ಚಿಕ್ಕಮಗಳೂರು(ಫೆ.21): ಅಮೂಲ್ಯಗೆ ಸೂಕ್ತ ಚಿಕಿತ್ಸೆ ಬೇಕು. ಸಭೆಗಳಲ್ಲಿ ಮೈಕ್ ಸಿಕ್ಕ ತಕ್ಷಣ ಪ್ರಚೋದನೆಗೆ ಒಳಾಗುತ್ತಾಳೆ ಎಂದು ಅಮೂಲ್ಯ ತಂದೆ ಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ. ಮಗಳು ಮಾಡಿದ ಅವಾಂತರದ ಬಗ್ಗೆ ತಂದೆ ವಾಜಿ ಮಾತನಾಡಿದ್ದಾರೆ.

"

ಮಗಳ ಹೇಳಿಕೆಗೆ ತಂದೆ ವಿರೋಧ ವ್ಯಕ್ತಪಡಿಸಿದ್ದು, ಯಾವ ಕಾರಣಕ್ಕಾಗಿ ಈ ರೀತಿ ಹೇಳಿಕೆ ನೀಡಿದ್ದಾಳೆ ಎನ್ನುವುದು ಗೊತ್ತಿಲ್ಲ, ವಯಸ್ಸಿನಲ್ಲೂ ಇನ್ನು ಚಿಕ್ಕವಳು ,ಪ್ರಬುದ್ಧತೆಯ ಕೊರತೆ ಇದೆ. ಬೆಂಗಳೂರಿನಲ್ಲಿ ಕೆಲವರ ಸಹವಾಸದಿಂದ ಈ ರೀತಿಯ ಮಾತು  ಹೊರಬರುತ್ತಿದೆ ಎಂದು ಹೇಳಿದ್ದಾರೆ.

ನಿಮ್ಗಿಂತ ಸೀನಿಯರ್, ನಂಗ್ ಹೇಳೋಕೆ ಬರ್ರ್ಬೇಡಿ: ಸ್ಪೀಕರ್‌ಗೆ ವಾರ್ನಿಂಗ್

ಅಮೂಲ್ಯಗೆ ಸಾಕಷ್ಟು ಬುದ್ದಿವಾದ ಹೇಳಿದ್ದೇನೆ. ಅಮೂಲ್ಯಗೆ ಸ್ವಲ್ಪ ಆರೋಗ್ಯದ ಸಮಸ್ಯೆ ಇದೆ. ದೈಹಿಕ ಸಮಸ್ಯೆ ಇಲ್ಲ, ಯಾವುದೋ ಒಂದು ಕೊರತೆ ಇದೆ. ಬೆಂಗಳೂರಿನಲ್ಲಿ ಡಾಕ್ಟರ್ ಭೇಟಿ ಆಗುತ್ತಿರುವ ಬಗ್ಗೆ ಮಾಹಿತಿ ಇದೆ. ಅಮೂಲ್ಯಗೆ ಸೂಕ್ತ ಚಿಕಿತ್ಯೆ ಬೇಕು , ಚಿಕಿತ್ಯೆ ಕೊಡಿಸಲು ಅಮೂಲ್ಯ ಬರುತ್ತಿಲ್ಲ ಎಂದು ಹೇಳಿದ್ದಾರೆ.

ಸಭೆಗಳಲ್ಲಿ ಮೈಕ್ ಸಿಕ್ಕ ತಕ್ಷಣ ಪ್ರಚೋದನೆಗೆ ಒಳಾಗುತ್ತಾಳೆ. ದೇಶವಿರೋಧಿ ಘೋಷಣೆ ತಪ್ಪು, ಕಾನೂನಿನ ಅಡಿಯಲ್ಲಿ ಶಿಕ್ಷೆಯಾಗಲಿ. ಸುವರ್ಣ ನ್ಯೂಸ್ ಅಮೂಲ್ಯ ತಂದೆ ವಾಜಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಹೇಳಿದ್ದಾರೆ.