Asianet Suvarna News Asianet Suvarna News

ನಮ್ಮ ತಂಟೆಗೆ ಬಂದವರ ಮೂಗು ತುಂಡರಿಸೋಣ: ಆಂದೋಲಾ ಶ್ರೀ

ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ನಾವು ಸುಮ್ಮನಿರೋದು ಬೇಡ, ಎಲ್ಲರೂ ಒಂದಾಗೋಣ. ನಮ್ಮ ತಂಟೆಗೆ ಬಂದವರ ಮೂಗು ತುಂಡರಿಸೋಣ ಎಂದು ಆಂದೋಲಾ ಕರುಣೇಶ್ವರ ಮಠದ ಗುರುಗಳು, ರಾಮಸೇನೆಯ ಮುಖ್ಯಸ್ಥರಾಗಿರುವ ಸಿದ್ದಲಿಂಗ ಶ್ರೀಗಳು ಕರೆ ನೀಡಿದ್ದಾರೆ.

Andola Swamiji Slams Priyanka Kharge Mallikarjun Kharge grg
Author
First Published May 5, 2024, 12:05 PM IST

ಕಲಬುರಗಿ(ಮೇ.05):  ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ನಾವು ಸುಮ್ಮನಿರೋದು ಬೇಡ, ಎಲ್ಲರೂ ಒಂದಾಗೋಣ. ನಮ್ಮ ತಂಟೆಗೆ ಬಂದವರ ಮೂಗು ತುಂಡರಿಸೋಣ ಎಂದು ಆಂದೋಲಾ ಕರುಣೇಶ್ವರ ಮಠದ ಗುರುಗಳು, ರಾಮಸೇನೆಯ ಮುಖ್ಯಸ್ಥರಾಗಿರುವ ಸಿದ್ದಲಿಂಗ ಶ್ರೀಗಳು ಕರೆ ನೀಡಿದ್ದಾರೆ.

ಕೋಟನೂರ್ ಡಿ ಗ್ರಾಮದಲ್ಲಿ 2 ದಿನಗಳ ಹಿಂದಷ್ಟೇ ಲಿಂಗಾಯಿತ ಸಮಾಜಕ್ಕೆ ಸೇರಿದ ಸಂಗಮೇಶ ಪಾಟೀಲ್ ಎಂಬುವವರ ಮನೆಗೆ ನುಗ್ಗಿ ನಡೆದಂತಹ ಹಲ್ಲೆ ಘಟನೆ ಪ್ರಧಾನವಾಗಿರಿಸಿಕೊಂಡು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಲ್ಲೆ ಸುಳ್ಳು ಜಾತಿ ನಿಂದನೆ, ಆಟ್ರಾಸಿಟಿ ಪ್ರಕರಣ ದಾಖಲಿಸುವ ಧೋರಣೆಯನ್ನು ವಿರೋಧಿಸಿ ಇಲ್ಲಿನ ಶರಣಬಸವೇಶ್ವರ ಜಾತ್ರ ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಸ್ವಾಭಿಮಾನಿ ವೀರಶೈವ ಲಿಂಗಾಯಿತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ದಾರಿ ತಪ್ಪುತ್ತಿದೆ: ಕುಮಾರಸ್ವಾಮಿ

ವೀರಶೈವ ಲಿಂಗಾಯಿತರು ಅದೆಷ್ಟು ದಿನ ಅಂತ ಹಲ್ಲೆ, ದೌರ್ಜನ್ಯಕ್ಕೊಳಗಾದರೂ ಸುಮ್ಮನಿರುತ್ತೀರಿ? ನಾವು ಧೈರ್ಯದಿಂದ ತಿರುಗಿ ಬೀಳಲೇಬೇಕು. ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಬೇಕೆಂದ ಶ್ರೀಗಳು ತಮ್ಮ ಹರಿತ ಮಾತುಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಶರಣಪ್ರಕಾಶ ಪಾಟೀಲರನ್ನ ಕುಟುಕಿದರು.

ಜ್ಯೂನಿಯರ್, ಸಿನಿಯರ್ ಕೆಆರ್‌ಜಿ ಎಂದು ಲೇವಡಿ ಮಾಡುತ್ತಲೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ನ ಲಿಂಗಾಯಿತ ವಿರೋಧಿ ಧೋರಣೆಯನ್ನು ಸಮಾಜದ ಒಗ್ಗಟ್ಟಾಗಿ ಖಂಡಿಸಬೇಕೆಂದು ಅನೇಕ ಘಟನೆಗಳನ್ನು ವಿವರಿಸಿದರು. ಪ್ರಿಯಾಂಕ್ ಖರ್ಗೆ ಮೋದಿಗೆ ಬೈಯ್ತಾರೆ, ಶರಣಪ್ರಕಾಶ ಪಾಟೀಲ್ ಸಂಘ ಪರಿವಾರಕ್ಕೆ ನಿಂದಿಸ್ತಾರೆ, ನಿಜವಾದ ಬಸವ ತತ್ವ ಪ್ರತಿಪಾದಕರಂದರೇ ಪ್ರಧಾನಿ ಮೋದಿ ಎಂಬುವುದು ಇವರಿಬ್ಬರಿಗೆ ಇನ್ನೂ ಅರಿವಿಗೆ ಬಂದಿಲ್ಲವೆಂಬುದೇ ದೊಡ್ಡ ದುರಂತವೆಂದರು.

ತಮ್ಮ ಪರಿವಾರ, ಕುಟುಂಬದವರಿಂದ ದೂರವಿದ್ದು ಸದಾಕಾಲ ದೇಶದ ಆಳಿಗೆ ಬಗ್ಗೆಯೇ ದುಡಿಯುವ ಪ್ರಧಾನಿ ಮೋದಿ ಮತ್ತೊಮ್ಮೆ ಪ್ರಧಾನಿಯಾದರಷ್ಟೇ ನಮಗೆಲ್ಲರಿಗೂ ಉಳಿಗಾಲ ಎಂದರು. ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಎಂದು ಡಾ. ಖರ್ಗೆಯವರಿಗೆ ಹೇಳುತ್ತಿದ್ದಾರೆ. ಜ್ಯೂನಿಯರ್ ಖರ್ಗೆ ಗ್ರಾಮೀಣಾಭಿವೃದ್ಧಿ ಮಂತ್ರಿಯಾ ದರೇ ಇಷ್ಟೊಂದು ತೊಂದರೆಯಲ್ಲಿ ನಾವಿದ್ದೇವೆ. ಇನ್ನು ಸಿನಿಯ‌ರ್ ಖರ್ಗೆಯವರು ಪ್ರಧಾನಿ ಆದ್ರೆ ನಮ್ಮ ಗತಿ? ಎಂದು ಸೇರಿದ್ದವರಿಗೆ ಪ್ರಶ್ನಿಸಿದರು.

ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಮಾತನಾಡಿ, ಸ್ವಾಭಿಮಾನಕ್ಕೆ ಧಕ್ಕೆ ಬಂದಲ್ಲಿ ವೀರಶೈವ ಲಿಂಗಾಯಿತರು ಸುಮ್ಮನಿರೋದು ಯಾಕೆ? ನಾವೂ ಮಾರುತ್ತರ ನೀಡೋಣ, ಸಂಘಟಿತರಾಗಿ ಸಮಾಜದ ಮೇಲೆ ಹೆಚ್ಚುತ್ತಿರುವ ಇಂತಹ ಕುಕೃತ್ಯಗಳನ್ನ ಖಂಡಿಸೋಣವೆಂದರು. ಕೋಟನೂರ್‌ಘಟನೆ ಸ್ಯಾಂಪಲ್ ಮಾತ್ರ. ಇಂತಹ ಅನೇಕ ಘಟನೆಗಳು ಜಿಲ್ಲಾದ್ಯಂತ ನಡೆಯುತ್ತಿವೆ. ಸಮಾಜದ ಅನೇಕರು ದುಃ ಖಿತರಾಗುತ್ತಿದ್ದಾರೆ. ನಮ್ಮವರಿಗೆ ಕಣ್ಣೀರು ಬರಿಸುವವರಿಗೆ ನಾವು ಮಾರುತ್ತರ ನೀಡೋಣ, ಸಮಾಜದಲ್ಲಿ ಪಕ್ಷಭೇದ ಮರೆತು ಒಂದಾಗಿ ಮುಂದಡಿ ಇಡಲು ಇದು ಸಕಾಲ ಎಂದು ರೇವೂರ್ ಕರೆ ನೀಡಿದರು.

ಮೋದಿ ಉದ್ರಿ ಭಾಷಣದಿಂದ ಬಡವರ ಹೊಟ್ಟೆ ತುಂಬೊಲ್ಲ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಲಿಂಗಾಯಿತರಿಗೆ ಡಾ. ಉಮೇಶ ಜಾಧವ್ ತುಂಬ ಸಹಾಯ ಮಾಡಿದ್ದಾರೆ. ಯಡಿಯೂರಪ್ಪ ಸಿಎಂ ಆಗಲು ಮೊದಲು ರಾಜೀನಾಮೆ ಕೊಟ್ಟು ಹೊರಬಂದವರೇ ಡಾ. ಜಾಧವ್, ಈಗ ನಾವು ಅವರಿಗೆ ಮತ ಹಾಕುವ ಮೂಲಕ ನಮ್ಮ ಸ್ವಾಭಿಮಾನಕ್ಕೆ ಪೆಟ್ಟು ಕೊಡಲು ಹಣಿಸುತ್ತಿವವರಿಗೆ ಪಾಠ ಕಲಿಸೋಣವೆಂದು ರೇವೂ‌ರ್ ಹೇಳಿದರು.

ನನ್ನ ಗಂಡನನ್ನ ಉಳಿಸಿರಿ: ಪ್ರಿಯಾಂಕಾ ಪಾಟೀಲ್

ಸಮಾವೇಶದ ವೇಕೆಯಲ್ಲಿದ್ದ ಕೋಟನೂರು ಡಿ ಗ್ರಾಮದಲ್ಲಿ ಹಲ್ಲೆಗೊಳಗಾದ ಪಾಟೀಲ್ ಸಂಗಮೇಶರ ಪತ್ನಿ ಪ್ರಿಯಾಂಕಾ ಇವರು ಸೆರಗೊಡ್ಡುತ್ತಲೇ ಕಣ್ಣೀರು ಹಾಕುತ್ತ ತಮ್ಮ ಪತಿದೇವರನ್ನ ಉಳಿಸಿಕೊಡಬೇಕು. ತಮ್ಮ ಕುಟುಂಬದ ಮೇಲಾಗುತ್ತಿರುವ ಅನ್ಯಾಯದಿಂದ ತಮ್ಮನ್ನು ಬದುಕಿಸಬೇಕು ಎಂದು ವೇದಿಕೆಯಲ್ಲೇ ಕಣ್ಣೀರು ಹಾಕಿದ್ದಾಗ ಸೇರಿದ್ದ ಸಭಿಕರು ಮೌನರಾದರು. ಕೋಟನೂರ್ ಘಟನೆಯಲ್ಲಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದರು ಎಂದು ಸುಳ್ಳು ಕಥೆ ಕಟ್ಟಿ ತಮ್ಮ ಪತಿ ಸಂಗಮೇಶರನ್ನು ಸಿಕ್ಕಿಸುವ ಪ್ರಯತ್ನ ಸಾಗಿದೆ. ಕೋಟನೂರಿನ ಕೆಲವರು ಇದರ ಹಿಂದೆ ಸಂಚು ಮಾಡುತ್ತಿದ್ದಾರೆ. ಮನೆಹೊಕ್ಕು ಎಲ್ಲರನ್ನು ಅವಾಚ್ಯವಾಗಿ ನಿಂದಿಸುತ್ತ ಥಳಿಸಿದ್ದಾರೆ. ನಮ್ಮ ಮನೆಗೆ 50 ರಿಂದ 60 ಜನ ನುಗ್ಗಿ ಬಡಿಗೆ, ಮುಳ್ಳಿನ ಕಟ್ಟಿಗೆಗಳಿಂದ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಮನೆ ಮುಂದಿನ 5 ವಾಹನಗಳಿಗೂ ಬೆಂಕಿ ಇಟ್ಟಿದ್ದಾರೆ. ಅಂದಿನ ಹಲ್ಲೆ ತೀವ್ರತೆ ನೋಡಿದರೆ ಪತಿ ಉಳಿದದ್ದೆ ಪರಮಾಶ್ಚರ್ಯ ವೆಂದು ತಮಗೊದಗಿರುವ ದುರವಸ್ಥೆಗೆ ಕಣ್ಣೀರಿಟ್ಟರು. 

Follow Us:
Download App:
  • android
  • ios