ಮೂುಡುಬಿದಿರೆ(ಜೂ. 03): ಕೊರೋನವನ್ನು ತಡೆಗಟ್ಟಲು ಜಾರಿಗೆ ಬಂದ ಲಾಕ್‌ಡೌನ್, ಅನೇಕ ಯುವ ಪ್ರತಿಭೆಗಳಿಗೆ ವಿಭಿನ್ನವಾಗಿ ಯೋಚಿಸಲು ಅವಕಾಶ ಮಾಡಿಕೊಟ್ಟಿದೆ. ಕೆಲವು ದಿನಗಳ ಹಿಂದೆ ದಕ್ಷಿಣ ಕನ್ನಡದ ಮೂಡುಬಿದಿರೆ ಆಳ್ವಾಸ್‌ನ ಭರತನಾಟ್ಯ ವಿದ್ಯಾರ್ಥಿಗಳು ನೃತ್ಯಂಟೈನ್ ಎಂಬ ನೃತ್ಯ ರೂಪಕವನ್ನು ತಾವು ಇದ್ದ ಸ್ಥಳಗಳಿಂದಲೇ
ಸಾಮಾಜಿಕ ಅಂತರ ಪಾಲಿಸಿ ವಿಡಿಯೋ ಮಾಡಿ ಜನರನ್ನು ರಂಜಿಸಿದ್ದರು.

ನೃತ್ಯಂಟೈನ್‌ನಿಂದ ಸ್ಪೂರ್ತಿ ಪಡೆದ ಆಳ್ವಾಸ್ ಧೀಂಕಿಟ ಯಕ್ಷಗಾನ ತಂಡ ಯಕ್ಷಂಟೈನ್‌ನ ಮೂಲಕ ಪರದೆಯ ಮೇಲೆ ಬಂದಿದ್ದಾರೆ. ಯಕ್ಷ + ಕ್ವಾರೆಂಟೈನ್, ‘ಯಕ್ಷಂಟೈನ್’ ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿ ಆದಿತ್ಯ ಅಂಬಲಪಾಡಿ ಹಾಗೂ ಪ್ರಥ್ವೀಶ ಪರ್ಕಳ ಅವರ ಪರಿಕಲ್ಪನೆಯಲ್ಲಿ ಮೂಡಿ ಬಂದಿದೆ. ಇದು ಒಟ್ಟು ನಾಲ್ಕು ಆವೃತ್ತಿಯಲ್ಲಿ ಮೂಡಿಬರಲಿದೆ.

ಸುವರ್ಣ ಚ್ಯಾನಲ್‌ನಲ್ಲಿ ಸಿದ್ದರಾಮಯ್ಯ: ಟಿವಿಗೇ ಪೂಜೆ ಸಲ್ಲಿಸಿದ ಕಟ್ಟಾ ಅಭಿಮಾನಿ..!

ಮೊದಲನೇ ಭಾಗ ಕಾಲೇಜಿನ ಹಳೆ ವಿದ್ಯಾರ್ಥಿ ನಿತೀಶ್ ಕುಮಾರ್ ಮಾರ್ನಾಡ್ ಯೂಟ್ಯೂಬ್ ಚಾನಲ್‌ನಲ್ಲಿ ಗುರುವಾರ ಬಿಡುಗಡೆಗೊಂಡಿದೆ. ಮಂಗಳವಾರದ ತನಕ ಸುಮಾರು 7,500 ಮಂದಿ ಇದನ್ನು ವೀಕ್ಷಿಸಿದ್ದಾರೆ. ಉಳಿದ ಭಾಗಗಳು ಮುಂದಿನ ವಾರದ ಅಂತರದಲ್ಲಿ ಬಿಡುಗಡೆಗೊಳ್ಳಲಿದೆ. ಕಾರ್ತಿಕ್ ಪ್ರಭು ಮತ್ತು ಮೊಹಮದ್ ಅಶ್ಪಕ್ ಹುಸೈನ್ ಸಂಕಲನದಲ್ಲಿ ಸಹಕರಿಸಿದ್ದಾರೆ. ಈ ವಿಡಿಯೋದಲ್ಲಿ ಆಳ್ವಾಸ್ ಕಾಲೇಜಿನ ಧೀಂಕಿಟ ಯಕ್ಷಗಾನ ತಂಡದ ಪ್ರಸ್ತುತ ಮತ್ತು ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

ಅಬುದಾಬಿ, ದುಬೈ ಹಾಗೂ ಮುಂಬೈಯಲ್ಲಿ ನೆಲೆಸಿರುವ ವಿದ್ಯಾರ್ಥಿಗಳು ವಿಷ್ಣುವಿನ ದಶಾವತಾರವನ್ನು ತೋರಿಸುವ ಈ ವಿಡಿಯೋದಲ್ಲಿ ಪಾಲ್ಗೊಂಡಿದ್ದಾರೆ. ಹಿಮ್ಮೇಳ:
ಯಕ್ಷಂಟೈನ್ ಹಿಮ್ಮೇಳವು ಪ್ರಸಾದ್ ಚೆರ್ಕಾಡಿ ಭಾಗವತಿಕೆ ಮತ್ತು ಸವಿನಯ ನೆಲ್ಲಿತೀರ್ಥ ಚೆಂಡೆಯಲ್ಲಿ ಹಾಗೂ ಮಯೂರ್ ನಾಯ್ಗ ಮದ್ದಳೆಯಲ್ಲಿ ಸಹಕರಿಸಿದ್ದಾರೆ. ದಶಾವತಾರದಲ್ಲಿ 23 ಕಲಾವಿದರು: ಇದರ ಮುಮ್ಮೇಳದಲ್ಲಿ 23 ಕಲಾವಿದರು ಭಾಗವಹಿಸಿದ್ದಾರೆ. ಎರಡನೇ ವಿಡಿಯೋ ಸಿದ್ದತೆ : ಎರಡನೇ ವಿಡಿಯೋದ ಶೇ.50ರಷ್ಟು ಕೆಲಸ
ಮುಗಿದಿದ್ದು ಒಂದು ವಾರದ ಅಂತರದಲ್ಲಿ ಈ ವಿಡಿಯೋ ಬಿಡುಗಡೆಗೊಳ್ಳಲಿದೆ, ಈ ವಿಡಿಯೋದಲ್ಲಿ 16 ಜನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಕರುನಾಡಲ್ಲಿ ಕೊರೋನಾ ಕುಣಿತ, ಒಂದೇ ದಿನ ದಾಖಲೆಯ 388 ಕೇಸ್: ಯಾವ ಜಿಲ್ಲೆಯಲ್ಲಿ ಎಷ್ಟು?

ಯಕ್ಷಂಟೈನ್ ಮೂಡಿಬರಲು ಮೂಲ ಕಾರಣ ನೃತ್ಯಂಟೈನ್, ಆಳ್ವಾಸ್‌ನ ಯಕ್ಷಗಾನ ತಂಡದಿoದ ಯಕ್ಷಗಾನಕ್ಕೆ ಏನಾದರು ಕೊಡುಗೆ ನೀಡಬೇಕು ಎನ್ನುವ ಕಾರಣಕ್ಕೆ ಈ ವಿಡಿಯೋದ ಉದ್ದೇಶ. ನಾಲ್ಕು ಭಾಗ ಮಾಡುವ ಆಲೋಚನೆ ಇದೆ. ಮೊದಲನೇ ಭಾಗ ಈಗಾಗಲೇ ಬಿಡುಗಡೆಯಾಗಿದ್ದು, ಉಳಿದ ಭಾಗಗಳ ಕೆಲಸವು ಸಾಗುತ್ತಿದೆ ಎಂದು ಪ್ರದರ್ಶನದ ಸಂಯೋಜಕ.ಆದಿತ್ಯ ಅಂಬಲಪಾಡಿ ತಿಳಿಸಿದ್ದಾರೆ.