ಅನಿಲ್ ಚಿಕ್ಕಮಾದು, ಜಯಪ್ರಕಾಶ್ ಚಿಕ್ಕಣ್ಣ ನಾಮಪತ್ರ
ಎಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರದಿಂದ ಸೋಮವಾರ ಕಾಂಗ್ರೆಸ್, ಜೆಡಿಎಸ್, ಸಮಾಜವಾದಿ ಜನತಾ ಪಾರ್ಟಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಎಚ್.ಡಿ. ಕೋಟೆ : ಎಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರದಿಂದ ಸೋಮವಾರ ಕಾಂಗ್ರೆಸ್, ಜೆಡಿಎಸ್, ಸಮಾಜವಾದಿ ಜನತಾ ಪಾರ್ಟಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಶಾಸಕ ಅನಿಲ… ಚಿಕ್ಕಮಾದು ಬೆಳಗ್ಗೆ ಸರಗೂರು ತಾಲೂಕು ಶ್ರೀ ಚಿಕ್ಕದೇವಮ್ಮ ತಾಯಿಗೆ ಪೂಜೆ ಸಲ್ಲಿಸಿ ನಂತರ ಪಟ್ಟಣದ ಮೇಟಿಕುಪ್ಪೆ ರಸ್ತೆಯಲ್ಲಿರುವ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ನಂತರ ಕಾಂಗ್ರೆಸ್‌ನ ಅಭಿಮಾನಿಗಳು ಮತದಾರರ ಜೊತೆಗೂಡಿ ಮಿನಿ ವಿಧಾನಸೌಧದಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು.
ಜೆಡಿಎಸ್ ಅಭ್ಯರ್ಥಿ ಜಯಪ್ರಕಾಶ್ ಚಿಕ್ಕಣ್ಣ ಬೆಳಗ್ಗೆ ಸರಗೂರು ತಾಲೂಕು ಚಿಕ್ಕದೇವಮ್ಮನ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ ನಂತರ ಪಟ್ಟಣದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಪಕ್ಷದ ಕಾರ್ಯಕರ್ತರ ಜೊತೆಗೂಡಿ ಮಿನಿ ವಿಧಾನಸೌಧದಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು.
ಸಮಾಜವಾದಿ ಜನತಾ ಪಾರ್ಟಿಯಿಂದ ಕೆ.ವಿ. ರಾಜು ಹೂಟಗಳ್ಳಿ , ಪಕ್ಷೇತರ ಅಭ್ಯರ್ಥಿಗಳಾಗಿ ಗಿರಿಜಾ ದೊರೆಸ್ವಾಮಿ ಹಾಗೂ ಬಾಬು ನಾಯಕ್ ತಮ್ಮ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಮೇಟಿಕುಪ್ಪೆ ರಸ್ತೆಯ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಶಾಸಕರ ಪೂಜೆ ಸಲ್ಲಿಸಿದ ನಂತರ ತೆರೆದ ವಾಹನದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕರ್ತರ ಜೊತೆಗೂಡಿ ಪಟ್ಟಣದ ಒಂದನೇ ಮುಖ್ಯರಸ್ತೆಯ ಮುಖಾಂತರ ಬಾಪೂಜಿ ವೃತ್ತ ಬಳಸಿ ಮೆರವಣಿಗೆಯಲ್ಲಿ ಸಾಗಿ ಬಂದು ನಾಮಪತ್ರ ಸಲ್ಲಿಸಿದರು. ಮೆರವಣಿಗೆಯಲ್ಲಿ ಚಂಡೆ ವಾದ್ಯ, ತಮಟೆ ಹಾಗೂ ಕಾರ್ಯಕರ್ತರ ಜಯ ಘೋಷದೊಂದಿಗೆ ಮೆರವಣಿಗೆ ಸಾಗಿ ಬಂದಿತು.
ಜೆಡಿಎಸ್‌ನಿಂದ ಜಯಪ್ರಕಾಶ್ ಅವರು ಬೆಳಗ್ಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಪಟ್ಟಣದ ಹುಣಸೂರು ಬೇಗೂರು ರಸ್ತೆಯ ಮುಖಾಂತರ ತಾಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಲು ತಾವು ಪಡೆದ ಸಮಯದಂತೆ ಒಂದು ಗಂಟೆಗೆ ಬಂದಾಗ ಅದಕ್ಕೂ ಮೊದಲು ಸ್ಥಳಕ್ಕೆ ಆಗಮಿಸಿದ್ದ ಶಾಸಕ ಅನಿಲ… ಚಿಕ್ಕಮಾದು ನಾಮಪತ್ರ ಸಲ್ಲಿಸಲು ತೆರೆದ ವಾಹನದಿಂದ ಇಳಿಯುತ್ತಿರುವಾಗ ಜೆಡಿಎಸ್‌ನವರು ತಾವು ಮೊದಲು ನಾಮಪತ್ರ ಸಲ್ಲಿಸಬೇಕೆಂದು ಮುನ್ನುಗ್ಗಿ ತೆರಳಿದಾಗ ಪೊಲೀಸರು ಬಂದಿದ್ದ ಜನರನ್ನ ಚದುರಿಸಲು ತಾಲೂಕು ಕಚೇರಿ ಮುಂಭಾಗ ಲಘುಲಾಠಿ ಪ್ರಹಾರ ನಡೆಸಿದರು.
ಶಾಸಕ ಅನಿಲ… ಚಿಕ್ಕಮಾದು ಅವರು ತಮ್ಮ ನಾಮಪತ್ರ ಸಲ್ಲಿಸುವ ವೇಳೆ ತಾಲೂಕು ಅಧ್ಯಕ್ಷ ಏಜಾಜ… ಪಾಶ, ಮುಖಂಡರಾದ ಜಿಪಂ ಮಾಜಿ ಸದಸ್ಯರಾದ ನಂದಿನಿ ಚಂದ್ರಶೇಖರ್, ಚಿಕ್ಕವೀರನಾಯಕ ಎಚ್.ಸಿ. ಮಂಜುನಾಥ್ ನರಸೀಪುರ ರವಿ ಪುರಸಭಾ ಸದಸ್ಯ ಎಚ್.ಸಿ. ನರಸಿಂಹಮೂರ್ತಿ, ಮಧು, ಪುಟ್ಟಬಸವನಾಯಕ, ಪ್ರೇಮ… ಸಾಗರ್, ಮುಖಂಡರು ಕಾರ್ಯಕರ್ತರು ಇದ್ದರು.
ತಾಲೂಕು ಅಧ್ಯಕ್ಷ ರಾಜೇಂದ್ರ, ನರಸಿಂಹೇಗೌಡ, ಮಾಜಿ ಪ್ರಧಾನರಾದ ಎಂ.ಸಿ. ದೊಡ್ಡನಾಯಕ, ಯೋಗನರಸಿಂಹ ಪಟೇಲ…, ರಾಜೇಗೌಡ, ರಾಜೇಶ್, ಟೌನ್ ಅಧ್ಯಕ್ಷ ವೇಣುಗೋಪಾಲ…, ಮಹಮದ್ ಶಫಿವುಲ್ಲ, ಮುತ್ತುರಾಜ…, ತಾಲೂಕು ಕುಮಾರಸ್ವಾಮಿ ಅಭಿಮಾನಿ ಬಳಗದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.