಬಾಲಕೃಷ್ಣ ಸ್ಪೆಷಲಿಸ್ವ್‌: ಸಚಿವ ಅಶ್ವತ್ಥ್‌

ಪ್ಲಾಸ್ಟಿಕ್‌ ಬಳಕೆ ಮಾಡದಿರುವ ಕುರಿತು, ಅದರಿಂದಾಗುವ ಅಪಾಯದ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಪೇಪರ್‌ ಬ್ಯಾಗ್‌ ತರಬೇತಿ ನೀಡಲಾಗುತ್ತಿದೆ. ಪೇಪರ್‌ ಬ್ಯಾಗ್‌ ತಯಾರಿಕೆಯಿಂದ ಪರಿಸರ ಉಳಿಸುವ ಜತೆಗೆ ಚಿಂದಿ ಆಯುವವರ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ.
-ಜಯಶ್ರೀ ಗೌಳಿಯವರ, ಧಾರವಾಡ ಜಿಲ್ಲಾ ಅಭಿಯಾನ ಪರಿಸರ ಸಮಿತಿ ಸಂಸ್ಥಾಪಕಿ

Latest Videos
Follow Us:
Download App:
  • android
  • ios