Chitra Santhe 2023: ಜನವರಿಯಲ್ಲಿ 20ನೇ ಚಿತ್ರಸಂತೆ ಕಾರ್ಯಕ್ರಮ, ಚಿತ್ರಕಲಾ ಪರಿಷತ್ತಿನಿಂದ ಸಕಲ ಸಿದ್ಧತೆ

ಕರ್ನಾಟಕ ಚಿತ್ರಕಲಾ ಪರಿಷತ್ತು, ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ 20 ನೇ ಚಿತ್ರಸಂತೆ ಕಾರ್ಯಕ್ರಮವನ್ನು ಮುಂದಿನ ವರ್ಷದ  ಜನವರಿ 7 ರಂದು ನಡೆಸಲು ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ಈ ವರ್ಷದ ಕಾರ್ಯಕ್ರಮವು ಭೌತಿಕ ಮತ್ತು ಆನ್ಲೈನ್ ರೂಪದಲ್ಲಿ ನಡೆಸಲು ಚಿತ್ರಕಲಾ ಪರಿಷತ್ತು ನಿರ್ಧರಿಸಿದೆ.

Annual art carnival Chitra Santhe 2023 on january 7th gow

ವರದಿ : ನಟರಾಜ್ , ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ನ.24): ಕರ್ನಾಟಕ ಚಿತ್ರಕಲಾ ಪರಿಷತ್ತು, ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ 20 ನೇ ಚಿತ್ರಸಂತೆ ಕಾರ್ಯಕ್ರಮವನ್ನು ಮುಂದಿನ ವರ್ಷದ  ಜನವರಿ 7 ರಂದು ನಡೆಸಲು ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ಈ ವರ್ಷದ ಕಾರ್ಯಕ್ರಮವು ಭೌತಿಕ ಮತ್ತು ಆನ್ಲೈನ್ ರೂಪದಲ್ಲಿ ನಡೆಸಲು ಚಿತ್ರಕಲಾ ಪರಿಷತ್ತು ನಿರ್ಧರಿಸಿದೆ. 18 ರಿಂದ 20 ರಾಜ್ಯಗಳಿಂದ ಕಲಾವಿದರು ಆಗಮಿಸುವ ಸಾಧ್ಯತೆಯಿದೆ. ಚಿತ್ರಸಂತೆಯಲ್ಲಿ ಕಲಾ ಪ್ರೇಮಿಗಳಿಗೆ 100 ರೂಪಾಯಿಗಳಿಂದ ಲಕ್ಷದವರೆಗೆ ಕಲಾಕೃತಿಗಳು ದೊರೆಯುತ್ತವೆ. ಈ ಸಂಧರ್ಭದಲ್ಲಿ 'ಚಿತ್ರಕಲಾ ಸಮ್ಮಾನ್'  ಪ್ರಶಸ್ತಿ ಸಮಾರಂಭವು ನಡೆಯಲಿದೆ. ರಾಷ್ಟ್ರ ಮಟ್ಟದ ಹಿರಿಯ ಕಲಾವಿದರಿಗೆ ಒಂದು 50 ಸಾವಿರದಿಂದ ಒಂದು ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲಾಗುತ್ತದೆ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷರಾದ ಡಾ. ಬಿ. ಎಲ್. ಶಂಕರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಹೆಚ್.ಕೆ. ಕೇಜ್ರಿವಾಲ್ ಪ್ರಶಸ್ತಿ, ಎಂ ಆರ್ಯಮೂರ್ತಿ ಪ್ರಶಸ್ತಿ, ಡಿ. ದೇವರಾಜ ಅರಸು ಪ್ರಶಸ್ತಿ, ವೈ.ಸುಬ್ರಮಣ್ಯರಾಜು ಪ್ರಶಸ್ತಿ ಪ್ರಶಸ್ತಿಗಳಿಗೆ 50 ಸಾವಿರ ನಗದು ಹಾಗೂ ಫಲಕವನ್ನು ನೀಡಿ ಗೌರವಿಸಲಾಗುತ್ತದೆ. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸ್ಥಾಪಕ ಪ್ರಧಾನ ಕಾರ್ಯದರ್ಶಿಯವರಾದ ಪ್ರೊ ಎಂ ಎಸ್ ನಂಜುಂಡರಾವ್ ಇವರ ಹೆಸರಿನಲ್ಲಿ ರಾಷ್ಟ್ರ ಮಟ್ಟದ ಹಿರಿಯ ಕಲಾವಿದರಿಗೆ 1 ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಮತ್ತು ಫಲಕಗಳನ್ನು ನೀಡಿ ಗೌರವಿಸಲಾಗುತ್ತದೆ. ದೇಶದ ವಿವಿಧ ಭಾಗಗಳಿಂದ ಬರುವ 1500 ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಳ್ಳುತ್ತವೆ. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ್, ಓಡಿಶಾ, ಸಿಕ್ಕಿಂ, ಮೊದಲಾದ ರಾಜ್ಯಗಳಿಂದ ಕಲಾವಿದರು ಭಾಗವಹಿಸುತ್ತಾರೆ. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಗಳಲ್ಲಿ ಮೈಸೂರು ಸಂಪ್ರದಾಯಿಕ ಶೈಲಿಯ ಕಲಾಕೃತಿಗಳು ಹಾಗೂ ತೊಗಲು ಬೊಂಬೆ ಕಲಾಕೃತಿಗಳು, ಪ್ರಶಸ್ತಿಗೆ ಭಾಜನರಾಗುವ ಕಲಾವಿದರ ಕಲಾಕೃತಿಗಳ ಪ್ರದರ್ಶನ.

5 ಪ್ರಶಸ್ತಿಗಳು
1. ಪ್ರೊ ಎಂ ಎಸ್ ನಂಜುಂಡರಾವ್ ಪ್ರಶಸ್ತಿ (1 ಲಕ್ಷ )
2. ಹೆಚ್. ಕೆ. ಕೇಜ್ರಿವಾಲ್ ಪ್ರಶಸ್ತಿ (50 ಸಾವಿರ )
3. ಎಂ ಆರ್ಯಮೂರ್ತಿ ಪ್ರಶಸ್ತಿ ( 50 ಸಾವಿರ )
4. ಡಿ. ದೇವರಾಜ ಅರಸು ಪ್ರಶಸ್ತಿ ( 50 ಸಾವಿರ )
5. ವೈ. ಸುಬ್ರಮಣ್ಯರಾಜು ಪ್ರಶಸ್ತಿ (50 ಸಾವಿರ )

ಈ ದಿಕ್ಕಲ್ಲಿ ಓಡುಕುದುರೆ ಪೇಂಟಿಂಗ್ ಹಾಕಿದ್ರೆ ಹೆಸರು, ಖ್ಯಾತಿ, ಗೌರವ ಅರಸಿ ಬರುವುದು!

ಕರ್ನಾಟಕ ಚಿತ್ರಕಲಾ ಪರಿಷತ್ತಿನ 20 ನೇ ಚಿತ್ರಸಂತೆ ಕಾರ್ಯಕ್ರಮದ ಮಾಹಿತಿಗಳು 
* ಜನವರಿ 8, 2023 ಚಿತ್ರಸಂತೆ ಆರಂಭ
* ಬೆಳಿಗ್ಗೆ 8 ರಿಂದ ರಾತ್ರಿ 8ರ ವರೆಗೆ ನಡೆಯಲಿರುವ ಚಿತ್ರಸಂತೆ 
*ಭೌತಿಕ ಮತ್ತು ಆನ್ಲೈನ್ ರೂಪದಲ್ಲಿ ಆಯೋಜನೆ
* 'ಚಿತ್ರಕಲಾ ಸಮ್ಮಾನ್'  ಪ್ರಶಸ್ತಿಗೆ ನಾಲ್ವರು ಕಲಾವಿದರ  ಆಯ್ಕೆ 
* 18 ರಿಂದ 20 ರಾಜ್ಯಗಳಿಂದ ಕಲಾವಿದರು ಆಗಮಿಸುವ ಸಾಧ್ಯತೆ.
*ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ ಕಾರ್ಯಕ್ರಮದ ಉದ್ಘಾಟನೆ.
* ಸಿ. ಎನ್. ಅಶ್ವಥ್ ನಾರಾಯಣರಿಂದ ಕಲಾ ಪ್ರದರ್ಶನದ ಉದ್ಘಾಟನೆ.
* ಪ್ರತಿದಿನ 3 ರಿಂದ 4 ಲಕ್ಷ ಜನ ಸೇರುವ ನಿರೀಕ್ಷೆ
* ಹಿರಿಯ ಕಲಾವಿದರು, ವಿಶೇಷ ಚೇತನರಿಗೆ ಪರಿಷತ್ತಿನ ಆವರಣದಲ್ಲಿ ಮಳಿಗೆಗೆ ಅವಕಾಶ.
* ಆವರಣದ ಹೊರಗೆ ಕೆನರಾ ಬ್ಯಾಂಕಿನ ಸಂಚಾರಿ ATM ಗಳು ಲಭ್ಯ
* ಚಿತ್ರಸಂತೆಯಲ್ಲಿ ಕಲಾ ಪ್ರೇಮಿಗಳಿಗೆ 100 ರೂಪಾಯಿಗಳಿಂದ ಲಕ್ಷದವರೆಗೆ ಕಲಾಕೃತಿಗಳು ಲಭ್ಯ
* ಚಿತ್ರಸಂತೆಯಲ್ಲಿ ಭಾಗವಹಿಸುವ 1500ಕ್ಕೂ ಅಧಿಕ ಕಲಾವಿದರಿಗೆ ಊಟ, ತಿಂಡಿ, ನೀರು ಮತ್ತು ಕಲಾಕೃತಿಗಳ ಮಾರಾಟಕ್ಕೆ ಮಳಿಗೆ  ಉಚಿತ 
* ಬೇರೆ ಊರುಗಳಿಂದ ಬರುವ 400ಕ್ಕೂ ಅಧಿಕ ಕಲಾವಿದರಿಗೆ ವಸತಿ ವ್ಯವಸ್ಥೆಯನ್ನು ಪರಿಷತ್ತು ಕಡೆಯಿಂದಲೇ ಉಚಿತ 
* ಚಿತ್ರಸಂತೆಯಲ್ಲಿ ವ್ಯಂಗ್ಯ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ.
* ಚಿತ್ರಕಲಾ ಮಹಾವಿದ್ಯಾಲಯದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಚಿತ್ರಸಂತೆಯಲ್ಲಿ ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸಲು ಅವಕಾಶ.
* ಶಿವಾನಂದ ಸರ್ಕಲ್ ನಿಂದ ವಿಂಡ್ಸರ್ ಮ್ಯಾನರ್ವರೆಗಿನ ಕುಮಾರ ಕೃಪಾ ರಸ್ತೆಯಲ್ಲಿ ಹಾಗೂ ಕ್ರೆಸೆಂಟ್ ರಸ್ತೆಯ ಸ್ವಲ್ಪ ಭಾಗದಲ್ಲಿ ಕಲಾಕೃತಿಗಳ ಪ್ರದರ್ಶನ

Karnataka Nada Devate: ಸರ್ಕಾರದಿಂದ ಅಧಿಕೃತ 'ನಾಡದೇವಿಯ' ಚಿತ್ರ

* ಭಾರತ ಸೇವಾದಳ ಆವರಣ, ಕ್ರೆಸೆಂಟ್ ಮತ್ತು ರೇಸ್ ಕೋರ್ಸ್ ರಸ್ತೆಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ.
* ಉದಯೋಣ್ಮುಖ ಕಲಾವಿದರಿಗೆ ಚಿತ್ರಸಂತೆ 'ತೆರದ ಕಲಾಶಾಲೆ ' ಎಂದು ಪ್ರಸಿದ್ದಿ 
* ಚಿತ್ರಸಂತೆಯಲ್ಲಿ ಸಾಮಾನ್ಯವಾಗಿ ಮೈಸೂರು ಸಂಪ್ರದಾಯಕ ಶೈಲಿ, ರಾಜಸ್ಥಾನಿ ಶೈಲಿ, ಮಧುಬನಿಯ ಶೈಲಿ, ತೈಲ ಮತ್ತು ಜಲವರ್ಣಗಳ ಕಲಾಕೃತಿಗಳು ಲಭ್ಯವಿರುತ್ತದೆ. ಇವಲ್ಲದೆ ಅಕ್ರಿಲಿಕ್, ಕೋಲಾಜ್, ಲಿಥೋಗ್ರಾಫ್ ಮೊದಲಾದ ಪ್ರಕಾರಗಳ ಕಲಾಕೃತಿಗಳು ದೊರೆಯುತ್ತವೆ.
* ಕುಂಚ ಅಥವಾ ಪೆನ್ಸಿಲ್ ಗಳಿಂದ ಕಲಾರಸಿಕರ ಭಾವಚಿತ್ರಗಳನ್ನು ಸ್ಥಳದಲ್ಲೇ ರಚಿಸಿ ಕೊಡುವ ಕಲಾವಿದರು ಕೂಡ ಇರಲಿದ್ದಾರೆ.

Latest Videos
Follow Us:
Download App:
  • android
  • ios