ಮಾವಿನಹಣ್ಣಿನ ದರ ಅಧಿಕವಾಗಿದ್ದರೂ ಚಿಕ್ಕಮಗಳೂರಿನಲ್ಲಿ ಖರೀದಿಗೆ ಮುಗಿಬಿದ್ದಿರುವ ಗ್ರಾಹಕರು
ಬಾಯಲ್ಲಿ ನೀರೂರಿಸುವ ಹಣ್ಣುಗಳರಾಜ ಮಾವು ಮಾರುಕಟ್ಟೆಗೆ ಬಂದಿಳಿದಿದ್ದು, ಬೇಡಿಕೆ ಉಂಟಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹಣ್ಣಿನ ದರ ಅಧಿಕವಾಗಿದ್ದರೂ ಮಾವು ಪ್ರಿಯರು ಖರೀದಿಸಲು ಮುಂದಾಗುತ್ತಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಮೇ.31): ಬಾಯಲ್ಲಿ ನೀರೂರಿಸುವ ಹಣ್ಣುಗಳರಾಜ ಮಾವು ಮಾರುಕಟ್ಟೆಗೆ ಬಂದಿಳಿದಿದ್ದು, ಬೇಡಿಕೆ ಉಂಟಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹಣ್ಣಿನ ದರ ಅಧಿಕವಾಗಿದ್ದರೂ ಮಾವು ಪ್ರಿಯರು ಖರೀದಿಸಲು ಮುಂದಾಗುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 2023 ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ತರೀಕೆರೆ ತಾಲೂಕಿನಲ್ಲಿ ಗರಿಷ್ಟ, ಮೂಡಿಗೆರೆ ತಾಲೂಕಿನಲ್ಲಿ ಕನಿಷ್ಟ ಹೆಕ್ಟೇರ್ನಲ್ಲಿ ಮಾವನ್ನು ಬೆಳೆಯುತ್ತಾರೆ ಅಜ್ಜಂಪುರ 769 ಹೆಕ್ಟೇರ್,ಚಿಕ್ಕಮಗಳೂರು 104, ಕಡೂರು 255, ಕೊಪ್ಪ 6, ಕಳಸ 21, ಮೂಡಿಗೆರೆ 1, ನರಸಿಂಹರಾಜಪುರ 9, ಶೃಂಗೇರಿ 3, ತರೀಕೆರೆ ತಾಲೂಕಿನಲ್ಲಿ 845 ಹೆಕ್ಟೇರ್ನಲ್ಲಿ ಮಾವು ಬೆಳೆಯಲಾಗುತ್ತಿದೆ.
ಕೆಜಿಗೆ 100ರಿಂದ 200 ರೂಪಾಯಿ
ಅಂಗಡಿಗಳಲ್ಲಿ, ತಳ್ಳುಗಾಡಿಯಲ್ಲಿ ಬಿದಿರು ಬುಟ್ಟಿಯಲ್ಲಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ. ಕಳೆದ ವರ್ಷ ಪ್ರತಿಕೆಜಿಗೆ 50ರಿಂದ 60 ರೂ.ಗಳಿಗೆ ಮಾರಾಟವಾಗುತ್ತಿದ್ದ ಮಾವಿನ ಹಣ್ಣು ಈ ವರ್ಷ ಪ್ರತಿ ಕೆ.ಜಿ.ಗೆ 100 ರೂ. ನಿಗದಿಯಾಗಿದ್ದು, 200 ರೂ.ಗಳಿಗೆ ಎರಡೂವರೆ ಕೆ.ಜಿ.ಹಣ್ಣನ್ನು ಕೊಡಲಾಗುತ್ತಿದೆ.ನಗರದ ಅಂಬೇಡ್ಕ್ರ ಬೀದಿಯ ತಿರುವಿನಲ್ಲಿರುವ ಎ.ಎಸ್.ಫ್ರೂಟ್ಸ್ ಮಂಡಿಗೆ ಮಲ್ಲಿಕಾ,ರಾಜಪುರಿ, ಹಿಮಾಲಯ, ಕಲ್ಪಾಡಿ, ಸೆಂಧೂರ್, ಲಾಲ್ಬಾಗ್, ನೀಲಂ,ತೋತಾಪುರಿ, ಬೈಗಲ್ಪಲ್ಲಿ, ಬಾದ್ಷಾ, ಲಂಗ್ರಚೌನ್ಸ್,ಪಸಂದ್, ಸುನೇರಿ, ಆಲ್ಫ್ನ್ಸ್, ಹೇಮಸಾಗರ್, ನೀಲಿಷಾ, ಮಾವಿನಹಣ್ಣುಗಳು ಮಾರುಕಟ್ಟೆಗೆ ಲಗ್ಗೆಇಟ್ಟಿವೆ. ಮಹಾತ್ಮಗಾಂಧಿರಸ್ತೆಯಲ್ಲಿ ಎ.ಎಸ್.ಫ್ರೂಟ್ಸ್ ಅಂಗಡಿಯಲ್ಲಿ ಬಗೆಬಗೆಯ ಮಾವಿನ ಹಣ್ಣುಗಳ ಮಾರಾಟ ನಡೆಯುತ್ತಿದ್ದು, ರಸ್ತೆಯಲ್ಲಿ ಹೋಗುವಾಗ ಜೋಡಿಸಿಟ್ಟಿರುವ ಮಾವಿನ ಹಣ್ಣುಗಳು ಬಾಯಲ್ಲಿ ನೀರೂರುವಂತೆ ಮಾಡುತ್ತಿವೆ.
ರಾಜ್ಯದಲ್ಲಿದೆ ಏಷ್ಯಾದ ಅತಿದೊಡ್ಡ ಮಾವು ಮಾರುಕಟ್ಟೆ, ಆದರೆ ಕನಿಷ್ಠ ಮೂಲಭೂತ ಸೌಕರ್ಯವೂ ಇಲ್ಲ!
ಮಾರುಕಟ್ಟೆಗೆ ಬಗೆಬಗೆಯ ಮಾವಿನ ಹಣ್ಣುಗಳು :
ರಸಪೂರಿ, ಬಲಗೂಬಾ,ಸೆಂಧೂರ, ಬಾದಮ್ ಮಾವಿನಹಣ್ಣುಗಳಿಗೆ ಬೇಡಿಕೆ ಉಂಟಾಗುತ್ತಿದೆ. ತುಮಕೂರು, ತರೀಕೆರೆ, ಬಾಣಾವಾರಗಳಿಂದ ಮಾವಿನಕಾಯಿಗಳು ಮಂಡಿಗೆ ಬಂದಿಳಿಯುತ್ತಿವೆ. ಇಲ್ಲಿಂದ ಹೋಲ್ಸೇಲ್ ಮೂಲಕ ಮೂಡಿಗೆರೆ, ಸಕಲೇಶಪುರ, ತರೀಕೆರೆ, ಶೃಂಗೇರಿ ತಾಲೂಕುಗಳಿಗೆ ಮಾವಿನ ಹಣ್ಣುಗಳು ಮಾರಾಟಕ್ಕೆ ತೆರಳುತ್ತಿವೆ ಅಂಗಡಿ ಮಾಲೀಕ ಸಲ್ಮಾನ್ ಮಾಹಿತಿ ನೀಡಿದರು.ಮಹಾರಾಷ್ಟ್ರದಿಂದ 600 ಬಾಕ್ಸ್ ಆಲ್ಫ್ನ್ಸ್ ಬಂದಿದೆ. ಮಾವಿನ ಹಣ್ಣುಗಳ ಕನಿಷ್ಟ 40 ರೂ.ಗಳಿಂದ ಗರಿಷ್ಟ 1ಸಾವಿರ ರೂ.ದರ ನಿಗದಿಯಾಗಿದೆ. ಸಗಟಾಗಿ 20ರೂ.ಗಳಿಂದ 120 ರೂ.ದರದಲ್ಲಿ ನೀಡಲಾಗುತ್ತಿದ್ದು, ಮಾವಿನಹಣ್ಣುಗಳಿಗೆ ಭಾರೀ ಬೇಡಿಕೆ ಉಂಟಾಗಿದೆ.
ಹನುಮಂತಪ್ಪವೃತ್ತ, ವಿಜಯಪುರ ತೊಗರಿಹಂಕಲ್ಸರ್ಕಲ್ ಆಜಾದ್ಪಾರ್ಕ್ ಸಮೀಪ ತಳ್ಳುಗಾಡಿ ಮತ್ತು ಬುಟ್ಟಿಯಲ್ಲಿ ಹಣ್ಣುಗಳನ್ನಿಟ್ಟುಕೊಂಡು ಮಾರಾಟ ಮಾಡಲಾಗುತ್ತಿದೆ. ಬನ್ನಿಸಾರ್ ಬನ್ನಿ ತಗೋಳಿ ಒಳ್ಳೆಮಾವಿನಹಣ್ಣು ಕೆ.ಜಿ.ಗೆ 100 ರೂ. ಖರೀದಿಸಿ ಇಂದೇ ತಿನ್ನಿರಿ ಎಂದು ಸಾರ್ವಜನಿಕರನ್ನು ವ್ಯಾಪಾರಸ್ಥರು ಕೂಗಿ ಕರೆಯುತ್ತಿದ್ದಾರೆ.
ಕೊಪ್ಪಳದ ಮಿಯಾಜಾಕಿ ಮಾವಿನ ಹಣ್ಣಿಗೆ 2.50 ಲಕ್ಷ ರೂ: ವಿಶ್ವದ ದುಬಾರಿ ಮಾವು
ಚರ್ಚೆನಡೆಸಿ 200 ರೂ.ಗಳನ್ನುಕೊಟ್ಟು ಎಡರೂವರೆ ಕೆ.ಜಿ.ಮಾವಿನಹಣ್ಣುಗಳನ್ನು ಖರೀದಿಸಿ ಮನೆಹಾದಿತುಳಿಯುತ್ತಿರುವ ದೃಶ್ಯ ನಗರದಲ್ಲಿ ಸಾಮಾನ್ಯವಾಗಿದೆ.ಈ ವರ್ಷ ಮಾವಿನ ಹಣ್ಣಿಗೆ ಬೇಡಿಕೆ ಇದೆ. ಆರಂಭದಲ್ಲಿ ವ್ಯಾಪಾರ ಅಷ್ಟಕಷ್ಟೆ ನಡೆಯುತಿತ್ತು. ಈಗ ಹಣ್ಣಿಗೆ ಬೇಡಿಕೆ ಬಂದಿರುವುದರಿಂದ ವ್ಯಾಪಾರ ಪರವಾಗಿಲ್ಲ,ಒಂದು ದಿವಸ ವ್ಯಾಪರ ಆಗುತ್ತೆ ಮತ್ತೊಂದು ದಿವಸ ವ್ಯಾಪಾರ ಆಗುವುದಿಲ್ಲ 50 ರಿಂದ 70 ಕೆ.ಜಿವರೆಗೆ ಹಣ್ಣುಗಳ ವ್ಯಾಪಾರ ನಡೆಸಲಾಗುತ್ತಿದೆ ವ್ಯಾಪಾರಿ ಸಿ.ಎನ್.ದರ್ಶನ್ ತಿಳಿಸಿದರು