ಮಂಡ್ಯ(ಜ.22): ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಶ್ರೀರಂಗಪಟ್ಟಣದಲ್ಲಿರುವ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮಕ್ಕೆ ಮಂಗಳವಾರ ಭೇಟಿ ನೀಡಿ ದೋಣಿ ವಿಹಾರ ನಡೆಸಿ ಪಕ್ಷಿಗಳ ವೀಕ್ಷಣೆ ನಡೆಸಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ತಮ್ಮ ಇಬ್ಬರು ಸ್ನೇಹಿತರೊಡನೆ ಆಗಮಿಸಿದ ಅನಿಲ್ ಕುಂಬ್ಳೆ ಪಕ್ಷಿಧಾಮದಲ್ಲಿ ಕೆಲ ಕಾಲ ದೋಣಿವಿಹಾರ ನಡೆಸುವ ಮೂಲಕ ವಿವಿಧ ಪಕ್ಷಿಗಳು ಹಾಗೂ ಮೊಸಳೆಗಳ ಛಾಯಾ ಚಿತ್ರಗಳನ್ನು ತಮ್ಮ ಕ್ಯಾಮರಾದಿಂದ ಸೆರೆ ಹಿಡಿದಿದ್ದಾರೆ.

ಸರ್ಕಾರಿ ಕಚೇರಿಯೇ ಇವರಿಗೆ ಸಿನಿಮಾ ಥಿಯೇಟರ್..!

ನಂತರ ಮಾತನಾಡಿದ ಅವರು, ನನಗೆ ಸಮಯ ಸಿಕ್ಕಿದಾಗಲೆಲ್ಲ ಇಲ್ಲಿಗೆ ಆಗಮಿಸಿ ಇಲ್ಲಿನ ಸೌಂದರ್ಯ ಹಾಗೂ ಪಕ್ಷಿಗಳ ಛಾಯಾಚಿತ್ರಗಳನ್ನು ತೆಗೆಯುತ್ತೇನೆ. ಪ್ರಾಣಿ ಪಕ್ಷಿಗಳೆಂದರೆ ನನಗೆ ತುಂಬಾ ಇಷ್ಟ ಎಂದು ಹೇಳಿದ್ದಾರೆ.

ರಂಗನತಿಟ್ಟು ವಲಯ ಅರಣ್ಯಾಧಿಕಾರಿ ಪುಟ್ಟಮಾದೇಗೌಡ ಮಾತನಾಡಿ, ಕ್ರಿಕೆಟಿಗ ಅನಿಲ್‌ ಕುಂಬ್ಳೆ ನಮ್ಮ ಅರಣ್ಯ ಇಲಾಖೆಯ ರಾಯಭಾರಿಯಾಗಿ ಇಲ್ಲಿಗೆ ಅನೇಕ ಬಾರಿ ಆಗಮಿಸಿದ್ದಾರೆ. ಮತ್ತೆ ರಂಗನತಿಟ್ಟು ಪಕ್ಷಿಧಾಮಕ್ಕೆ ಆಗಮಿಸಿರುವುದು ಪಕ್ಷಿ ಪ್ರೇಮಿಗಳಿಗೆ ಸಂತಸ ತಂದಿಗೆ ಎಂದರು.