ಮಹಾರಾಷ್ಟ್ರ ನಂಜಿಗೆ ಕರುನಾಡು ತತ್ತರಿಸಿದ್ದು, ಮಂಗಳವಾರ ಒಂದೇ ದಿನ ದಾಖಲೆ 388 ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಇಡೀ ಕರ್ನಾಟಕವೇ ಬೆಚ್ಚಿ ಬಿಳುವಂತೆ ಮಾಡಿದೆ. ಹಾಗಾದ್ರೆ ಯಾವ-ಯಾವ ಜಿಲ್ಲೆಗಳಲ್ಲಿ ಎಷ್ಟು ಕೇಸ್ ಎನ್ನುವ ವಿವರ ಈ ಕೆಳಗಿನಂತಿದೆ ನೊಡಿ.

ಬೆಂಗಳೂರು, (ಜೂನ್.02): ರಾಜ್ಯದಲ್ಲಿ ಕೊರೋನಾ ಅಬ್ಬರ ಜೋರಾಗಿದ್ದು, ಇವತ್ತು (ಮಂಗಳವಾರ) ಒಂದೇ ದಿನ 388 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

 ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3796 ಕ್ಕೆ ಏರಿಕೆಯಾಗಿದೆ. ಮಂಗಳವಾರ ಪತ್ತೆಯಾದ 388 ಪೈಕಿ 363 ಪ್ರಕರಣಗಳು ಮಹಾರಾಷ್ಟ್ರದಿಂದ ಬಂದವರಲ್ಲಿ ಪತ್ತೆಯಾಗಿದೆ.

ಸಚಿವ ಶ್ರೀರಾಮುಲು ಎಡವಟ್ಟು, ಟ್ರಂಪ್‌ಗೆ ಪ್ರತಿಭಟನೆ ಬಿಕ್ಕಟ್ಟು; ಜೂ.02ರ ಟಾಪ್ 10 ಸುದ್ದಿ!

ಇನ್ನು ಉಡುಪಿ ಮತ್ತು ಕಲಬುರಗಿ ಮಹಾ ನಂಜಿಗೆ ಅಕ್ಷರಶಃ ತತ್ತರಿಸಿ ಹೋಗಿದ್ದು, ಉಡುಪಿಯಲ್ಲಿ ಮಂಗಳವಾರ ಸಿಕ್ಕ 150 ಕೇಸ್‌ಗಳೊಂದಿಗೆ ಬೆಂಗಳೂರನ್ನು ಮೀರಿಸದೆ.

Scroll to load tweet…

ಕಲಬುರಗಿ 100, ಬೆಳಗಾವಿ 51, ರಾಯಚೂರು 16, ಬೆಂಗಳೂರು ನಗರ 12, ಬೀದರ್ 10, ಬಾಗಲಕೋಟೆ ಹಾಸನ 9, ದಾವಣಗೆರೆ 7, ಯಾದಗಿರಿ 5, ಮಂಡ್ಯ, ವಿಜಯಪುರದಲ್ಲಿ ತಲಾ 4, ಬೆಂಗಳೂರು ಗ್ರಾಮಾಂತರ 3, ಚಿಕ್ಕಬಳ್ಳಾಪುರ, ಧಾರವಾಡ, ಚಿಕ್ಕಮಗಳೂರಿನಲ್ಲಿ ತಲಾ 2, ಕೋಲಾರ, ಹಾವೇರಿಯಲ್ಲಿ ತಲಾ 1 ಪ್ರಕರಣ ಪತ್ತೆಯಾಗಿವೆ.

3,796 ಪ್ರಕರಣಗಳ ಪೈಕಿ 1403 ಮಂದಿ ಗುಣಮುಖರಾಗಿದ್ದಾರೆ. ಇನ್ನು 2339 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಒಟ್ಟಾರೆ 52 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.