Asianet Suvarna News Asianet Suvarna News

ಮುಂಡರಗಿ: ಶ್ರಾವಣ ಮಾಸದ ಪ್ರವಚನ ಈ ಬಾರಿ ಯುಟ್ಯೂಬ್‌ನಲ್ಲಿ

ಕೊರೋನಾ ಹಿನ್ನೆಲೆಯಲ್ಲಿ ಆನ್‌ಲೈನ್‌ ತಂತ್ರಾಂಶ ಉಪಯೋಗಿಸಿಕೊಂಡು ಯುಟ್ಯೂಬ್‌ ಮೂಲಕ ಶ್ರಾವಣ ಮಾಸದ ಪ್ರವಚನ| ಶ್ರೀಮಠದ ಪರಂಪರೆಯನ್ನು ಉಳಿಸಿಕೊಂಡಂತಾಗುತ್ತದೆ ಮತ್ತು ಕೋವಿಡ್‌ -19ರ ನಿಯಮಾವಳಿಯನ್ನು ಪಾಲಿಸದಂತಾಗುತ್ತದೆ|

Annadaneshwara Mutt Preeching will start on Youtube due to Coronavirus
Author
Bengaluru, First Published Jul 18, 2020, 9:43 AM IST | Last Updated Jul 18, 2020, 9:43 AM IST

ಮುಂಡರಗಿ(ಜು. 18):  ಪ್ರತಿವರ್ಷ ಶ್ರಾವಣ ಮಾಸದ ಅಂಗವಾಗಿ ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ 1 ತಿಂಗಳ ಕಾಲ ಜರುಗುತ್ತಿದ್ದ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮವನ್ನು ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಆನ್‌ಲೈನ್‌ ತಂತ್ರಾಂಶ ಉಪಯೋಗಿಸಿಕೊಂಡು ಯುಟ್ಯೂಬ್‌ ಮೂಲಕ ನಿತ್ಯ ಪ್ರಸಾರ ಮಾಡಲು ಶ್ರೀಮಠದಲ್ಲಿ ಗುರುವಾರ ಜರುಗಿದ ಪ್ರವಚನದ ಪೂರ್ವಭಾವಿ ಸಭೆಯಲ್ಲಿ ಭಕ್ತರೆಲ್ಲರೂ ಸೇರಿ ನಿರ್ಧಾರ ತೆಗೆದುಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಜ. ಅನ್ನದಾನೀಶ್ವರ ವಿದ್ಯಾ ಸಮಿತಿಯ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಮಾತನಾಡಿ, ಕೋವಿಡ್‌ -19 ರ ಹಿನ್ನೆಲೆಯಲ್ಲಿ ಈ ವರ್ಷದ ಶ್ರಾವಣ ಮಾಸದ ಪ್ರವಚನವನ್ನು ಯುಟ್ಯೂಬ್‌ ಮತ್ತು ಗೂಗಲ್‌ಮೀಟ್‌ ಮೂಲಕ ಮಾಡುವುದು ಸೂಕ್ತ. ಇದರಿಂದ ಶ್ರೀಮಠದ ಪರಂಪರೆಯನ್ನು ಉಳಿಸಿಕೊಂಡಂತಾಗುತ್ತದೆ ಮತ್ತು ಕೋವಿಡ್‌ -19ರ ನಿಯಮಾವಳಿಯನ್ನು ಪಾಲಿಸದಂತಾಗುತ್ತದೆ. ಜು. 26 ರಿಂದ ಆಗಸ್ಟ್‌ 19ರ ವರೆಗೆ ನಡೆಯುವ ಯುಟ್ಯೂಬ್‌ ಪ್ರವಚನದಲ್ಲಿ ಪ್ರತಿದಿನ ಓರ್ವ ಶರಣರ ವಿಚಾರದಾರೆಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ಯುಟ್ಯೂಬ್‌ ಮೂಲಕ ಅಪ್‌ಲೋಡ್‌ ಮಾಡಲಾಗುವುದು ಎಂದರು.

ಜು. 26 ರಂದು ಸಂಜೆ 7.30ಕ್ಕೆ ಶ್ರೀಮಠದಲ್ಲಿ ಸಾಂಕೇತಿಕವಾಗಿ ಶರಣರ ಜೀವನ ದರ್ಶನ ಪ್ರವಚನಕ್ಕೆ ಆನಲೈನ್‌ ನಲ್ಲಿ ಅನ್ನದಾನೀಶ್ವರ ಶ್ರೀಗಳು ಚಾಲನೆ ನೀಡುವರು. ಜು. 27 ರಿಂದ 25 ದಿನಗಳ ಕಾಲ ಪ್ರತಿನಿತ್ಯ ಅನುಭವಿ ಪಂಡಿತರಿಂದ ಶರಣರ ಶರಣೆಯರ ಜೀವನ ಕುರಿತು ಉಪನ್ಯಾಸ ಮಾಡಿಸಿ ಅದನ್ನು ಚಿತ್ರೀಕರಿಸಿ ಯುಟ್ಯೂಬ್‌ನಲ್ಲಿ ಬಿತ್ತರಿಸಲಾಗುವದು. ಭಕ್ತರು ಅದನ್ನು ಮನೆಯಲ್ಲಿಯೇ ಕುಳಿತು ವೀಕ್ಷಣೆ ಮಾಡಬಹುದು ಎಂದರು.

ನರಗುಂದ: ಕೊರೋನಾ ಕಾಟ, ಬೈರನಹಟ್ಟಿ ಶ್ರೀಗಳಿಂದ ಆನ್‌ಲೈನ್‌ ಶಿವಾನುಭವ

ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಕೋರೋನಾ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಾಡುವುದು ಸೂಕ್ತ. ಭಕ್ತರ ಸಹಕಾರದಿಂದ ಪ್ರತಿ ವರ್ಷ ಶ್ರೀಮಠದಲ್ಲಿ ಶ್ರಾವಣ ಮಾಸದ ಪ್ರವಚನ ಮಾಡುತ್ತಾ ಬಂದಿದ್ದು, ಇದೀಗ ಕೊರೋನಾದಿಂದಾಗಿ ಈ ಬಾರಿ ಯುಟ್ಯೂಬ್ ಚಾನಲ್‌ ಮೂಲಕ ಪ್ರಾರಂಭಿಸುತ್ತಿರುವುದು ವಿನೂತನ ಪ್ರಯೋಗವಾಗಿದ್ದು ಭಕ್ತರು ಇಂತದ್ದೊಂದು ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ ಎಂದರು.

ಸಭೆಯಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿ ರಾಮಸ್ವಾಮಿ ಹೆಗಡಾಳ, ಕಾಂತರಾಜ ಹಿರೇಮಠ, ದೇವಪ್ಪ ರಾಮೇನಹಳ್ಳಿ, ವಿ.ಆರ್‌. ಹಿರೇಮಠ, ಎಸ್‌.ಆರ್‌. ಬಸಾಪೂರ, ಬಸವರಾಜ ಬನ್ನಿಕೊಪ್ಪ, ಬಾಬಣ್ಣ ಘಟ್ಟಿ, ಕುಮಾರ ಬನ್ನಿಕೊಪ್ಪ, ಪ್ರಶಾಂತಗೌಡ ಗುಡದಪ್ಪನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
 

Latest Videos
Follow Us:
Download App:
  • android
  • ios