ಚಿಕ್ಕಮಗಳೂರು [ಮಾ.05]: ಹೆಡ್‌ಲೈಟ್‌ ಕೈಕೊಟ್ಟಆ್ಯಂಬುಲೆನ್ಸ್‌ ಅನ್ನು ರಾತ್ರಿ ವೇಳೆ 190 ಕಿ.ಮೀ. ಚಾಲನೆ ಮಾಡಿ ರೋಗಿಯ ಚಿಕಿತ್ಸೆಗೆ ಚಾಲಕನೊಬ್ಬ ನೆರವಾಗಿದ್ದಾನೆ.

ಚಿಕ್ಕಮಗಳೂರಿನ ಟಿಪ್ಪು ನಗರದ ನಿವಾಸಿ ನಜೀರ್‌ ಅಹಮದ್‌ಗೆ ರಸ್ತೆ ಅಪಘಾತದಲ್ಲಿ ತೀವ್ರ ಪೆಟ್ಟಾಗಿತ್ತು. ಮಂಗಳವಾರ ರಾತ್ರಿ ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ಇಸ್ಲಾಂ ಬೈತ್‌ಲಮಲ್‌ ಟ್ರಸ್ಟ್‌ಗೆ ಸೇರಿದ ಆ್ಯಂಬುಲೆನ್ಸ್‌ ರಾತ್ರಿ 9.30ಕ್ಕೆ ಹೊರಟಿತ್ತು.

'ಝೀರೋ ಟ್ರಾಫಿಕ್ ಹೀರೋ' : ಹನೀಫ್‌ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ...

ಈ ಆ್ಯಂಬುಲೆನ್ಸ್‌ ಅನ್ನು ಚಾಲಕ ಜೀಷನ್‌ ಚಾಲನೆ ಮಾಡುತ್ತಿದ್ದರು. ಹಾಸನ ದಾಟುತ್ತಿದ್ದಂತೆ ವಾಹನದ ಹೆಡ್‌ಲೈಟ್‌, ಸೇರಿದಂತೆ ಎಲ್ಲಾ ಲೈಟ್‌ಗಳು ಆಫ್‌ ಆಗಿವೆ. ಆ ಸಂದರ್ಭದಲ್ಲಿ ಸರ್ಕಾರಿ ಆ್ಯಂಬುಲೆನ್ಸ್‌ ವಾಹನಗಳ ಚಾಲಕರನ್ನು ಮತ್ತು ಪೊಲೀಸ್‌ ಇಲಾಖೆಯವರನ್ನು ಚಾಲಕ ಸಂಪರ್ಕಿಸಿದರೂ ನೆರವು ಸಿಕ್ಕಿಲ್ಲ ಎನ್ನಲಾಗಿದೆ.

ಹೃದಯ ಚಿಕಿತ್ಸೆ, 40 ದಿನದ ಹಸುಗೂಸಿಗೆ ಮಂಗಳೂರಿಂದ- ಬೆಂಗಳೂರಿಗೆ ಝೀರೋ ಟ್ರಾಫಿಕ್...

ಅದೇ ವೇಳೆಗೆ ಹಾಸನದಿಂದ ನಿಮ್ಹಾನ್ಸ್‌ ಆಸ್ಪತ್ರೆಗೆ ಆ್ಯಂಬುಲೆನ್ಸ್‌ವೊಂದು ಹೊರಟಿತ್ತು. ಅದರ ಹಿಂದೆಯೇ ಜೀಷನ್‌ 130 ಕಿ.ಮೀ. ವೇಗದಲ್ಲಿ 190 ಕಿ.ಮೀ. ವಾಹನ ಚಾಲನೆ ಮಾಡಿಕೊಂಡು ರೋಗಿಯನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಿದ್ದಾರೆ.