ಬೇಲೂರಿನ ನದಿ ತೀರದಲ್ಲಿ ಪ್ರಾಚೀನ ಕಾಲದ ವಿಗ್ರಹ ಒಂದು ಪತ್ತೆಯಾಗಿದೆ. ಗ್ರಾಮಸ್ಥರು  ತಂದು ಅದಕ್ಕೆ ಪೂಜೆ ಸಲ್ಲಿಸಿದ್ದಾರೆ. 

 ಸಕಲೇಶಪುರ (ಮಾ.25):  ತಾಲೂಕಿನ ಹಾಲೇಬೇಲೂರು ಗ್ರಾಮದ ಹೇಮಾವತಿ ನದಿ ತೀರದಲ್ಲಿ ಪುರಾತನ ಕಾಲದ ಚನ್ನಕೇಶವ ವಿಗ್ರಹವೊಂದು ಮಂಗಳವಾರ ರಾತ್ರಿ ಪತ್ತೆಯಾಗಿದೆ. 

ಹಾಲೇಬೇಲೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ವೇಳೆ ಜೆಸಿಬಿ ಮುಖಾಂತರ ಮರಳು ತೆಗೆಯುವಾಗ ವಿಗ್ರಹ ಪತ್ತೆಯಾಗಿದ್ದು, ಹೆದರಿದ ಜೆಸಿಬಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. 
ವಿಷಯ ತಿಳಿದ ಗ್ರಾಮಸ್ಥರು ವಿಗ್ರಹವನ್ನು ಗ್ರಾಮದಲ್ಲಿರುವ ಚನ್ನಕೇಶವ ದೇವಸ್ಥಾನದ ಮುಂದೆ ಇರಿಸಿ ಪೂಜೆ ಸಲ್ಲಿಸಿದ್ದಾರೆ. 

ಆಲೂರು: ನಿಧಿಗಾಗಿ ದೇಗುಲದಲ್ಲಿ ಗುಂಡಿ ಅಗೆದ ಖದೀಮರು..!

ವಿಗ್ರಹ ಸುಮಾರು 4 ಅಡಿ ಎತ್ತರವಿದ್ದು, ಯಾವ ಕಾಲಕ್ಕೆ ಸೇರಿದ್ದು ಎಂಬುದನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.