ಗದಗ(ಡಿ.29): ಪೇಜಾವರ ಶ್ರೀಗಳು ಅಗಲಿರುವುದು ಅತ್ಯಂತ ವಿಷಾದಕರ ಸಂಗತಿಯಾಗಿದೆ. ಶ್ರೀಗಳು ರಾಷ್ಟ್ರೀಯ ಸಂತರಾಗಿ ದೇಶಕ್ಕೆ ಸಂದೇಶ ನೀಡುತ್ತಿದ್ದರು, ಬಹುಕಾಲ ಪರ್ಯಾಯ ಪೀಠವನ್ನು ಶ್ರೀಗಳು ಅಲಂಕರಿಸುವ ಮೂಲಕ ಉಡುಪಿಕೃಷ್ಣ ಮಠಕ್ಕೆ ಒಳ್ಳೆ ಹೆಸರು‌ ತಂದು ಕೊಟ್ಟಿದ್ದರು ಎಂದು ಜಿಲ್ಲೆಯ ಮುಂಡರಗಿಯ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದ್ದಾರೆ. 

ವಿಶ್ವಸಂತ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಅಸ್ತಂಗತ

ಪೇಜಾವರ ಶ್ರೀಗಳ ಅಗಲಿಕೆಗೆ ಮುಂಡರಗಿ ಜಗದ್ಗುರು‌ ಅನ್ನದಾನೀಶ್ವರ ಸಂಸ್ಥಾನಮಠದ ಸ್ವಾಮೀಜಿ‌ ಸಂತಾಪ ಚೂಚಿಸಿದ್ದಾರೆ. 

ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಅವರು, ಪೇಜಾವರ ಶ್ರೀಗಳು ಮುಂಡರಗಿ ಅನ್ನದಾನೀಶ್ವರ ಮಠಕ್ಕೂ ಹಲವಾರು ಬಾರಿ ಆಗಮಿಸಿದ್ದರು.  ನಮ್ಮ ಭಿನ್ನಹಕ್ಕೆ ಓಗೊಟ್ಟು ಶ್ರೀಮಠದ ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಮ್ಮ ಗೌರವ ಸ್ವೀಕರಿಸಿದ್ದರು ಎಂದು ಹೇಳಿದ್ದಾರೆ. 

ಬೆಂಗಳೂರಿನ ವಿದ್ಯಾಪೀಠದಲ್ಲಿ ಪೇಜಾವರ ಶ್ರೀಗಳ ಅಂತ್ಯಸಂಸ್ಕಾರ

ಭಗವಂತ ಅವರ ಶ್ರೀಗಳ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕಿರಿಯ ಶ್ರೀಗಳಿಗೂ ಗುರುಗಳ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿ‌ ಭಗವಂತ‌ ನೀಡಲಿ ಎಂದು ಅನ್ನದಾನೀಶ್ವರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.