ನರೇಗಲ್ಲ ಪಟ್ಟಣದ ಸರ್ಕಾರಿ ಮಾದರಿ ಕೇಂದ್ರ ಕನ್ನಡ ಗಂಡುಮಕ್ಕಳ ಶಾಲೆಯಲ್ಲಿ 1988-89 ರಿಂದ 1995-96ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳು ಜೂ. 14 ರಂದು ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಾಲೆಯ ನಿವೃತ್ತ ಹಾಗೂ ಹಾಲಿ ಶಿಕ್ಷಕರಿಗೆ ಸನ್ಮಾನವನ್ನು ಏರ್ಪಡಿಸಲಾಗಿದೆ.
ಧಾರವಾಡ: ನರೇಗಲ್ಲ ಪಟ್ಟಣದ ಸರ್ಕಾರಿ ಮಾದರಿ ಕೇಂದ್ರ ಕನ್ನಡ ಗಂಡುಮಕ್ಕಳ ಶಾಲೆಯಲ್ಲಿ1988- 89ರಿಂದ 1995- 96ನೇ ಶೈಕ್ಷಣಿಕ ವರ್ಷಗಳ ಅವಧಿಯಲ್ಲಿ ಅಧ್ಯಯನ ಮಾಡಿದ ಹಳೆಯ ವಿದ್ಯಾರ್ಥಿಗಳ ವತಿಯಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜೂ. 14ರಂದು ಬೆಳಗ್ಗೆ 10ಕ್ಕೆ ಇಲ್ಲಿಯ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹಳೆಯ ವಿದ್ಯಾರ್ಥಿ ಶಿವಾನಂದ ಮುಳಗುಂದ ತಿಳಿಸಿದರು.
ಯಾರೆಲ್ಲಾ ಭಾಗವಹಿಸ್ತಾರಾ?
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ ಉದ್ಘಾಟಿಸಲಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತ ಚಂದ್ರಾಮ ಗ್ರಾಮಪುರೋಹಿತ ಅಧ್ಯಕ್ಷತೆ ವಹಿಸಲಿದ್ದಾರೆ. ರೋಣ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ಫಣಿಬಂದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಜ್ಞಾನ ದೀಪಗಳು ಕಾರ್ಯಕ್ರಮದಡಿ ಧಾರವಾಡದ ನಿವೃತ್ತ ಉಪನಿರ್ದೇಶಕ ಸಂಜೀವ ಬಿಂಗೇರಿ, ರೋಣ ಅಕ್ಷರ ದಾಸೋಹದ ನಿವೃತ್ತ ಸಹಾಯಕ ನಿರ್ದೇಶಕ ವೀರಪ್ಪ ಬಸಪ್ಪ ಸಂಗನಾಳ, ನಿವೃತ್ತ ಶಿಕ್ಷಕಿ ಕುಸುಮವ್ವ ಭೀಮನಗೌಡ್ರ, ನಿವೃತ್ತ ಶಿಕ್ಷಕರಾದ ಶರಣಬಸಪ್ಪ ಬೂದಿಹಾಳ, ಅಂದಾನಪ್ಪ ಅಣಗೌಡರ, ಎಂ.ಎಸ್. ಧಡೇಸೂರಮಠ, ನಿಂಗನಗೌಡ ಚಿಕ್ಕನಗೌಡ್ರ, ಬಸವನಗೌಡ ಗೌಡರ, ಸಿ.ಬಿ. ಹಿರೇಮಠ, ನಿವೃತ್ತ ಶಿಕ್ಷಕಿ ಎಂ.ಪಿ. ಬಸರೀಗಿಡದ, ಮುಖ್ಯ ಶಿಕ್ಷಕಿ ಗೀತಾ ಗುಜ್ಜಲ ಹಾಗೂ ಶಿಕ್ಷಕಿ ಮಲ್ಲವ್ವ ಸಕ್ರೋಜಿ ಅವರನ್ನು ಸನ್ಮಾನಿಸಲಾಗುವುದು ಎಂದರು.
ಪತ್ರಕರ್ತ ಅರುಣ ಕುಲಕರ್ಣಿ ಮಾತನಾಡಿದರು. ಮೈಲಾರಪ್ಪ ಗೋಡಿ, ಶಿವಾನಂದ ಪದ್ಮಸಾಲಿ, ಉಮೇಶ್ ಪಾದಗಟ್ಟಿ, ಶಿವಪ್ಪ ತಳವಾರ, ವಿರೂಪಾಕ್ಷಪ್ಪ ಸಂಗನಾಳ, ಪ್ರಸನ್ನಕುಮಾರ ಗಚ್ಚಿನಮಠ, ಬಸವರಾಜ ಕುಷ್ಟಗಿ ಹಾಗೂ ಮಾಬುಸಾಬ ಎಂ. ಇದ್ದರು.


