ಜಾತಿ ನಾಶ ಮಾಡಿದರೆ ಪ್ರಬುದ್ಧ ಸಮಾಜದ ನಿರ್ಮಾಣ ಸಾಧ್ಯ

ಸಾಮ್ರಾಜ್ಯಶಾಹಿ ಮತ್ತು ಜಾತಿ ವ್ಯವಸ್ಥೆಯು ದೇಶದ ಮೊದಲ ಶತ್ರು. ಜಾತಿ ನಾಶ ಮಾಡಿದರೆ ಪ್ರಬುದ್ಧ ಸಮಾಜದ ನಿರ್ಮಾಣ ಸಾಧ್ಯ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ. ಮಹೇಶ್‌ ಚಂದ್ರಗುರು ತಿಳಿಸಿದರು.

An enlightened society can be built if caste is destroyed snr

 ಮೈಸೂರು :  ಸಾಮ್ರಾಜ್ಯಶಾಹಿ ಮತ್ತು ಜಾತಿ ವ್ಯವಸ್ಥೆಯು ದೇಶದ ಮೊದಲ ಶತ್ರು. ಜಾತಿ ನಾಶ ಮಾಡಿದರೆ ಪ್ರಬುದ್ಧ ಸಮಾಜದ ನಿರ್ಮಾಣ ಸಾಧ್ಯ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ. ಮಹೇಶ್‌ ಚಂದ್ರಗುರು ತಿಳಿಸಿದರು.

ನಗರದ ರೋಟರಿ ಸಭಾಂಗಣದಲ್ಲಿ ಜಾತಿ ನಿರ್ಮೂಲನ ಸಮಿತಿ ಹಾಗೂ ಸಿಪಿಐಎಂಎಲ್‌ (ರೆಡ್‌ ಸ್ಟಾರ್‌) ಸಂಯುಕ್ತವಾಗಿ ಶುಕ್ರವಾರ ಆಯೋಜಿಸಿದ್ದ ಫ್ಯಾಸಿಸಂ ಮತ್ತು ಜಾತಿ ನಿರ್ಮೂಲನೆಯಲ್ಲಿ ನಮ್ಮ ಕಾರ್ಯಾಭಾರಗಳು ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ವಿಶ್ವದ ಬೇರೆಲ್ಲೂ ಇಲ್ಲದ ಜಾತಿ ವ್ಯವಸ್ಥೆಯು ಭಾರತದಲ್ಲಿ ಉದ್ಭವಿಸಲು ವೈದಿಕರು ಕಾರಣ. ಅವರ ಲಾಭಕ್ಕಾಗಿ ಈ ವ್ಯವಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಇದರಿಂದಾಗಿ ಬಡತನ, ನಿರುದ್ಯೋಗ ಹೆಚ್ಚಾಗಿದೆ. ತಮ್ಮ ಅಧಿಕಾರದ ದಾಹಕ್ಕಾಗಿ ಸಮಾಜವನ್ನು ಬಲಿ ಕೊಡಲಾಗುತ್ತಿದೆ. ಈ ವ್ಯವಸ್ಥೆಯಿಂದ ಹೊರಬಂದು ಜಾತಿ ನಾಶ ಮಾಡಿದರೆ ಪ್ರಬುದ್ಧ ಸಮಾಜದ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು.

ಖಡಕ್ ಉತ್ತರ ಕೊಟ್ಟಿದ್ದ ಕಾಲ

ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್ ಮತ್ತು ಪರಿಮಳ ಜಗ್ಗೇಶ್ ಅವರದ್ದು ಸುಂದರ ದಾಂಪತ್ಯ. ಜಗ್ಗೇಶ್ ಮತ್ತು ಪರಿಮಳ ಹಸೆಮಣೆ ಏರಿ 38 ವರ್ಷಗಳೇ ಕಳೆದಿವೆ. ಇಬ್ಬರೂ ಪ್ರೀತಿಸಿ ಮನೆಯವರನ್ನು ಎದುರು ಹಾಕಿಕೊಂಡು ಮದುವೆಯಾದವರು. ಇಬ್ಬರ ಪ್ರೀತಿ ವಿಚಾರ ಸುಪ್ರಿಂ ಕೋರ್ಟ್ ಮೆಟ್ಟಿಲೇರಿತ್ತು. ಪ್ರೀತಿಯನ್ನು ಗೆದ್ದು ಮದುವೆಯಾದ ಜೋಡಿಗೆ ಜಾತಿ ವ್ಯವಸ್ಥೆ ಅಡ್ಡಿ ಬಂದಿತ್ತು. ಜಗ್ಗೇಶ್ ಮತ್ತು ಪರಿಮಳಾ ಜಗ್ಗೇಶ್ ಅವರದ್ದು ಅಂತರ್ಜಾತಿ ವಿವಾಹ. ಆ ಕಾಲದಲ್ಲಿಯೇ ಬೇರೆ ಜಾತಿ ಯುವತಿಯನ್ನು ಪ್ರೀತಿಸಿ ಮದುವೆಯಾದವರು ಜಗ್ಗೇಶ್. ಇಂದು ಸುಖ ಸಂಸಾರ ನಡೆಸುತ್ತಿದ್ದಾರೆ. 

ಸದ್ಯ ಜಗ್ಗೇಶ್ ವಿದೇಶದಲ್ಲಿದ್ದಾರೆ. ಪತ್ನಿ ಪರಿಮಳ ಜೊತೆ ವಿದೇಶಿ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ಪತ್ನಿ ಜೊತೆ ಇರುವ ಫೋಟೋ ಶೇರ್ ಮಾಡಿರುವ ಜಗ್ಗೇಶ್‌ಗೆ ಅಭಿಮಾನಿಯೊಬ್ಬ ನಿಮ್ಮದು ಅಂತರ್ಜಾತಿ ವಿವಾಹನ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಜಗ್ಗೇಶ್ ಜಾತಿ ವ್ಯವಸ್ಥೆಯ ದರಿದ್ರ ಕಾಲ ಅದು, ಆಗ ಮದುವೆಯಾದೆವು, ಕುಲದಿಂದ ಹೊರಹಾಕಿದರು ಎಂದು ಉತ್ತರಿಸಿದ್ದಾರೆ. ತಾನು ಒಕ್ಕಲಿಗ, ಪತ್ನಿ ತಮಿಳುನಾಡಿದ ಗೌಂಡರ್ ಎಂದು ಜಗ್ಗೇಶ್ ತನ್ನ ಜಾತಿಯನ್ನು ರಿವೀಲ್ ಮಾಡಿದ್ದಾರೆ.  

ಸಾಮ್ರಾಜ್ಯಶಾಹಿಯು ದೀರ್ಘ ಕಾಲ ವಿಜೃಂಭಿಸಲು ಸಾಧ್ಯವಿಲ್ಲ. ಆದರೆ, ರಾಕ್ಷಸರನ್ನು ಸೃಷ್ಟಿಸುತ್ತಿದೆ. ಮೂಲಭೂತ ಹಕ್ಕುಗಳು ಮಾಯವಾಗಿ, ಮಹಿಳೆಯರು ಬಲಿಯಾಗುತ್ತಿದ್ದಾರೆ. ರೈತ, ದುಡಿಯುವ ವರ್ಗಗಳು ಇವರ ಆರ್ಭಟಕ್ಕೆ ದಿಕ್ಕು ತೋಚದಂತೆ ಕುಳಿತಿದ್ದಾರೆ. ಆರ್‌ಎಸ್‌ಎಸ್‌ ಸಾಮ್ರಾಜ್ಯಶಾಹಿಯ ತಾಯಿ ನೆಲ. ಸಂಸ್ಕೃತಿ, ಶಿಕ್ಷಣ, ಆರ್ಥಿಕತೆಯಲ್ಲೂ ಸಾಮ್ರಾಜ್ಯಶಾಹಿಯು ಪ್ರಭುತ್ವ ಸಾಧಿಸಲು ಹವಣಿಸುತ್ತಿದೆ ಎಂದು ಅವರು ದೂರಿದರು.

ರಾಷ್ಟ್ರೀಯ ಶಿಕ್ಷಣ ನೀತಿಯು ಖಾಸಗೀಕರಣ ಮತ್ತು ಕೇಸರೀಕರಣವನ್ನು ಉತ್ತೇಜಿಸುತ್ತಿದೆ. ಗುಲಾಮರಾಗಿ ಇರುವವರಿಗೆ ವಿಶ್ವವಿದ್ಯಾಲಯದ ಉನ್ನತ ಹುದ್ದೆಗಳು ದೊರೆಯುತ್ತಿವೆ. ಶಿಕ್ಷಣವು ಭಾರತೀಕರಣ ಆಗಬೇಕಿದೆ ಎಂದು ಅವರು ಆಶಿಸಿದರು.

ಫ್ಯಾಸಿಸಂ ಮತ್ತು ಜಾತಿ ನಿರ್ಮೂಲನೆಯಲ್ಲಿ ನಮ್ಮ ಕಾರ್ಯಾಭಾರಗಳು ಕುರಿತ ಸಿಪಿಐಎಂಎಲ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಜೆ. ಜೇಮ್ಸ್‌ ವಿಚಾರ ಮಂಡಿಸಿದರು.

ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಸರ್ವೋದಯ ಕರ್ನಾಟಕದ ಮುಖಂಡ ಉಗ್ರ ನರಸಿಂಹೇಗೌಡ, ಮೈಸೂರು ವಕೀಲರ ಸಂಘದ ಕಾರ್ಯದರ್ಶಿ ಎಸ್‌. ಉಮೇಶ್‌, ವಕೀಲ ಬಿ.ಆರ್‌. ರಂಗಸ್ವಾಮಿ, ಸಿಪಿಐಎಂಎಲ್‌ ರಾಜ್ಯ ಕಾರ್ಯದರ್ಶಿ ಬಿ. ರುದ್ರಯ್ಯ, ಜಿಲ್ಲಾ ಕಾರ್ಯದರ್ಶಿ ಕಂದೇಗಾಲ ಶ್ರೀನಿವಾಸ್‌ ಮೊದಲಾದವರು ಇದ್ದರು.

'ಹೌದು ಒಕ್ಕಲಿಗ, ಆಕೆ ತಮಿಳುನಾಡಿನ ಗೌಂಡರ್. ನಮ್ಮಿಬ್ಬರ ಮದುವೆ 1984ರಲ್ಲಿ ಆದದ್ದು. ಜಾತಿ ವ್ಯವಸ್ಥೆಯ ದರಿದ್ರ ಕಾಲ, ಅಂದು ನಮ್ಮನ್ನ ಕುಲದಿಂದ ಹೊರ ಹಾಕಿ ಊರು ಬಿಟ್ಟು ಓಡಿಸಿಬಿಟ್ಟರು. ತಿನ್ನಲು ಅನ್ನವಿಲ್ಲದೆ ಮಂತ್ರಾಲಯಕ್ಕೆ ಹೋಗಿ ರಾಯರ ಸೇವೆ ಮಾಡಿ ಮಠದಲ್ಲಿ ಒಂದು ಹೊತ್ತು ಊಟ ಮಾಡಿ 6 ತಿಂಗಳು ಬದುಕಿದೆವು. ಜಾತಿ ವ್ಯವಸ್ಥೆ ತೊಲಗಬೇಕು ದೇಶದಿಂದ ಅದೆ ನನ್ನ ಧ್ಯೇಯ. ಅದೆ ಕಾರಣ ತೋತಾಪುರಿ ಇಂದು ನಾನು ಇಷ್ಟಪಟ್ಟು ಮಾಡಿದ್ದು' ಎಂದು ಹೇಳಿದ್ದಾರೆ. 

ಕನ್ನಡ ಚಿತ್ರರಂಗಕ್ಕೆ ರಿಷಬ್ ಶೆಟ್ಟಿ ಅದ್ಭುತ ಕೊಡುಗೆ; ವಿದೇಶದಲ್ಲಿ 'ಕಾಂತಾರ' ನೋಡಿ ಹೊಗಳಿದ ಜಗ್ಗೇಶ್

Latest Videos
Follow Us:
Download App:
  • android
  • ios