ಸಮಾಜದಲ್ಲಿ ಸೌಹಾರ್ದತೆ ನಿರ್ಮಾಣ ಆಗಬೇಕು: ವಿಶ್ವೇಶ್ವರ ಹೆಗಡೆ ಕಾಗೇರಿ
ಸಮಾಜದಲ್ಲಿ ಪರಸ್ಪರ ಸಹಕಾರ ಸಹಭಾಗಿತ್ವದ ಜೊತೆಗೆ ಸೌಹಾರ್ದಯುತ ವಾತಾವರಣ ನಿರ್ಮಿಸುವ ಮೂಲಕ ಪ್ರಪಂಚವನ್ನೇ ವಸುದæೕವ ಕುಟುಂಬ ಎಂಬ ಭಾವನೆ ಮೂಡಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು
ಸಾಗರ (ಅ.21) : ಸಮಾಜದಲ್ಲಿ ಪರಸ್ಪರ ಸಹಕಾರ ಸಹಭಾಗಿತ್ವದ ಜೊತೆಗೆ ಸೌಹಾರ್ದಯುತ ವಾತಾವರಣ ನಿರ್ಮಿಸುವ ಮೂಲಕ ಪ್ರಪಂಚವನ್ನೇ ವಸುದæೕವ ಕುಟುಂಬ ಎಂಬ ಭಾವನೆ ಮೂಡಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ತಾಲೂಕಿನ ವರದಾಮೂಲದ ಶ್ರೀ ಕ್ಷೇತ್ರದಲ್ಲಿ ಶ್ರೀ ವರದಾಂಬಾ ಸೇವಾ ಪ್ರತಿಷ್ಠಾನವು ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನಾವು ಜೀವಿಸುವ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿ ಪರಿಸರ ಸಂರಕ್ಷಣೆಯ ಸಂಸ್ಕೃತಿ ಅಳವಡಿಸಿಕೊಳ್ಳಬೇಕು ಎಂದರು.
‘ನನ್ನ ಮತ ಮಾರಾಟಕ್ಕಿಲ್ಲ’ ಅಭಿಯಾನ ಯಶಸ್ವಿಗೊಳಿಸಿ: ಕಾಗೇರಿ ಕರೆ
ಪರಿಸರ ನಾಶ ಮತ್ತು ಪರಿಸರದೊಂದಿಗೆ ಸಂಘರ್ಷ ಮಾನವನ ನೆಮ್ಮದಿಯ ಬದುಕಿಗೆ ಮಾರಕ ಆಗುತ್ತದೆ. ಆದ್ದರಿಂದ ಶಾಂತಿ-ನೆಮ್ಮದಿ ವಾತಾವರಣ ನಿರ್ಮಿಸುವ ಹೊಣೆಗಾರಿಕೆ ಸಮಾಜದ ಮೇಲಿದೆ. ವರದಾಮೂಲ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಮ್ಮ ಸಂಪೂರ್ಣ ಸಹಕಾರವಿದೆ ಎಂಬ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶಿಕಾರಿಪುರದ ಗುರುಮೂರ್ತಿ, ಪರಿಸರವಾದಿ ಅನಂತ ಹೆಗಡೆ ಅಶೀಸರ ಅವರನ್ನು ಅಭಿನಂದಿಸಲಾಯಿತು. ಹಿರಿಯ ನಾಗರಿಕರಾದ ತೀರ್ಥದ ರಾಮಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ವರದಾಂಬಾ ಪ್ರತಿಷ್ಠಾನದ ಅಧ್ಯಕ್ಷ ರಮೇಶ ಎಂ.ಬಿ. ಅಧ್ಯಕ್ಷತೆ ವಹಿಸಿದ್ದರು. ಭೀಮನಕೋಣೆ ಗ್ರಾಪಂ ಉಪಾಧ್ಯಕ್ಷ ಮಂಜುನಾಥ ವಿ.ಕೆ., ಎಸ್.ಟಿ.ಗಣಪತಿ ಚನ್ನಿಗನತೋಟ, ಕವಲಕೋಡು ವೆಂಕಟೇಶ್, ರಾಮಚಂದ್ರ ಭಟ್, ಗುರುದತ್ತ ಶರ್ಮ ಉಪಸ್ಥಿತರಿದ್ದರು.
ಬಿಳುವಾಣಿ ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ
ಸೊರಬ: ತಾಲೂಕಿನ ಬಿಳುವಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಎಸ್. ಗುರುವಪ್ಪ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಯಿತು. ಬಿಳುವಾಣಿ ಗ್ರಾಪಂ ನಲ್ಲಿ ಒಟ್ಟು 11 ಸದಸ್ಯರಿದ್ದು, 9 ಸದಸ್ಯರು ಅವಿಶ್ವಾಸ ಮಂಡನೆ ಪರ ಮತ ಚಲಾಯಿಸಿದರು. ಅಧ್ಯಕ್ಷೆ ಸವಿತಾ ಎಸ್.ಗುರುವಪ್ಪ ಹಾಗೂ ಸದಸ್ಯೆ ವನಜಾಕ್ಷಮ್ಮ ಗೈರಾಗಿದ್ದರು. ಈ ಹಿಂದೆ ಅಧಿಕಾರ ಹಂಚಿಕೆ ಬಗ್ಗೆ ಸದಸ್ಯರ ನಡುವೆ ನಡೆದ ಮಾತುಕತೆಯಂತೆ ಅಧ್ಯಕ್ಷ ಗಾದಿ ಬಿಟ್ಟುಕೊಡದೆ ಇರುವುದರಿಂದ ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಅಂಗನವಾಡಿಗೆ ಜಾಗ ಲಭ್ಯವಾದರೆ ಕಟ್ಟಡ ನಿರ್ಮಾಣ: ಕಾಗೇರಿ
ಅಧ್ಯಕ್ಷೆ ಸವಿತಾ ವಿರುದ್ಧ ಸೆ.12ರಂದು ಜಿಲ್ಲಾಧಿಕಾರಿ ಅವರಿಗೆ ಅವಿಶ್ವಾಸ ಬಗ್ಗೆ ಅರ್ಜಿಸಲ್ಲಿಸಲಾಗಿತ್ತು. ಅದರ ಅನ್ವಯ ಸಾಗರ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಅವಿಶ್ವಾಸ ಮಂಡನೆ ಸಭೆಯಲ್ಲಿ 9 ಸದಸ್ಯರು ಅವಿಶ್ವಾಸದ ಪರವಾಗಿ ಮತ ಚಲಾಯಿಸುವ ಮೂಲಕ ಅಧ್ಯಕ್ಷೆ ಸವಿತಾ ಎಸ್. ಗುರುವಪ್ಪ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದಾರೆ. ಉಪಾಧ್ಯಕ್ಷ ಡಿ.ಎನ್. ನಂದೀಶ್, ಸದಸ್ಯರಾದ ವಿ.ಪಿ. ಬಸವರಾಜ್, ಉದಯಕುಮಾರ್, ನಾಗರಾಜ್, ಅಂಬಿಕಾ, ಕೆರಿಯಮ್ಮ, ಗಣಪತಿ, ವಿನೋದ, ಶೃತಿ, ನಾಗಮ್ಮ, ಪಿಡಿಒ ರಿಯಾಸ್ ಅಹ್ಮದ್, ಕಾರ್ಯದರ್ಶಿ ನಾಗರಾಜಪ್ಪ ಹಾಜರಿದ್ದರು.