ಮುದ್ರಾಂಕ ಮತ್ತು ನೋಂದಣಿ ಇಲಾಖೆಯಲ್ಲಿ ಆಫ್‌ಲೈನ್‌ಗೂ ಅವಕಾಶ ನೀಡಿ

ರಾಜ್ಯ ಸರ್ಕಾರದ ಕಂದಾಯ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುದ್ರಾಂಕ ಮತ್ತು ನೋಂದಣಿ ಇಲಾಖೆಯು ಇತ್ತೀಚೆಗೆ ಕಾವೇರಿ 2.0 ತಂತ್ರಾಂಶವನ್ನು ಬಳಸಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೂಚಿಸಿದೆ. ಅದರಂತೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ತಂತ್ರಾಂಶವನ್ನು ಜಾರಿ ಮಾಡಲು ಉದ್ದೇಶಿಸಿದ್ದಾರೆ. ಈವರೆಗೆ ಇಲಾಖೆಯ ಕೆಲಸಕಾರ್ಯಗಳು ಶೀಘ್ರ ಗತಿಯಲ್ಲಿ ನಡೆಯುತ್ತಿದ್ದು, ತಂತ್ರಾಂಶ ಅಳವಡಿಕೆಯಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಎಲ್ಲಾ ರೀತಿಯಲ್ಲೂ ತೊಂದರೆ ಅನುಭವಿಸಬೇಕಾಗುತ್ತದೆ.

Allow offline also in stamp and registration department snr

 ಮೈಸೂರು :  ರಾಜ್ಯ ಸರ್ಕಾರದ ಕಂದಾಯ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುದ್ರಾಂಕ ಮತ್ತು ನೋಂದಣಿ ಇಲಾಖೆಯು ಇತ್ತೀಚೆಗೆ ಕಾವೇರಿ 2.0 ತಂತ್ರಾಂಶವನ್ನು ಬಳಸಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೂಚಿಸಿದೆ. ಅದರಂತೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ತಂತ್ರಾಂಶವನ್ನು ಜಾರಿ ಮಾಡಲು ಉದ್ದೇಶಿಸಿದ್ದಾರೆ. ಈವರೆಗೆ ಇಲಾಖೆಯ ಕೆಲಸಕಾರ್ಯಗಳು ಶೀಘ್ರ ಗತಿಯಲ್ಲಿ ನಡೆಯುತ್ತಿದ್ದು, ತಂತ್ರಾಂಶ ಅಳವಡಿಕೆಯಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಎಲ್ಲಾ ರೀತಿಯಲ್ಲೂ ತೊಂದರೆ ಅನುಭವಿಸಬೇಕಾಗುತ್ತದೆ.

ಇಲಾಖೆಯು ಸಾರ್ವಜನಿಕರ, ಜನಸಾಮಾನ್ಯರ ನೇರ ಸಂಪರ್ಕ ಹೊಂದಿದೆ. ಕಳೆದ ಆರ್ಥಿಕ ವರ್ಷದಲ್ಲಿ 21 ಲಕ್ಷಕ್ಕೂ ಹೆಚ್ಚು ದಾಖಲಾತಿಗಳನ್ನು ನೋಂದಣಿ ಮಾಡಿದೆ. ಇದರಿಂದಾಗಿ 2022-23ನೇ ಆರ್ಥಿಕ ವರ್ಷದಲ್ಲಿ 14,600 ಕೋಟಿ ರು.ಗಳನ್ನು ಮುದ್ರಾಂಕ ಹಾಗೂ ನೋಂದಣಿ ಶುಲ್ಕವಾಗಿ ಸಂಗ್ರಹಿಸಲಾಗಿದೆ. ಆದರೆ ಇಲಾಖೆಯು ಕಾವೇರಿ 2.0 ತಂತ್ರಾಂಶವನ್ನು ಎಲ್ಲಾ ಜಿಲ್ಲೆಗಳಲ್ಲೂ ಹಂತ ಹಂತವಾಗಿ ಜಾರಿ ಮಾಡಲು ಮುಂದಾಗಿದೆ. ಇದು ಹೆಚ್ಚಿನ ಸಾರ್ವಜನಿಕರಿಗೆ ತಿಳಿದಿಲ್ಲ. ಇಲಾಖೆಯ ಅಧಿಕಾರಿಗಳ ಪ್ರಕಾರ, ಈ ಪ್ರಕ್ರಿಯೆಯು ಜನಸ್ನೇಹಿಯಾಗಿದ್ದು, ನೋಂದಣಿ ಪ್ರಕ್ರಿರೆಯೆ ಅತ್ಯಲ್ಪ ಅವಧಿಯಲ್ಲಿ ಮುಗಿಯುವ ಭರವಸೆ ನೀಡಲಾಗಿದೆ.

ಆದರೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಪ್ರತಿಯೊಬ್ಬ ಜನಸಾಮಾನ್ಯರು ತಂತ್ರಜ್ಞಾನವನ್ನು ಸ್ವತಃ ಅಳವಡಿಸಿಕೊಂಡು ತಿಳಿಯುವುದು ಅವಶ್ಯಕ. ಈ ಹಿಂದೆ ದಾಖಲಾತಿಗಳನ್ನು ಹಾಜರುಪಡಿಸಿ, ನಿಗದಿತ ಶುಲ್ಕ ಪಾವತಿಸಿ, ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವ ಅವಕಾಶ ಇತ್ತು. ಆದರೆ ಈಗ ನೇರವಾಗಿ ಯಾವುದೇ ದಾಖಲಾತಿ ಹಾಜರುಪಡಿಸುವಂತಿಲ್ಲ. ಇದಕ್ಕಾಗಿ ಮಧ್ಯವರ್ತಿ ಅಥವಾ ವಕೀಲರ ಅವಶ್ಯಕತೆ ಇದ್ದು, ಅವರು ಸಹ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾದ ಅನಿವಾರ್ಯತೆ ಜನಸಾಮಾನ್ಯರ ಮೇಲಿದೆ.

ಇಲಾಖೆಯ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು, ಜನಮಾನ್ಯರೊಂದಿಗ ಒಡನಾಡಿ, ತಿದ್ದುಪಡಿ ಇದ್ದಲ್ಲಿ ಮಾಡಬೇಕಾಗುತ್ತದೆ. ಆದರೆ ಆನ್‌ಲೈನ್‌ ಮೂಲಕ ನೋಂದಣಯಾದಲ್ಲಿ ಇದು ಸಾಧ್ಯವಾಗದು. ನೋಂದಣಿ, ಮುದ್ರಾಂಕ ಶುಲ್ಕ, ಋುಣಭಾರ ಪತ್ರ ಶುಲ್ಕವನ್ನು ನೆಟ್‌ ಬ್ಯಾಂಕಿಂಗ್‌, ಪೇಟಿಯಂ, ಗೂಗಲ್‌ ಪೇ ಮೂಲಕ ಪಾವತಿಸಬೇಕು. ಮೊದಲಿನಂತೆ ಕೆ2 ಚಲನ್‌ ಮೂಲಕ ಪಾವತಿಸುವಂತಿಲ್ಲ. ಶೇ.50 ರಷ್ಟುಮಂದಿಗೆ ಇವೆಲ್ಲಾ ಗೊತ್ತೇ ಇಲ್ಲ.

ಹೀಗಾಗಿ ಆನ್‌ಲೈನ್‌ ಅಥವಾ ಆಫ್‌ಲೈನ್‌ ಅನ್ನು ಸಾರ್ವಜನಿಕರ ಆಯ್ಕೆಗೆ ಬಿಡಬೇಕು. ಅವರ ಇಷ್ಟಬಂದಂತೆ ನೋಂದಣಿ ಮಾಡಿಸಿಕೊಳ್ಳುತ್ತಾರೆ. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಇರುವ 255 ಉಪ ನೋಂದಣಾಧಿಕಾರಿಗಳ ಕಚೇರಿಗಳು, 290 ಉಪ ನೋಂದಣಾಧಿಕಾರಿಗಳು, 7000 ಸಿಬ್ಬಂದಿ ವರ್ಗಕ್ಕೆ ಕೆಲಸವೇ ಇಲ್ಲದಂತಾಗುತ್ತದೆ. ಆದ್ದರಿಂದ ಆನ್‌ಲೈನ್‌ ಜೊತೆಗೆ ಆಫ್‌ಲೈನ್‌ಗೂ ಕೂಡ ಅವಕಾಶ ನೀಡಬೇಕು ಎಂದು ಕೋರುತ್ತೇನೆ.

-ಎಂ.ಎನ್‌. ರಘುವೀರ್‌,  

ಕೃಷಿ ಜಮೀನು ಬಿಡಲು ಮನವಿ

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 
ಚಿಕ್ಕಮಗಳೂರು (ನ.16):  ಕಂದಾಯ ಇಲಾಖೆಯ ಸರ್ಕಾರಿ ಜಮೀನುಗಳಿಗೆ ಅವೈಜ್ಞಾನಿಕವಾಗಿ ಮಾಡಿರುವ 4(1) ನೋಟಿಫಿಕೇಶನ್ ಅನ್ನು ಸರಿಪಡಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಶೃಂಗೇರಿ ತಾಲೂಕಿನ ಪದಾಧಿಕಾರಿಗಳು ಚಿಕ್ಕಮಗಳೂರು ಜಿಲ್ಲೆಯ  ಶೃಂಗೇರಿಯ ವಲಯ ಅರಣ್ಯ ಅಧಿಕಾರಿಗೆ ಇಂದು ಮನವಿ ಸಲ್ಲಿಸಿದ್ದಾರೆ.

ಕಂದಾಯ ಇಲಾಖೆಯ ಜಮೀನುಗಳಿಗೆ ಹೊರಡಿಸಲಾಗಿರುವ 4(1) ನೋಟಿಫಿಕೇಶನ್  (Notification) ಅನ್ನು ತಕ್ಷಣವೇ ಹಿಂಪಡೆಯಬೇಕು. ಈ ಜಮೀನು ಬಗ್ಗೆ ರೈತರು ನೀಡಿರುವ ತಕರಾರು ಅರ್ಜಿಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಜಮೀನು (Lands)ಗಳನ್ನು ರೈತರಿಗೆ ಬಿಟ್ಟುಕೊಡಬೇಕು. ಈ ಕುರಿತಾಗಿ ಅರಣ್ಯ (Forest) ವ್ಯವಸ್ಥಾಪನಾಧಿಕಾರಿಗಳ ಗಮನಕ್ಕೆ ವಿಷಯವನ್ನು ತಲುಪಿಸಿದ್ದರೂ ಕೂಡ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಇರುವುದು ಸರಿಯಲ್ಲ. ಫೋರ್ ಒನ್ ನೋಟಿಫಿಕೇಶನ್ ಹೊರಡಿಸಿರುವುದರಿಂದ ಫಾರಂ (Farm) ನಂಬರ್ 53, 57, 94ಸಿ ಅಡಿಯಲ್ಲಿ ಮಂಜೂರಾತಿಗೆ ತಡೆ ಉಂಟಾಗಿದೆ. ಕೂಡಲೇ ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಶೃಂಗೇರಿ (Shringeri)ತಾಲೂಕಿಗೆ ಆಗಮಿಸಿ ಪರಿಶೀಲನೆ ನಡೆಸಿ ರೈತರು ಕೃಷಿ ಮಾಡಿರುವ ಜಮೀನುಗಳನ್ನು ರೈತರಿಗೆ ಬಿಟ್ಟುಕೊಡಬೇಕೆಂದು ಮನವಿ ಸಲ್ಲಿಸಿದರು. 

ಅರಣ್ಯ ಭೂಮಿ ಡಿನೋಟಿಫೈ: ಕೇಂದ್ರಕ್ಕೆ ಬಿಎಸ್‌ವೈ ಮನವಿ

ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ: ಅರಣ್ಯ ಇಲಾಖೆಯು ಈ ಹಿಂದೆ ನೆಟ್ಟಿರುವ ಕಲ್ಲಿನ (Standing Stone) ಗುರುತಿನ ಪಕ್ಕ ಈಗ ಮತ್ತೆ ಗುರುತಿನ ಕಲ್ಲುಗಳನ್ನು ನೆಡುತ್ತಾ ಇರುವುದು ಸರಿಯಲ್ಲ. ಅರಣ್ಯ ವ್ಯವಸ್ಥಾಪನಾಧಿಕಾರಿಗೆ ಈಗಾಗಲೇ ರೈತರು ಮಾಡಿರುವ ಜಮೀನು 4(1) ಸೇರಿದ್ದರೆ, ಕೈ ಬಿಡುವಂತೆ ಅರ್ಜಿ ಸಲ್ಲಿಸಿರುತ್ತಾರೆ. ಆದರೆ ಅಧಿಕಾರಿಗಳು ಇನ್ನೂ ಯಾವುದೇ ಸ್ಥಳಗಳಿಗೆ ಭೇಟಿ ನೀಡಿ (Place Visit) ಪರಿಶೀಲನೆ ಮಾಡಿಲ್ಲ. ಕೂಡಲೇ ಅರಣ್ಯ ವ್ಯವಸ್ಥಾಪನಾ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ರೈತರು ಕೃಷಿ ಮಾಡಿರುವ ಜಮೀನು ಮತ್ತು ವಾಸದ ಮನೆ (Residential house) ಮುಂತಾದ ರೈತರಿಗೆ ಆವಶ್ಯಕತೆಯಿರುವ ಪ್ರದೇಶಗಳನ್ನು ಅವರಿಗೆ ಬಿಟ್ಟುಕೊಡಬೇಕು. ರೈತರು ಉಪಯೋಗಿಸದ ಜಮೀನುಗಳ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಕೋರಲಾಗಿದೆ. ಹೀಗಾಗಿ ರೈತರ ಬಳಕೆ ಮಾಡುತ್ತಿರುವ ಜಮೀನಿನಲ್ಲಿ ಯಾವುದೇ ಕ್ರಮಗಳನ್ನು ಕೈಗೊಳ್ಳದೇ, ತಕ್ಷಣದಿಂದ ಕಲ್ಲು ನೆಡುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.

ಸಿಎಂ ನೇತೃತ್ವದಲ್ಲಿ ಕಡೂರು ತಾಲೂಕಿನಲ್ಲಿ ಜನ ಸಂಕಲ್ಪ ಸಮಾವೇಶ

Latest Videos
Follow Us:
Download App:
  • android
  • ios