ಆನೇಕಲ್ [ಡಿ.24]: ಆನೇಕಲ್ ಬಿಜೆಪಿ ಘಟಕದಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಆನೇಕಲ್ ತಾಲೂಕಿನ ಎಲ್ಲಾ ಜನ ಪ್ರತಿನಿಧಿಗಳು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ. 

ಇಲ್ಲಿನ ಬಿಜೆಪಿಗರಲ್ಲಿ ಅಧಿಕಾರಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಕಳೆದ ಐದು ದಿನಗಳ ಹಿಂದೆಯಷ್ಟೇ ಇಲ್ಲಿನ ಯೋಜನಾ ಪ್ರಾಧಿಕಾರಕ್ಕೆ ನಡೆದ ಅಧ್ಯಕ್ಷರ ನೇಮಕಾತಿ ವಿಚಾರವಾಗಿ ಅಸಮಾಧಾನ ಭುಗಿಲೆದ್ದಿದೆ. 

ಆನೇಕಲ್ ಯೋಜನಾ ಪ್ರಾಧಿಕಾರಕ್ಕೆ ಜಯಣ್ಣ ಅವರು ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾಗಿದ್ದು ಹಲವರ ಮುನಿಸಿಗೆ ಕಾರಣವಾಗಿದೆ. 

ಯೋಜನಾ ಪ್ರಾಧಿಕಾರದಿಂದ ಜಯಣ್ಣ ಆಯ್ಕೆಯನ್ನು ವಾಪಸು ಪಡೆಯಬೇಕು. ಇಲ್ಲವಾದಲ್ಲಿ ರಾಜೀನಾಮೆ ನೀಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ. 

ನಿಷ್ಠಾವಂತರಿಗೆ ಬಿಜೆಪಿಯಲ್ಲಿ ಸ್ಥಾನ ಇಲ್ಲ : ಸ್ವಪಕ್ಷೀಯರಿಂದಲೇ ತೀವ್ರ ಆಕ್ರೋಶ...

ಎಡಿಎ ಯಿಂದ ಜಯಣ್ಣ ಅವರನ್ನು ಬದಲಿಸದಿದ್ದರೆ ತಾಲೂಕಿನಲ್ಲಿರುವ ಮುಖಂಡರೆಲ್ಲಾ ಜವಾಬ್ದಾರಿಯುತ ಸ್ಥಾನದಿಂದ ನಿರ್ಗಮಿಸುವ ತೀರ್ಮಾನವನ್ನು ಇಲ್ಲಿನ ಕೋರ್ ಕಮಿಟಿ ತೀರ್ಮಾನ ಕೈಗೊಂಡಿದೆ. 

ಡಿಸೆಂಬರ್ 19 ರಂದು ಆನೇಕಲ್‌ ಪ್ರಾಧಿಕಾರದ ಅಧ್ಯಕ್ಷರಾಗಿ 2ನೇ ಬಾರಿ ಕೆ.ಜಯಣ್ಣ  ಅಧಿಕಾರ ಸ್ವೀಕರಿಸಿದ್ದರು. ಆದರೆ ಆಯ್ಕೆ ದಿನದಿಂದಲೂ ಭುಗಿಲೆದ್ದ ಅಸಮಾಧಾನ ಇನ್ನಾದರೂ ಕೂಡ ಬಗೆಹರಿದಂತೆ ಕಾಣುತ್ತಿಲ್ಲ.