ಮಲೆನಾಡಿನಲ್ಲಿ ಮತ್ತೆ ಮಂಗನ ಕಾಯಿಲೆ ಆರ್ಭಟ : 63 ಪ್ರಕರಣ ವರದಿ

ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಮಂಗನ ಕಾಯಿಲೆ ಪ್ರಕರಣ ವರದಿಯಾಗಿದೆ. ಇದುವರೆಗೆ ಒಟ್ಟು 63 ಮಂದಿಗೆ ಸೋಂಕು ತಗುಲಿದೆ. 

another kfd case found in thirthahalli

ಶಿವಮೊಗ್ಗ [ಮಾ.06]: ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ವರ್ಷ ಮರಣ ಮೃದಂಗ ಬಾರಿಸಿದ್ದ ಮಂಗನ ಕಾಯಿಲೆ ಮತ್ತೆ ಈ ವರ್ಷವೂ ಅಟ್ಟಹಾಸ ಮೆರೆಯುತ್ತಿದೆ. 

ಇದೀಗ ತೀರ್ಥಹಳ್ಳಿ ತಾಲೂಕಿನ ಮತ್ತೋರ್ವ ವ್ಯಕ್ತಿಗೆ ಮಂಗನ ಕಾಯಿಲೆ ಕಾಣಿಸಿಕೊಂಡು ಕಳವಳ ಉಂಟು ಮಾಡಿದೆ. 

ಮತ್ತೆ ಕಾಣಿಸಿಕೊಂಡಿದೆ ಮಹಾಮಾರಿ ಮಂಗನ ಕಾಯಿಲೆ : ಎಚ್ಚರ!..

ತೀರ್ಥಹಳ್ಳಿ ತಾಲೂಕಿನಾದ್ಯಂತ ಗ್ರಾಮದ ಮಂಜುನಾಥ [34] ಎಂಬ ವ್ಯಕ್ತಿಗೆ ಕೆಎಫ್ ಡಿ ಸೋಂಕು ತಗುಲಿದ್ದು, ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಇದುವರೆಗೂ ತೀರ್ಥಹಳ್ಳಿ ತಾಲೂಕೊಂದರಲ್ಲಿ 63 ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿವೆ. 

Latest Videos
Follow Us:
Download App:
  • android
  • ios