ಗದಗ(ಜೂ.06): ನರಗುಂದ ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ಮಠದ ಶಾಂತಲಿಂಗ ಶ್ರೀಗಳು ಕೊರೋನಾ ಹಿನ್ನೆಲೆಯಲ್ಲಿ ಹೆಚ್ಚು ಜನರನ್ನು ಸೇರಿಸಿದೇ ಆನ್‌ಲೈನ್‌ ಶಿವಾನುಭವ ಮಾಡುವ ಮೂಲಕ ಹೊಸ ಪ್ರಯತ್ನ ಮಾಡಿದ್ದಾರೆ. 

ಜೂಮ್‌ ಆ್ಯಪ್‌ ಬಳಕೆ ಮಾಡಿಕೊಂಡು ನಡೆಸಿರುವ ಈ ಶಿವಾನುಭವವನ್ನು ಗುಜರಾತ್‌, ಜಮ್ಮು -ಕಾಶ್ಮೀರ, ಮುಂಬೈ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡುವ ಶ್ರೀಮಠದ ಭಕ್ತರು ವೀಕ್ಷಣೆ ಮಾಡಿದ್ದಾರೆ.

ಗದಗ: ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಸೋಂಕು ನಿಯಂತ್ರಣ

ಕನ್ನಡಪ್ರೇಮಿಗಳು ಆಗಿರುವ ಶ್ರೀಗಳು ಹೊಸತನಕ್ಕೆ ತಮ್ಮನ್ನು ಒಗ್ಗೂಡಿಸಿಕೊಂಡು ಆ ಮೂಲಕ ಜನರ ಮನೆ ಮನೆಗಳಿಗೆ ಬಸವ ಚಿಂತನೆ, ಅಧ್ಯಾತ್ಮ ತಲುಪಿಸುವ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಅದರ ಭಾಗವಾಗಿಯೇ ಶ್ರೀಮಠದಲ್ಲಿ ಪ್ರತಿ ತಿಂಗಳು ಶಿವಾನುಭವ ಕಾರ್ಯಕ್ರಮದ ಹೆಸರಿನಲ್ಲಿ ಸಾಧಕರನ್ನು ಬೆನ್ನು ತಟ್ಟುವುದು, ಸಾರ್ವಜನಿಕರ ತಿಳಿವಳಿಕೆ ಮಟ್ಟಹೆಚ್ಚಿಸುವುದು ಶಿವಾನುಭವಗಳ ಉದ್ದೇಶವಾಗಿದೆ.