ಕಾರವಾರ (ಏ.08): 25 ವರ್ಷದಿಂದ ಅಧಿಕಾರದಲ್ಲಿದ್ದು, ಜಿಲ್ಲೆಯ ಅಭಿವೃದ್ಧಿ ಮಾಡದೇ ಇರುವುದರಿಂದ ಅನಂತಕುಮಾರ ಹೆಗಡೆ ಸಂಸದರಾಗಿ ಇದ್ದರೆಷ್ಟುಬಿಟ್ಟರೆಷ್ಟುಎಂದು ಹೇಳಿದ್ದೇನೆಂದು ಮಾಜಿ ಸಚಿವ ಆನಂದ ಅಸ್ನೋಟಿಕರ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಅನಂತಕುಮಾರ ಹೆಗಡೆ ಸಾಯಬೇಕು. ಸತ್ತರೆ ಒಳ್ಳೆಯದು ಎಂದು ತಾವು ಹೇಳಲಿಲ್ಲ. 

ಅನಂತಕುಮಾರ್ ಹೆಗಡೆ ಸತ್ತರೇನು? ಇದ್ದರೇನು? ಮಾಜಿ ಸಚಿವ ವಿವಾದಾತ್ಮಕ ಹೇಳಿಕೆ

ಬಿಜೆಪಿಗರು ತಪ್ಪಾಗಿ ಅರ್ಥೈಸಿದ್ದಾರೆ. ಈ ಹಿಂದೆ ಅನಂತಕುಮಾರ ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿಕೆ ನೀಡಿ ಸಂಸತ್ತಿನಲ್ಲಿ ಪ್ರಧಾನಮಂತ್ರಿ ಒಳಗೊಂಡು ಬಿಜೆಪಿಗರು ತಲೆತಗ್ಗಿಸುವ ಕೆಲಸವನ್ನು ಸಂಸದರು ಮಾಡಿಲ್ಲವೇ? ತಾನು ಬಿಜೆಪಿಯಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಅನಂತಕುಮಾರ ರೀತಿ ಪಕ್ಷದ ಮಾನ, ಮರ್ಯಾದೆ ತೆಗೆಯುವ ಕೆಲಸ ಮಾಡಿಲ್ಲ ಎಂದರು.