ಹಳಿಗೆ ಅಡ್ಡಲಾಗಿ ಬಿದ್ದ ಮರ: ರೈಲು ಅವಘಡ ತಪ್ಪಿಸಲು ಕೆಂಪು ವಸ್ತ್ರ ಹಿಡಿದು ವೃದ್ದೆಯ ಸಾಹಸ!
ರೈಲು ಹಳಿಗೆ ಮರ ಬಿದ್ದಿದ್ದನ್ನ ಕಂಡು ಸಂಭಾವ್ಯ ಅನಾಹುತ ತಪ್ಪಿಸಿ ವೃದ್ದೆಯೊಬ್ಬರು ಸಾಹಸ ಮೆರೆದು ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದ್ದಾರೆ.
ಮಂಗಳೂರು (ಏ.4): ರೈಲು ಹಳಿಗೆ ಮರ ಬಿದ್ದಿದ್ದನ್ನ ಕಂಡು ಸಂಭಾವ್ಯ ಅನಾಹುತ ತಪ್ಪಿಸಿ ವೃದ್ದೆಯೊಬ್ಬರು ಸಾಹಸ ಮೆರೆದು ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದ್ದಾರೆ.
ಮಂಗಳೂರು(Mangaluru) ಹೊರವಲಯದ ಪಚ್ಚನಾಡಿ ಸಮೀಪದ ಮಂದಾರ ಬಳಿ ಘಟನೆ ನಡೆದಿದ್ದು, ರೈಲು ಹಳಿಗೆ ಮರ ಬಿದ್ದಿದ್ದನ್ನ 70ರ ಹರೆಯದ ಚಂದ್ರವತಿ ಗಮನಿಸಿದ್ದರು. ಅದೇ ವೇಳೆ ಮಂಗಳೂರು-ಮುಂಬೈ ಮತ್ಸ್ಯಗಂಧ ರೈಲು(Mangalore-Mumbai Matsyagandha train) ಸಂಚರಿಸುವುದರಲ್ಲಿತ್ತು. ಇದನ್ನ ಗಮನಿಸಿ ತಕ್ಷಣ ಮನೆಗೆ ಓಡಿ ಕೆಂಪು ಬಟ್ಟೆ ತಂದು ರೈಲು ನಿಲ್ಲಿಸಲು ಚಂದ್ರವತಿ ಯತ್ನಿಸಿದ್ದಾರೆ.
ಅಪಾಯ ಅರಿತು ತಕ್ಷಣ ರೈಲು ನಿಲ್ಲಿಸಿದ ಲೋಕೋಪೈಲೆಟ್ ದುರಂತ ತಪ್ಪಿಸಿದ್ದಾರೆ. ಸುಮಾರು ಅರ್ಧ ತಾಸಿನ ಬಳಿಕ ಮರ ತೆರವು ಮಾಡಿದ ನಂತರ ರೈಲು ಮತ್ತೆ ಪ್ರಯಾಣ ಆರಂಭಿಸಿದೆ. ವೃದ್ದೆ ಚಂದ್ರವತಿ ಅವರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ದೇಶದ 13 ರಾಜ್ಯಗಳಲ್ಲೀಗ ವಂದೇ ಭಾರತ್ ರೈಲು ಸೇವೆ
ಸುಮಾರು 2.10ರ ಸುಮಾರಿಗೆ ರೈಲು ಹಳಿಗೆ ಮರ ಬಿದ್ದಿತ್ತು. ಅದೇ ಸಮಯಕ್ಕೆ ಮಂಗಳೂರಿನಿಂದ ಮುಂಬಯಿಗೆ ಮತ್ಸಗಂಧ ರೈಲು ಸಂಚರಿಸುವುದರಲ್ಲಿತ್ತು. ಆಯರಮನೆ ಸಮೀಪ ರೈಲ್ವೇ ಹಳಿಗೆ ಮರ ಬಿದ್ದಿತ್ತು. ಇದೇ ಸಮಯಕ್ಕೆ ರೈಲು ಬರುವುದನ್ನು ಅರಿತಿದ್ದ ಚಂದ್ರಾವತಿ ಅವರು ಕೆಂಪು ಬಟ್ಟೆ ತಂದು ಇನ್ನೊಂದು ಹಳಿಯಲ್ಲಿ ನಿಂತು ರೈಲು ನಿಲ್ಲಿಸಲು ಸೂಚನೆ ನೀಡಿದ್ದಾರೆ. ಕೆಲವು ವರ್ಷಗಳ ಹಿಂದೆ ಪಚ್ಚನಾಡಿಯಲ್ಲಿ ರೈಲು ಹಳಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ್ದ ಕೃಷಿಕ ಪ್ರಾಂಕ್ಲಿನ್ ಫೆರ್ನಾಂಡಿಸ್ ಅವರು ರಥಪುಷ್ಪದ ಹೂವನ್ನು ಕೈಯಲ್ಲಿ ಹಿಡಿದು ರೈಲು ನಿಲ್ಲಿಸುವ ಮೂಲಕ ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿದ್ದರು.