ಶರಣಾದ 6 ನಕ್ಸಲರ ಪೈಕಿ ಒಬ್ಬ ರಾಯಚೂರಿನ: ಮಗನ ಆಗಮನ ನಿರೀಕ್ಷೆಯಲ್ಲಿ 80 ವರ್ಷದ ತಾಯಿ!

ಸಮಾಜದಲ್ಲಿ ಜನರ ಮೇಲೆ ಆಗುತ್ತಿರುವ ಅನ್ಯಾಯ, ಅಸಮತೋಲನ, ದೌರ್ಜನ್ಯ ಹಾಗೂ ರಾಜಕೀಯ ಮತ್ತು ಆಡಳಿತದ ಅವ್ಯವಸ್ಥೆಯಿಂದ ಬೇಸತ್ತು 2000 ಇಸವಿಯಲ್ಲಿ ನಕ್ಸಲ್ ಚಳವಳಿಗೆ ಸೇರಿದ ಮಾರೆಪ್ಪ ಅವರು ರಾಜ್ಯದ ಮಲೆನಾಡು, ಕೇರಳ, ತಮಿಳುನಾಡು ಸೇರಿ ಉತ್ತರ ಭಾರತದ ಪ್ರಮುಖ ಚಳವಳಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

Among the 6 Naxals who surrendered one is from Raichur

ರಾಮಕೃಷ್ಣ ದಾಸರಿ

ರಾಯಚೂರು(ಜ.09):  ಮೂರು ದಶಕಗಳ ಹಿಂದೆ ಬಯಲು ಸೀಮೆಯಲ್ಲಿ ಸಕ್ರಿಯವಾಗಿದ್ದ ನಕ್ಸಲ್‌ ಚಳವಳಿ ಮಲೆನಾಡಿಗೆ ವರ್ಗಗೊಂಡ ನಂತರ ಈ ಭಾಗದ ಕೆಲವರು ಚಳವಳಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇದೀಗ ಸರ್ಕಾರದ ಮುಂದೆ ಶರಣಾಗಿ, ಮುಖ್ಯವಾಹಿನಿಗೆ ಬಂದಿರುವ 6 ಜನ ನಕ್ಸಲ್‌ ಅವರ ಪೈಕಿ ಒಬ್ಬರಾದ ಶರಣಾಗತಿಯಾಗಿರುವ ಮಾರೆಪ್ಪ ಅರೋಲಿ ರಾಯಚೂರಿನವರಾಗಿದ್ದಾರೆ.

ಜಿಲ್ಲೆ ಮಾನ್ವಿ ತಾಲೂಕಿನ ಅರೋಲಿ ಗ್ರಾಮದ ಮಾರೆಪ್ಪ (ಜಯಣ್ಣ) ಕಳೆದ 25 ವರ್ಷಗಳಿಂದ ನಕ್ಸಲ್‌ ಚಳವಳಿಯಲ್ಲಿಯೇ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದು, ಇದೀಗ ಶರಣಾಗಿ ಸಾಮಾನ್ಯರಂತೆ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದಾರೆ.

ನಕ್ಸಲ್‌ ಚಳುವಳಿ ಹುಟ್ಟಿದ್ದು, ಅಂತ್ಯ ಕಂಡಿದ್ದು ಚಿಕ್ಕಮಗಳೂರಿನಲ್ಲೇ!

ಕಡು ಬಡತನದಲ್ಲಿ ಜನಿಸಿದ ಮಾರೆಪ್ಪ ಅರೋಲಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ನಂತರ ಮಾನ್ವಿಯಲ್ಲಿ ಪದವಿಯನ್ನು ಮುಗಿಸಿದ್ದಾರೆ. ಸಮಾಜದಲ್ಲಿ ಜನರ ಮೇಲೆ ಆಗುತ್ತಿರುವ ಅನ್ಯಾಯ, ಅಸಮತೋಲನ, ದೌರ್ಜನ್ಯ ಹಾಗೂ ರಾಜಕೀಯ ಮತ್ತು ಆಡಳಿತದ ಅವ್ಯವಸ್ಥೆಯಿಂದ ಬೇಸತ್ತು 2000 ಇಸವಿಯಲ್ಲಿ ನಕ್ಸಲ್ ಚಳವಳಿಗೆ ಸೇರಿದ ಮಾರೆಪ್ಪ ಅವರು ರಾಜ್ಯದ ಮಲೆನಾಡು, ಕೇರಳ, ತಮಿಳುನಾಡು ಸೇರಿ ಉತ್ತರ ಭಾರತದ ಪ್ರಮುಖ ಚಳವಳಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ನಕ್ಸಲ್‌ ಚಳವಳಿಯಲ್ಲಿ ಸರ್ಕಾರಗಳ ಬಡಜನರ ವಿರೋಧಿ ನೀತಿ ಖಂಡಿಸಿ, ಆದಿವಾಸಿಗಳ ಹಕ್ಕುಗಳಿಗಾಗಿ ನಡೆದ ಹಲವಾರು ಹೋರಾಟದಲ್ಲಿ ಮಾರೆಪ್ಪ ಅವರು ಮುಖ್ಯ ಕಮಾಂಡರ್‌ ಆಗಿಯೂ ಕೆಲಸ ಮಾಡಿದ್ದಾರೆ.

ನಕ್ಸಲ್‌ ಶರಣಾಗತಿ ಪ್ಯಾಕೇಜ್‌ ಸಮಾಜವನ್ನು ಬೆಚ್ಚಿಬೀಳಿಸಿದೆ: ಸುನೀಲ್ ಕುಮಾರ್‌

ಒಮ್ಮೆಯೂ ಊರಿಗೆ ಬಂದಿಲ್ಲ :

25 ವರ್ಷಗಳ ಹಿಂದೆ ಮನೆ, ಕುಟುಂಬಸ್ಥರನ್ನು ಬಿಟ್ಟು ಹೋಗಿದ್ದ ಮಾರೆಪ್ಪ ಅರೋಲಿ ಅವರು ಇಷ್ಟು ವರ್ಷದಲ್ಲಿ ಒಮ್ಮೆಯೂ ಊರಿಗೆ ಬಂದಿಲ್ಲ. ಮನೆಯಲ್ಲಿ 80 ವರ್ಷದ ತಾಯಿ ಗೌರಮ್ಮ, ಅಣ್ಣ ದೇವೇಂದ್ರಪ್ಪ ಅವರು ತಮ್ಮನ ಶರಣಾಗತಿಯ ಸುದ್ದಿಯನ್ನು ತಿಳಿದು ಕಣ್ಣೀರಿಡುತ್ತಿದ್ದು, ಆತನ ಆಗಮನಕ್ಕಾಗಿ ಬೆಟ್ಟದಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.

ವಾಪಸ್ಸು ಬಂದರೇ ಬೇಸಾಯ್ತು...

ಕಷ್ಟಗಳ ನಡುವೆಯೇ ಇಬ್ಬರು ಮಕ್ಕಳನ್ನು ಸಾಕಿದ್ದೇನೆ. ಯುವಕನಾಗಿದ್ದ ಮನೆಬಿಟ್ಟು ಹೋಗಿರುವ ಮಾರೆಪ್ಪ ಅರೋಲಿ ಇಲ್ಲಿವರೆಗೆ ವಾಪಸ್ಸಾಗಿಲ್ಲ. ಇಷ್ಟು ವರ್ಷ ಮುಳ್ಳಿಯ ಹಾದಿಯಲ್ಲಿಯೇ ನಡೆದಿದ್ದಾನೆ. ವಾಪಸ್ಸು ಬಂದರೇ ಬೇಸಾಯ್ತು, ಯಂಕ್ಯಾನ ಬದುಕುತ್ತಾನೆ ಎಂದು ಮಾರೆಪ್ಪ ಅರೋಲಿ ತಾಯಿ ಗೌರಮ್ಮ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios