ಮಧುಮಗಳ ಚಿನ್ನದ ಸರ ಕದಿಯಲು ಆಂಧ್ರದಿಂದ ಬಂದ ಪ್ರೊಫೆಷನಲ್ ಕಳ್ಳ
ಮದುವೆ ಮನೆಗೆ ನೆಂಟರಿಷ್ಟರಂತೆ ಸ್ಟೈಲ್ ಆಗಿ ರೆಡಿಯಾಗಿ ಅಪ್ಪಚ್ಚಿ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಮದುಮಗಳ ಕೋಣೆಗೆ ತೆರಳಿ ಚಿನ್ನದ ಸರ ಕದಿಯುವಾಗ ಸಿಕ್ಕಿಬಿದ್ದು, ಮದುವೆ ಮನೆಯಲ್ಲಿದ್ದವರ ಬಳಿ ಹಿಗ್ಗಾ ಮುಗ್ಗಾ ಗೂಸಾ ತಿಂದು ಪೊಲೀಸರ ಅತಿಥಿಯಾಗಿದ್ದಾನೆ.
ಚಿಕ್ಕಬಳ್ಳಾಪುರ (ಮೇ 26): ಮದುವೆ ಮನೆಗೆ ನೆಂಟರಿಷ್ಟರಂತೆ ಸ್ಟೈಲ್ ಆಗಿ ರೆಡಿಯಾಗಿ ಅಪ್ಪಚ್ಚಿ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಮದುಮಗಳ ಕೋಣೆಗೆ ತೆರಳಿ ಚಿನ್ನದ ಸರ ಕದಿಯುವಾಗ ಸಿಕ್ಕಿಬಿದ್ದು, ಮದುವೆ ಮನೆಯಲ್ಲಿದ್ದವರ ಬಳಿ ಹಿಗ್ಗಾ ಮುಗ್ಗಾ ಗೂಸಾ ತಿಂದು ಪೊಲೀಸರ ಅತಿಥಿಯಾಗಿದ್ದಾನೆ.
ಹೌದು, ಮದುವೆ ಮನೆಯಲ್ಲಿ ಮಹಿಳೆಯರ ಚಿನ್ನದ ಸರ ಕದಿಯಲು ಯತ್ನಿಸಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರ ಹೊರವಲಯದ ಬೈಪಾಸ್ ರಸ್ತೆಯಲ್ಲಿರುವ ಸಾಯಿ ಕೃಷ್ಣ ಪಂಕ್ಷನ್ ಹಾಲ್ ನಲ್ಲಿ ನೆಡೆದಿದೆ. ಚಿನ್ನದ ಕದಿಯುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳನನ್ನು ಮದುವೆ ಮನೆಯಲ್ಲಿದ್ದವರಿ ಹಿಡಿದು ಹಿಗ್ಗಾಮುಗ್ಗ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರಲ್ಲಿ ಮೋಜಿಗಾಗಿ ವಾರಕ್ಕೆರಡು ಕೊಲೆ ಮಾಡುತ್ತಿದ್ದ ನಟೋರಿಯಸ್ ಹಂತಕ ಅರೆಸ್ಟ್!
ಮದುವೆ ಮನೆಯಲ್ಲಿ ಚಿನ್ನದ ಸರ ಕದ್ದ ಆರೋಪಿಯನ್ನು ಆಂದ್ರಪ್ರದೇಶದ ಮುಲ್ಲಮೋತುಕಪಲ್ಲಿ ಗ್ರಾಮದ ಪಿ.ನರೇಶ್ ಎಂದು ತಿಳಿದು ಬಂದಿದೆ. ಮದುವೆ ಮನೆಯಲ್ಲಿ ಮದು ಮಗಳನ್ನು ಸಿಂಗಾರಗೊಳಿಸುವ ಕೋಣೆಗೆ ತೆರಳಿದ ಕಳ್ಳ ಚಿನ್ನದ ಆಭರಣಗಳನ್ನು ಕದ್ದುಕೊಂಡು ಹೋಗಲು ಮುಂದಾಗಿದ್ದನು. ಆದರೆ, ಈ ವೇಳೆ ಮಹಿಳೆಯರ ಕೈಗೆ ಸಿಕ್ಕಿಬಿದ್ದಿದ್ದಾರೆ. ನಂತರ, ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗುವಾಗ ಕಳ್ಳ ಕಳ್ಳ ಎಂದು ಕೂಗಿಕೊಂಡಾಗ ಮದುವೆ ಮನೆಯಲ್ಲಿದ್ದ ಜನರು ಆತನನ್ನು ಹಿಡಿದುಕೊಂಡಿದ್ದಾರೆ. ನಂತರ ಆತನ ಕೈಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಹಿಗ್ಗಾ ಮುಗ್ಗಾ ತಾಮುಂದು ನೀಮುಂದು ಎನ್ನುವಂತೆ ಧರ್ಮದೇಟು ಕೊಟ್ಟಿದ್ದಾರೆ. ಈ ಘಟನೆ ಗೌರಿಬಿದನೂರು ನಗರದ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಡೆದಿದ್ದು, ಕಳ್ಳನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರಲ್ಲಿ ಹೆಚ್ಚಾಯ್ತು ನಕಲಿ ಪೊಲೀಸರ ಹಾವಳಿ; ರಾತ್ರಿ ಗಸ್ತಿನಲ್ಲಿ ಸಾರ್ವಜನಿಕರಿಂದ ಸುಲಿಗೆ
ಪ್ರೊಫೆಷನಲ್ ಕಳ್ಳತನ ಮಾಡುತ್ತಿದ್ದ ಆರೋಪಿ:
ಮದುವೆ ಮನೆಗೆ ಬಂದಿದ್ದ ಕಳ್ಳ ಪ್ರೊಫೆಷನಲ್ ಕಳ್ಳನಾಗಿದ್ದನು. ಈತ ಸಿಕ್ಕಿ ಹಾಕಿಕೊಂದರೆ ಜನರಿಂದ ತಪ್ಪಿಸಿಕೊಳ್ಳಲು ಅನುಕೂಲ ಆಗುವಂತೆ ಪೆಪ್ಪರ್ ಸ್ಪ್ರೇ ಹಾಗೂ ಸಣ್ಣ ಚಾಕುವನ್ನು ಕೂಡ ಹೊಂದಿದ್ದನು. ಜೊತೆಗೆ, ಈಗ ಯಾರಾದರೂ ತನ್ನನ್ನು ಹಿಂಬಾಲಿಸಿಕೊಂಡು ಬಂದರೆ ಅವರಿಂದ ತಪ್ಪಿಸಿಕೊಂಡು ಅತಿ ವೇಗವಾಗಿ ಹೋಗಲು ಅನುಕೂಲವಾಗುವಂತೆ ಹೈಸ್ಪೀಡ್ ಸೌಲಭ್ಯ ಹೊಂದಿದ ಟಿವಿಎಸ್ ಅಪ್ಪಾಚೆ ಬೈಕ್ ಇಟ್ಟುಕೊಂಡಿದ್ದನು. ಈತ ಮೈಮೇಲೆ ಜಾಕೆಟ್ ಹಾಗೂ ಐಎಸ್‌ಐ ಮಾರ್ಕ್ ಹೆಲ್ಮೆಟ್ ಕೂಡ ಇಟ್ಟುಕೊಂಡಿದ್ದನು.