ಪಾವಗಡ(ಜೂ.09): ಆಂಧ್ರದಿಂದ ಆಗಮಿಸಿದ್ದ ಸುಮಾರು 30ಕ್ಕೂ ಹೆಚ್ಚು ಮಂದಿ ಯುವಕರ ತಂಡ ತಾಲೂಕಿನ ನಾಗಲಮಡಿಕೆ ಕೃಷ್ಣ ನದಿ ನೀರು ಸಂಗ್ರಹದ ಉತ್ತರ ಪಿನಾಕಿನಿ ನದಿಗೆ ಮುತ್ತಿಗೆ ಹಾಕಿ ಅಲ್ಲಿನ ಡ್ಯಾಂ ಗೇಟ್‌ ತೆರೆಯಲು ಯತ್ನಿಸಿದ ಘಟನೆ ಶನಿವಾರ ಬೆಳಕಿಗೆ ಬಂದಿದೆ.

ಆಂಧ್ರ ಮತ್ತು ಕರ್ನಾಟಕ ಜನಪ್ರತಿನಿಧಿಗಳ ತೀರ್ಮಾನದಂತೆ ಪ್ರಸಕ್ತ ಸಾಲಿಗೆ ಆಂಧ್ರದ ಪೇರೊರು ಡ್ಯಾಂಗೆ ನೀರು ಸರಬರಾಜ್‌ ಮಾಡುವ ಹಿನ್ನೆಲೆಯಲ್ಲಿ ಹಂದ್ರಿನಿವಾ ಯೋಜನೆ ಅಡಿಯಲ್ಲಿ ಆಂಧ್ರದ ಆನಂತಪುರ ಜೆಲ್ಲೆ ಗೊಲ್ಲಪಲ್ಲಿ ಡ್ಯಾಂನಿಂದ ಉತ್ತರ ಪಿನಾಕಿನಿ ಹಳ್ಳದ ಮೂಲಕ ಪಾವಗಡ ತಾಲೂಕಿನ ನಾಗಲಮಡಿಕೆ ಡ್ಯಾಂಗೆ ಕೃಷ್ಣ ನದಿ ನೀರು ಬಿಡಲಾಗಿದೆ.

ನಂಜನಗೂಡಿಗೆ ಮತ್ತೆ ಕೊರೋನಾ ಕಂಟಕ

ಎರಡು ರಾಜ್ಯಗಳ ಒಪ್ಪಿಗೆ ನಿಯಮನುಸಾರ ನೀರು ಬಿಟ್ಟಹಿನ್ನೆಲೆಯಲ್ಲಿ ಇಲ್ಲಿನ ನಾಗಲಮಡಿಕೆ ಉತ್ತರ ಪಿನಾಕಿನಿ ಡ್ಯಾಂ ಪೂರಾ ಭರ್ತಿಯಾಗಿದೆ. ಡ್ಯಾಂ ತುಂಬಿ ಹೆಚ್ಚಾದ ನೀರು ಡ್ಯಾಂ ಮೇಲ್ಭಾಗದಲ್ಲಿ ಹರಿಯುವ ನೀರನ್ನು ಉತ್ತರ ಪಿನಾಕಿನಿ ಕಾಲುವೆ ಮೂಲಕ ಆಂಧ್ರದ ಪೇರೂರು ಡ್ಯಾಂಗೆ ತೆಗೆದುಕೊಂಡು ಹೋಗಲು ಇಲ್ಲಿನ ಬಹುತೇಕ ಜನತೆಯ ಉದ್ದೇಶವಾಗಿದೆ. ತಾ.ನಾಗಲಮಡಕೆ ಡ್ಯಾಂನಲ್ಲಿ ಸಂಗ್ರಹವಾದ ಈ ನೀರನ್ನು ಪೈಪ್‌ಲೈನ್‌ ಮೂಲಕ ಪಾವಗಡ ಪಟ್ಟಣಕ್ಕೆ ಕುಡಿವ ನೀರು ಕಲ್ಪಿಸಲು ಉದ್ದೇಶಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಡ್ಯಾಂ ತುಂಬಿ ಹೆಚ್ಚಿಗೆ ಬರುವ ನದಿ ನೀರನ್ನು ಪೇರೂರು ಡ್ಯಾಂಗೆ ಸರಬರಾಜ್‌ ಮಾಡಿಕೊಳ್ಳಲು ಅಭ್ಯಂತರವಿಲ್ಲವೆಂಬುವುದು ಕೆಲವರ ವಾದವಾಗಿದ್ದು ಆಂಧ್ರದವರ ಪ್ರಕಾರ ನಾಗಲಮಡಿಕೆ ಡ್ಯಾಂಗೆ 6ಅಡಿಗಳಷ್ಟುಮಾತ್ರ ನೀರು ತುಂಬಿಸಿ ಉಳಿಕೆ ನೀರು ಆಂಧ್ರದ ಪೇರೂರು ಡ್ಯಾಂಗೆ ಸರಬರಾಜ್‌ ಮಾಡಲು ಮಾತುಕತೆಯಾಗಿದೆ. ಈ ಪ್ರಕಾರ 6ಅಡಿ ಹೊರತುಪಡಿಸಿ ಉಳಿಕೆ ನೀರನ್ನು ಡ್ಯಾಂನ ಗೇಟ್‌ ತೆರೆದು ಪೇರೂರು ಡ್ಯಾಂಗೆ ಬಿಡುವಂತೆ ಅವರ ಒತ್ತಾಯವಾಗಿದೆ.

ನಾಗಲಮಡಿಕೆಗೆ ಡ್ಯಾಂಗೆ ಆಂಧ್ರದ ಕೃಷ್ಣ ನದಿ ನೀರು

ಈ ಹಿನ್ನೆಲೆಯಲ್ಲಿ ತಾಲೂಕಿನ ನಾಗಲಮಡಿಕೆ ಡ್ಯಾಂಗೆ ಮುತ್ತಿಗೆ ಹಾಕಿದ ಆಂಧ್ರ ಯುವಕರ ಗುಂಪು ಡ್ಯಾಂನ ಗೇಟ್‌ ತೆರೆಯಲು ಮುಂದಾಗುತ್ತಿದ್ದಂತೆ ಇಲ್ಲಿನ ಹಲವಾರು ಮಂದಿ ಸಾರ್ವಜನಿಕರು ಮತ್ತು ಪೊಲೀಸರು ತಡೆದಿದ್ದರೆನ್ನಾಗಿದ್ದು ಈ ಸಂಬಂಧ ಆಂಧ್ರದವರು ಮತ್ತೆ ಆಗಮಿಸಿ ಡ್ಯಾಂನ ಗೇಟ್‌ ತೆರೆಯಲು ಯತ್ನಿಸುವ ಅವಕಾಶಗಳಿವೆ. ನಿಯಮನುಸಾರ ಗೇಟ್‌ ತೆರೆಯಲು ಅವಕಾಶವಿಲ್ಲ. ಡ್ಯಾಂ ಬಳಿ ಹೆಚ್ಚಿನ ಭದ್ರತೆ ಕಲ್ಪಿಸುವಂತೆ ತಾಲೂಕಿನ ತಿರುಮಣಿ ಪೊಲೀಸ್‌ ಠಾಣೆ ಸಿಪಿಐ ಅವರಿಗೆ ಪುರಸಭೆಯಿಂದ ದೂರು ಸಲ್ಲಿಸಿರುವುದಾಗಿ ತಿಳಿದಿದೆ.