ಫೇಸ್‌ಬುಕ್‌ನಲ್ಲೂ ಪಾಕ್‌ಗೆ ಅಮೂಲ್ಯ ‘ಜೈ’!
ಇದೇ ಮೊದಲ ಬಾರಿಗೆ ಪಾಕಿಸ್ತಾನ ಪರ ವಿದ್ಯಾರ್ಥಿನಿ ಅಮೂಲ್ಯ ಒಲವು ವ್ಯಕ್ತಪಡಿಸಿದ್ದಲ್ಲ, ನಾಲ್ಕು ದಿನಗಳ ಹಿಂದೆಯೂ ತನ್ನ ಫೇಸ್‌ಬುಕ್ ಖಾತೆಯಲ್ಲಿ ಆಕೆ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಬರೆದಿದ್ದಳು ಎಂಬ ಸಂಗತಿ ಬೆಳಕಿಗೆ ಬಂದಿದೆ.
ಬೆಂಗಳೂರು(ಫೆ.21): ಇದೇ ಮೊದಲ ಬಾರಿಗೆ ಪಾಕಿಸ್ತಾನ ಪರ ವಿದ್ಯಾರ್ಥಿನಿ ಅಮೂಲ್ಯ ಒಲವು ವ್ಯಕ್ತಪಡಿಸಿದ್ದಲ್ಲ, ನಾಲ್ಕು ದಿನಗಳ ಹಿಂದೆಯೂ ತನ್ನ ಫೇಸ್‌ಬುಕ್ ಖಾತೆಯಲ್ಲಿ ಆಕೆ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಬರೆದಿದ್ದಳು ಎಂಬ ಸಂಗತಿ ಬೆಳಕಿಗೆ ಬಂದಿದೆ.
ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಹೋರಾಟದಲ್ಲಿ ಸಕ್ರಿಯವಾಗಿದ್ದ ಅಮೂಲ್ಯ, ಸಾಮಾಜಿಕ ಜಾಲತಾಣಗಳಲ್ಲಿ ಸೈದ್ಧಾಂತಿಕ ವಿಚಾರಗಳನ್ನು ಉಗ್ರವಾಗಿ ಪ್ರತಿಪಾದಿಸುತ್ತಿದ್ದಳು. ಅದೇ ರೀತಿ ಫೆ.16 ರಂದು ಪಾಕಿಸ್ತಾನ ಮಾತ್ರವಲ್ಲದೆ ಭಾರತದ ನೆರೆಹೊರೆಯ ರಾಷ್ಟ್ರಗಳಿಗೆ ಜಿಂದಾಬಾದ್ ಎಂದೂ ವಿವಾದಾತ್ಮಕ ಸ್ಟೇಟಸ್ ಬರೆದಿದ್ದಳು. ಹಾಗೆಯೇ ನನ್ನ ದೇಶವನ್ನು ಪ್ರೀತಿಸಲು ಬೇರೆಯವರಿಂದ ಕಲಿಯಬೇಕಿಲ್ಲ ಎಂದು ಅಮೂಲ್ಯ ಕಿಡಿಕಾರಿದ್ದಳು.
ಅಮೂಲ್ಯ ಖಾತೆಯಲ್ಲಿ ಸ್ಟೇಟಸ್ ಹೀಗಿದೆ
ಹಿಂದುಸ್ತಾನ್ ಜಿಂದಾಬಾದ್!
ಪಾಕಿಸ್ತಾನ ಜಿಂದಾಬಾದ್!
ಬಾಂಗ್ಲಾದೇಶ ಜಿಂದಾಬಾದ್!
ಶ್ರೀಲಂಕಾ ಜಿಂದಾಬಾದ್!
ಆಷ್ಘಾನಿಸ್ತಾನ ಜಿಂದಾಬಾದ್!
ಚೈನಾ ಜಿಂದಾಬಾದ್!
ಭೂತಾನ್ ಜಿಂದಾಬಾದ್!
ಯಾವುದೇ ದೇಶ ಇರಲಿ-ಎಲ್ಲಾ ದೇಶಗಳಿಗೂ ಜಿಂದಾಬಾದ್!
ಮಕ್ಕಳಿಗೆ ದೇಶ ಅಂದ್ರೆ ಮಣ್ಣು ಅಂತ ಕಲಿಸುತ್ತೀರ. ಮಕ್ಕಳಾದ ನಾವು ನಿಮಗೆ ಹೇಳ್ತಾ ಇದ್ದೀವಿ, ದೇಶವೆಂದರೆ ಅಲ್ಲಿನ ಜನ. ಆ ಎಲ್ಲ ಜನರು ಮೂಲಭೂತ ಸವಲತ್ತುಗಳನ್ನು ಪಡೆಯಬೇಕು. ಆ ಎಲ್ಲ ಜನರನ್ನು ಸರ್ಕಾರ ಒಳ್ಳೆಯ ರೀತಿಯಲ್ಲಿ ನೋಡಿಕೊಳ್ಳಬೇಕು. ಜನರ ಸೇವೆ ಮಾಡುವ ಎಲ್ಲರಿಗೂ ಜಿಂದಾಬಾದ್!
ಆರೋಗ್ಯ ಸರಿ ಇಲ್ಲ, ಮೖಕ್ ಸಿಕ್ಕಿದ ಕೂಡಲೇ ಪ್ರಚೋದಿತಳಾಗ್ತಾಳಂತೆ ಅಮೂಲ್ಯ
ಹಾಗಂತ ಬೇರೆ ದೇಶಕ್ಕೆ ಜಿಂದಾದಾದ್ ಹೇಳಿದ ತಕ್ಷಣ ನಾನು ಅಲ್ಲಿನವಳು ಆಗಲ್ಲ. ಕಾನೂನಿನ ಪ್ರಕಾರ ನಾನು ಭಾರತೀಯ ಪ್ರಜೆ. ನನ್ನ ದೇಶವನ್ನು ಗೌರವಿಸೋದು, ಇಲ್ಲಿನ ಜನರಿಗಾಗಿ ಕೆಲಸ ಮಾಡೋದು ನನ್ನ ಕರ್ತವ್ಯ. ನಾನದನ್ನು ಮಾಡುತ್ತೇನೆ. ಯಾವ್ ಆರ್‌ಎಸ್‌ಎಸ್ ಚಡ್ಡಿಗಳು ಏನ್ ಮಾಡ್ತಾರೋ ನೋಡೋಣ! ಸಂಘಿಗಳು ಇವತ್ತು ಪಕ್ಕ ಉರ್ಕೊಳ್ತಾರೆ. ಶುರು ಮಾಡ್ರಿ ನಿಮ್ ಕಾಮೆಂಟ್ ದಾಳಿ. ನಾನ್ ಏನ್ ಹೇಳ್ಬೇಕು ಅದನ್ನು ಹೇಳಿದ್ದೀನಿ..!
ಟೀಕೆ, ನಿಂದನೆಗಳ ಸುರಿಮಳೆ:
ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮತ್ತು ನಿಂದನೆಗಳ ಸುರಿಮಳೆಯಾಗಿದೆ. ಆಕೆಯ ಫೇಸ್‌ಬುಕ್ ಖಾತೆಯಲ್ಲಿ ಕೆಲವರು ಬಾಯಿಗೆ ಬಂದಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬರೆದಿದ್ದಾರೆ.