Asianet Suvarna News Asianet Suvarna News

ಹುಣಸೋಡು ಸ್ಫೋಟ ಪ್ರಕರಣ: ಪರಿಹಾರ ವಿಳಂಬದ ವಿರು​ದ್ಧ ಪ್ರಧಾ​ನಿಗೆ ಮನ​ವಿ

ಹುಣಸೋಡು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಪರಿಹಾರ ಕೊಡಿಸಲು ವಿಫಲವಾಗಿರುವ ಸ್ಥಳೀಯ ಶಾಸಕರ ಮತ್ತು ಸಂಸದರ ವಿರುದ್ಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ನವಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಗೋ.ರಮೇಶ್‌ ಗೌಡ ಹೇಳಿದರು.

An appeal to the Prime Minister against the delay in the resolution of the blastat hunusodu rav
Author
First Published Feb 16, 2023, 4:25 AM IST | Last Updated Feb 16, 2023, 4:25 AM IST

ಶಿವಮೊಗ್ಗ (ಫೆ.16) : ಹುಣಸೋಡು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಪರಿಹಾರ ಕೊಡಿಸಲು ವಿಫಲವಾಗಿರುವ ಸ್ಥಳೀಯ ಶಾಸಕರ ಮತ್ತು ಸಂಸದರ ವಿರುದ್ಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ನವಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಗೋ.ರಮೇಶ್‌ ಗೌಡ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹುಣಸೋಡು ಸ್ಫೋಟ(Hunasodu blast case)ದಿಂದ ಅದರ ಸುತ್ತಮುತ್ತಲಿನ ಗ್ರಾಮಗಳ ಅನೇಕ ಮನೆಗಳು ಬಿರುಕು ಬಿಟ್ಟಿದ್ದವು. ಎಲೆಕ್ಟ್ರಾನಿಕ್‌ ಉಪಕರಣಗಳು ಹಾನಿಗೊಳಗಾಗಿದ್ದವು. ನೂರಾರು ಗ್ರಾಮಸ್ಥರು ಲಕ್ಷಾಂತರ ರೂ. ನಷ್ಟಅನುಭವಿಸಿದ್ದರು. ಸುಮಾರು 850 ಸಂತ್ರಸ್ತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಜಿ.ಪಂ. ಎಂಜಿನಿಯರಿಂಗ್‌ ವಿಭಾಗ ಪ್ರತಿ ಮನೆಗಳು ಶೇ.10ರಷ್ಟುಹಾನಿಗೊಳಗಾಗಿವೆ ಎಂದು ತಿಳಿಸಿದ್ದಾರೆ. ಘಟನೆ ನಡೆದು 2 ವರ್ಷವಾದರೂ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ದೂರಿದರು.

ಹುಣಸೋಡು ಸ್ಫೋಟ ಪ್ರಕರಣ: ಕಣ್ಮರೆಯಾಗಿದ್ದು ಇಬ್ಬರಲ್ಲ, ಮೂವರು, ಸುಳಿವು ಮಾತ್ರ ಸಿಗ್ತಿಲ್ಲ!

 

ಈ ಬಗ್ಗೆ ಹಲವು ಬಾರಿ ನಮ್ಮ ವೇದಿಕೆ ಪ್ರತಿಭಟನೆ ನಡೆಸಿದೆ. ಶಾಸಕ ಕೆ.ಎಸ್‌. ಈಶ್ವರಪ್ಪ (MLA KS Eshwarappa)ಹಾಗೂ ಸಂಸದ ಬಿ.ವೈ. ರಾಘವೇಂದ್ರ(MP BY Raghavendra) ಈ ಬಗ್ಗೆ ಯಾವ ಸ್ಪಂದನೆಯನ್ನೂ ನೀಡಿಲ್ಲ. ಇತ್ತೀಚೆಗೆ ಮುಖ್ಯಮಂತ್ರಿ ಅವರು ಶಿವಮೊಗ್ಗ(Shivamogga)ಕ್ಕೆ ಭೇಟಿ ನೀಡಿದ್ದಾಗ ಅವರನ್ನು ಗಂಟೆಗಟ್ಟಲೆ ಕಾಯ್ದು ಮನವಿ ನೀಡಲು ಹೋದರೆ, ನಮ್ಮ ಕಡೆ ತಿರುಗಿಯೂ ನೋಡಲಿಲ್ಲ. ಸಂಸದ ಮತ್ತು ಶಾಸಕರು ಕೂಡ ತಮಗೆ ಸಂಬಂಧವೇ ಇಲ್ಲ ಎಂಬಂತೆ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರ(BJP Government)ಕ್ಕೆ ಸಂತ್ರಸ್ತರಿಗೆ ಪರಿಹಾರ ಕೊಡಿಸುವ ಆಸಕ್ತಿ ಇಲ್ಲ. ಅದರ ಬದಲು ಶಾಸಕ ಕೆ.ಎಸ್‌.ಈಶ್ವರಪ್ಪನವರು ಗಣಿ ಮಾಲಿಕರ ಪರವಾಗಿ ನಿಂತು ಮತ್ತೆ ಕಲ್ಲುಕ್ವಾರೆ ನಡೆಸುವಂತೆ ಅನುಮತಿ ಕೋರಿದ್ದಾರೆ. ಇವರೆಲ್ಲರ ಸಂತ್ರಸ್ತರ ವಿರೋಧಿ ನಿಲುವನ್ನು ಖಂಡಿಸಿ ಪ್ರಧಾನಿಯ​ವರು ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸುವ ವೇಳೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹುಣಸೋಡು ಸ್ಫೋಟ ಪ್ರಕರಣ : ಕ್ರಷರ್‌ ಪರವಾನಗಿ ರದ್ದು

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸಂತೋಷ್‌, ನಿಂಗರಾಜ್‌, ದೇವೇಂದ್ರಪ್ಪ, ಕುಮಾರ್‌, ಆಸೀಫ್‌, ಫಯಾಜ್‌, ನಾಗೇಶ್‌, ಪುಷ್ಪಾ ಸೇರಿದಂತೆ ಹಲವರಿದ್ದರು.

Latest Videos
Follow Us:
Download App:
  • android
  • ios