Asianet Suvarna News Asianet Suvarna News

ನಾಗಲಮಡಿಕೆಗೆ ಡ್ಯಾಂಗೆ ಆಂಧ್ರದ ಕೃಷ್ಣ ನದಿ ನೀರು

ಅಂದು ಹಲವು ವಿರೋಧದ ನಡುವೆಯೂ ಶಾಸಕ ವೆಂಕಟರಮಣಪ್ಪ ಅವರ ನೇತೃತ್ವದಲ್ಲಿ .14 ಕೋಟಿ ವೆಚ್ಚದಲ್ಲಿ ಡ್ಯಾಂ ನಿರ್ಮಾಣ ಮಾಡಿಸಿದ ಹಿನ್ನೆಲೆಯಲ್ಲಿ ಇಂದು ತಾಲೂಕಿನ ನಾಗಲಮಡಿಕೆ ಡ್ಯಾಂಗೆ ಆಂಧ್ರದ ಕೃಷ್ಣ ನದಿ ನೀರು ಹರಿದು ಬರಲು ಸಾಧ್ಯವಾಗಿದೆ ಎಂದು ಪುರಸಭೆ ಸದಸ್ಯ ಪಿ.ಬಾಲಸುಬ್ರಮಣ್ಯಂ ಅಭಿಪ್ರಾಯಪಟ್ಟರು.

Nagalamadike dam filled by krishna river water
Author
Bangalore, First Published Jun 5, 2020, 3:09 PM IST

ತುಮಕೂರು(ಜೂ.05): ಅಂದು ಹಲವು ವಿರೋಧದ ನಡುವೆಯೂ ಶಾಸಕ ವೆಂಕಟರಮಣಪ್ಪ ಅವರ ನೇತೃತ್ವದಲ್ಲಿ .14 ಕೋಟಿ ವೆಚ್ಚದಲ್ಲಿ ಡ್ಯಾಂ ನಿರ್ಮಾಣ ಮಾಡಿಸಿದ ಹಿನ್ನೆಲೆಯಲ್ಲಿ ಇಂದು ತಾಲೂಕಿನ ನಾಗಲಮಡಿಕೆ ಡ್ಯಾಂಗೆ ಆಂಧ್ರದ ಕೃಷ್ಣ ನದಿ ನೀರು ಹರಿದು ಬರಲು ಸಾಧ್ಯವಾಗಿದೆ ಎಂದು ಪುರಸಭೆ ಸದಸ್ಯ ಪಿ.ಬಾಲಸುಬ್ರಮಣ್ಯಂ ಅಭಿಪ್ರಾಯಪಟ್ಟರು.

ಈ ಕುರಿತು ಕನ್ನಡಪ್ರಭದ ಜತೆ ಮಾತನಾಡಿದ ಪಟ್ಟಣದ 7ನೇ ವಾರ್ಡ್‌ ಕೌನ್ಸಿಲರ್‌ ಪಿ.ಬಾಲಸುಬ್ರಮಣ್ಯಂ, ಕುಡಿವ ನೀರು ಅಭಾವ ನಿಗಿಸುವ ಸಲುವಾಗಿ 2003ರಲ್ಲಿ ಶಾಸಕರಾಗಿದ್ದ ಈಗಿನ ಶಾಸಕ ವೆಂಕಟರಮಣಪ್ಪ ವಿವಿಧ ಯೋಜನೆ ಅಡಿಯಲ್ಲಿ ತಾಲೂಕಿನ ನಾಗಲಮಡಿಕೆಯಲ್ಲಿ ಹರಿಯುವ ಉತ್ತರ ಪಿನಾಕಿನಿ ನದಿಗೆ .14ಕೋಟಿ ವೆಚ್ಚದಲ್ಲಿ ಗುಣಮಟ್ಟದ ಬೃಹತ್‌ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು.

ಕೊಡಗು ಮಹಾಮಳೆ ಸಂತ್ರಸ್ತರ ಮುಖದಲ್ಲಿ ಮಂದಹಾಸ: ಮನೆ ಹಸ್ತಾಂತರದ ಸಂಭ್ರಮದ ಕ್ಷಣ ಹೀಗಿತ್ತು

ಡ್ಯಾಂನಲ್ಲಿ ಸ್ಟೊರೇಜ್‌ ಆಗುವ ನೀರನ್ನು ಪೈಪ್‌ಗಳ ಮೂಲಕ ಲಿಪ್ಟ್‌ ಮಾಡಿ ಬಳಿಕ ಪಟ್ಟಣದ 23 ವಾರ್ಡ್‌ಗಳಿಗೆ ನೀರು ಕಲ್ಪಿಸಲು ನಾಗಲಮಡಿಕೆ ಡ್ಯಾಂನಿಂದ ಪಾವಗಡಕ್ಕೆ ಸುಮಾರು 17ಕಿಮೀ ದೂರದ ಪೈಪ್‌ಲೈನ್‌ ಕಾಮಗಾರಿ ಸಹ ನಿರ್ಮಾಣ ಮಾಡಿಸಲಾಗಿತ್ತು. ಇದರ ನಿರ್ವಹಣೆ ಹೊತ್ತ ಪುರಸಭೆ ಡ್ಯಾಂನಲ್ಲಿ ಸ್ಟೊರೇಜ್‌ ಆದ ನೀರನ್ನು ಪೈಪುಲೈನ್‌ ಮೂಲಕ ಕೆಲ ವರ್ಷಗಳ ಕಾಲ ಪಾವಗಡಕ್ಕೆ ಕುಡಿವ ನೀರು ಸರಬರಾಜ್‌ ಮಾಡಲಾಗಿತ್ತು.

ಮಳೆಯ ಅಭಾವದ ಹಿನ್ನೆಲೆಯಲ್ಲಿ ಡ್ಯಾಂನಲ್ಲಿ ನೀರು ಖಾಲಿಯಾದ ಪರಿಣಾಮ ಡ್ಯಾಂನಿಂದ ನೀರು ಸರಬರಾಜು ಸ್ಥಗಿತವಾಘಿದ್ದು, ಈಗ ಆಂಧ್ರ ಮತ್ತು ಕರ್ನಾಟಕ ಸರ್ಕಾರದ ಒಪ್ಪಂದ ಮೇರೆಗೆ ಆಂಧ್ರದ ಪೇರೂರು ಡ್ಯಾಂಗೆ ನೀರು ಸರಬರಾಜು ಮಾಡಲು ಸುಮಾರು 25ಕಿಮೀ ದೂರದ ಆಂಧ್ರದ ಗೊಲ್ಲಪಲ್ಲಿ ಡ್ಯಾಂನಿಂದ ಸರಬರಾಜ್‌ ಆಗುತ್ತಿರುವ ಕೃಷ್ಣೆ ನೀರು ಪಾವಗಡದ ನಾಗಲಮಡಿಕೆಯ ಉತ್ತರ ಪಿನಾಕಿನಿ ಹಳ್ಳದಿಂದಲೇ ಹರಿಸಲಾಗುತ್ತಿದ್ದು, ಈ ಸಂಬಂಧ ತಾಲೂಕಿನ ನಾಗಲಮಡಿಕೆ ಡ್ಯಾಂಗೆ ಕೃಷ್ಣ ನದಿ ನೀರು ಈಗಾಗಲೇ ಹರಿದು ಬಿಡಲಾಗಿದೆ.

ಕೊಡಗು ಮನೆ ಹಸ್ತಾಂತರದಲ್ಲಿ ಎಚ್‌ಡಿಕೆ ಕಡೆಗಣನೆ: ಜೆಡಿಎಸ್‌ ಪ್ರತಿಭಟನೆ

ಶಾಸಕ ವೆಂಕಟರಮಣಪ್ಪ ನೇತೃತ್ವದಲ್ಲಿ ಪುರಸಭೆಯ 50ಲಕ್ಷ ವೆಚ್ಚದಲ್ಲಿ ನಾಗಲಮಡಿಕೆ ಡ್ಯಾಂನಿಂದ ಪಾವಗಡಕ್ಕೆ ಕುಡಿವ ನೀರು ಸರಬರಾಜು ಪೈಪುಲೈನ್‌ ಕಾಮಗಾರಿಯ ದುರಸ್ತಿ ಕೈಗೊಳ್ಳಲಾಗಿದೆ. ಈಗಾಗಲೇ ದುರಸ್ತಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಇನ್ನೂ ಕೆಲವೇ ದಿನಗಳಲ್ಲಿ 50 ಲಕ್ಷ ಲೀ. ಸಾಮಾರ್ಥ್ಯದ ಪಾವಗಡದ ಒವರ್‌ಹೆಡ್‌ ಟ್ಯಾಂಕ್‌ ಮತ್ತು ಅಗಸರ ಕುಂಟೆಗೆ ಕೃಷ್ಣ ನದಿ ನೀರು ಸರಬರಾಜು ಆಗಲಿದೆ. ಆ ಮೂಲಕ ಪಟ್ಟಣದ 23ವಾರ್ಡ್‌ಗಳಿಗೆ ಕುಡಿವ ನೀರು ಲಭ್ಯವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ತಾಲೂಕಿನ ಜನತೆಯ ಕುಡಿವ ನೀರು, ನೀರಾವರಿ ಪ್ರಗತಿಗೆ ಭದ್ರಾ ಮೇಲ್ದಂಡೆ ಮತ್ತು ರೈಲ್ವೇ ಯೋಜನೆ ಕಾಮಗಾರಿಗಳ ಪ್ರಗತಿಗೆ ಆಸಕ್ತಿ ಹೊಂದಿದ ಶಾಸಕ ವೆಂಕಟರಮಣಪ್ಪ ಮತ್ತು ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಎಚ್‌.ವಿ.ವೆಂಕಟೇಶ್‌ ಅವರಿಗೆ ತಾಲೂಕಿನ ಜನತೆ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಇದೇ ವೇಳೆ ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಸಂಯೋಜಕ ಪಾವಗಡ ಷಾಬಾಬು ಇದ್ದರು.

Follow Us:
Download App:
  • android
  • ios