ಕೊರೋನಾ ಭೀತಿ: CBSE ಮಕ್ಕಳಿಗೆ ಈ ಬಾರಿ ವಾರ್ಷಿಕ ಪರೀಕ್ಷೆ ಇಲ್ಲ

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಹಳೆ ಮೈಸೂರು ಭಾಗದ ಸಿಬಿಎಸ್‌ಸಿ ಶಾಲಾ ಮಕ್ಕಳಿಗೆ ವಾರ್ಷಿಕ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಖಾಸಗಿ ಸಿಬಿಎಸ್‌ಸಿ ಶಾಲೆಗಳ ಒಕ್ಕೂಟ ಪರೀಕ್ಷೆ ನಡೆಸದಂತೆ ನಿರ್ಧಾರ ಕೈಗೊಂಡಿದೆ. 

 

Annual Exams canceled for cbse students in old mysore region

ಬೆಂಗಳೂರು(ಮಾ.12): ಕೊರೋನಾ ಭೀತಿ ಹಿನ್ನೆಲೆಯಲ್ಲಿ ಹಳೆ ಮೈಸೂರು ಭಾಗದ ಸಿಬಿಎಸ್‌ಸಿ ಶಾಲಾ ಮಕ್ಕಳಿಗೆ ವಾರ್ಷಿಕ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಖಾಸಗಿ ಸಿಬಿಎಸ್‌ಸಿ ಶಾಲೆಗಳ ಒಕ್ಕೂಟ ಪರೀಕ್ಷೆ ನಡೆಸದಂತೆ ನಿರ್ಧಾರ ಕೈಗೊಂಡಿದೆ. 

LKG,UKG ಹಾಗೂ 1 ರಿಂದ 5ನೇ ತರಗತಿ ಮಕ್ಕಳಿಗೆ ಪರೀಕ್ಷೆ ಇಲ್ಲದೆ ಪಾಸ್ ಮಾಡಲು ನಿರ್ಧರಿಸಿದ್ದು, 9 ನೇ ತರಗತಿ ಒಳಗಿನ ಮಕ್ಕಳಿಗೆ ಪ್ರಿಪರೇಟರಿ ಪರೀಕ್ಷೆಯೇ ಅಂತಿಮ ಪರೀಕ್ಷೆಯಾಗಲಿದೆ.

ಡಿಕೆಶಿ KPCC ಅಧ್ಯಕ್ಷರಾದ್ರೂ ಕೋಲಾರ 'ಕೈ' ನಾಯಕರಿಗಿಲ್ಲ ಸಂಭ್ರಮ

ಬೆಂಗಳೂರು ಗ್ರಾಮಾಂತರ ಭಾಗಗಳಲ್ಲಿ 4ನೇ ತರಗತಿಯ ಒಳಗಿನ ಮಕ್ಕಳಿಗೆ ಪರೀಕ್ಷೆ ನಡೆಸದಂತೆ ಖಾಸಗಿ ಸಿಬಿಎಸ್‌ಸಿ ಶಾಲೆಗಳ ಒಕ್ಕೂಟ ನಿರ್ಧರಿಸಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳ ಖಾಸಗಿ ಸಿಬಿಎಸ್‌ಸಿ ಶಾಲೆಗಳ ಒಕ್ಕೂಟದಿಂದ ನಿರ್ಧಾರ ಮಾಡಲಾಗಿದೆ.

5 ಜಿಲ್ಲೆಗಳ 240 ಸಿಬಿಎಸ್‌ಸಿ ಶಾಲೆಗಳಿಂದ ನಿರ್ಣಯಕ್ಕೆ ಒಪ್ಪಿಗೆ ಪಡೆದುಕೊಂಡಿದ್ದು, 4ನೇ ತರಗತಿ ಮಕ್ಕಳಿಗೆ ಪರೀಕ್ಷೆ ನಡೆಸದೆ ಪಾಸ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ. 9ನೇ ತರಗತಿ ವರೆಗಿನ ಮಕ್ಕಳಿಗೆ ಪ್ರಿಪರೇಟರಿ ಪರೀಕ್ಷೆಯನ್ನೆ ಅಂತಿಮ ಪರೀಕ್ಷೆಯನ್ನಾಗಿ ಪರಿಗಣಿಸುವ ನಿರ್ಧಾರ ಮಾಡಲಾಗಿದೆ.

ಕೊರೋನಾ ಭೀತಿ: ಕೇರಳದಾದ್ಯಂತ ರಜೆ ಘೋಷಣೆ, ಪರೀಕ್ಷೆ ಕ್ಯಾನ್ಸಲ್

ಮಾ30ರ ಒಳಗೆ ಎಲ್ಲ ಸಿಬಿಎಸ್‌ಸಿ ಶಾಲೆಗಳಿಗೆ ಕಡ್ಡಾಯವಾಗಿ ರಜೆ ಘೋಷಣೆ ಮಾಡಬೇಕು. ಮಕ್ಕಳನ್ನು ಬೇಸಿಗೆ ಶಿಬಿರಕ್ಕೂ ಕರೆದುಕೊಂಡಬಾರದು ಎಂದು ಸಿಬಿಎಸ್‌ಸಿ ಖಾಸಗಿ ಶಾಲೆಗಳ ಒಕ್ಕೂಟ ಅಧ್ಯಕ್ಷ ಸುಧಾಕರ್ ಶೆಟ್ಟಿ ಸೂಚಿಸಿದ್ದಾರೆ.

Latest Videos
Follow Us:
Download App:
  • android
  • ios