Shivamogga News: ಇನ್ಮೇಲೆ ಕಂಡಲ್ಲೆಲ್ಲ ಕೈಎತ್ತಿದ್ರೆ ಸಿಟಿ ಬಸ್ ನಿಲ್ಲಲ್ಲ; ಬಸ್ ನಿಲ್ದಾಣಕ್ಕೆ ಜಾಗ ಗುರುತು

ನಗರದಲ್ಲಿ ಸಿಟಿ ಬಸ್‌ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದಾರೆ. ಕೆಲವೊಮ್ಮೆ ಪ್ರಮಾಣಿಕರು ಕೈ ಅಡ್ಡ ತೋರುವ ಕಡೆಗಳ​ಲ್ಲೆಲ್ಲ ಬಸ್‌ಗಳನ್ನು ನಿಲ್ಲಿಸುವ ಪರಿಪಾಟ ಇದೆ. ಹೀಗಾಗಿ ಇನ್ನುಮುಂದೆ ಕಂಡ ಕಂಡಲೆಲ್ಲ ಸಿಟಿ ಬಸ್‌ಗಳನ್ನು ನಿಲ್ಲಿಸುವಂತಿಲ್ಲ.

Allotment of space for Shimoga city bus stand rav

ಶಿವಮೊಗ್ಗ (ಜ.2) :\ ನಗರದಲ್ಲಿ ಸಿಟಿ ಬಸ್‌ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದಾರೆ. ಕೆಲವೊಮ್ಮೆ ಪ್ರಮಾಣಿಕರು ಕೈ ಅಡ್ಡ ತೋರುವ ಕಡೆಗಳ​ಲ್ಲೆಲ್ಲ ಬಸ್‌ಗಳನ್ನು ನಿಲ್ಲಿಸುವ ಪರಿಪಾಟ ಇದೆ. ಹೀಗಾಗಿ ಇನ್ನುಮುಂದೆ ಕಂಡ ಕಂಡಲೆಲ್ಲ ಸಿಟಿ ಬಸ್‌ಗಳನ್ನು ನಿಲ್ಲಿಸುವಂತಿಲ್ಲ.

ಹೌದು. ನಗರದೊಳಗೆ ಎಲ್ಲೆಂದರಲ್ಲಿ ಸಿಟಿ ಬಸ್‌ಗಳು ನಿಲ್ಲಿಸುತ್ತಿರುವುದರಿಂದ ನಗರದಲ್ಲಿ ಟ್ರಾಫಿಕ್‌ ಸಮಸ್ಯೆ ಬಿಗಡಾಯಿಸಿದೆ. ಹೀಗಾಗಿ ಜಿಲ್ಲಾಧಿಕಾರಿ ಡಾ.ಆರ್‌.ಸೆಲ್ವಮಣಿ ಅವರು ಶಿವಮೊಗ್ಗದಲ್ಲಿ 117 ಬಸ್‌ ಸ್ಟಾಪ್‌ ಗುರುತಿಸಿ ಅಧಿಸೂಚನೆ ಹೊರಡಿಸಿದ್ದು, ನಗರದಲ್ಲಿ ಸಂಚರಿಸುತ್ತಿರುವ ಸಿಟಿ ಬಸ್ಸುಗಳು ನಿಗದಿತ ನಿಲ್ದಾಣದಲ್ಲಿಯೆ ಬಸ್‌ ನಿಲ್ಲಿಸಬೇಕು ಎಂದು ಸೂಚಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ 117 ನಿಲ್ದಾಣಗಳನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಬಹತೇಕ ಕಡೆಯಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಬಸ್‌ ಶೆಲ್ಟರ್‌ ನಿರ್ಮಾಣ ಮಾಡಲಾಗಿದೆ.

ಅಭಿ​ವೃದ್ಧಿ ಕಾಮ​ಗಾ​ರಿ​ಗ​ಳ​ಲ್ಲಿ ನಿರ್ಲ​ಕ್ಷ್ಯತೆ, ತಪ್ಪು ಸರಿ​ಪ​ಡಿ​ಸಿ​ಕೊ​ಳ್ಳಿ: ಶಾಸಕ ಹಾಲಪ್ಪ

ಎಲ್ಲೆಲ್ಲಿ ನಿಲ್ದಾಣ ಇರಲಿದೆ?

ಪೂರ್ವ ಸಂಚಾರಿ ಠಾಣೆ ವ್ಯಾಪ್ತಿ

ಬಿ.ಎಚ್‌. ರಸ್ತೆಯಲ್ಲಿ - ಶಿವಪ್ಪನಾಯಕ ವೃತ್ತ, ಸರ್ಕಾರಿ ಮೇನ್‌ ಮಿಡ್ಲ್‌ ಸ್ಕೂಲ್‌ ಎದುರು, ಕರ್ನಾಟಕ ಸಂಘ ಬಸ್‌ ನಿಲ್ದಾಣ, ಡಿಡಿಪಿಐ ಕಚೇರಿ ದ್ವಾರದ ಬಳಿ, ಕೃಷ್ಣ ಕೆಫೆ ಹೊಟೇಲ್‌ ಎದುರು, ಮೀನಾಕ್ಷಿ ಭವನ, ಕರ್ನಾಟಕ ಪಬ್ಲಿಕ್‌ ಶಾಲೆ ಎದುರು, ತುಂಗಾನದಿ ಹೊಳೆ ಬಸ್‌ ಸ್ಟಾಪ್‌, ಹೊಳೆಹೊನ್ನೂರು ಕ್ರಾಸ್‌ (ಎನ್‌ಸಿಸಿ ಕಚೇರಿ ಹತ್ತಿರ), ಮಹಾದೇವಿ ಟಾಕೀಸ್‌, ವಿದ್ಯಾನಗರ ಗಣೇಶ ಭವನ, ಗಣಪತಿ ದೇವಸ್ಥಾನ ಎಡಭಾಗ (ವಿದ್ಯಾನಗರ), ಗಣಪತಿ ದೇವಸ್ಥಾನ ಬಲಭಾಗ (ವಿದ್ಯಾನಗರ), ದೂರದರ್ಶನ ಕೇಂದ್ರ ಬಳಿ, ಎಂ.ಆರ್‌.ಎಸ್‌. ಸರ್ಕಲ್‌ ಎಡಭಾಗ, ಎಂ.ಆರ್‌.ಎಸ್‌ ಸರ್ಕಲ್‌ ಬಲಭಾಗ, ಹರಿಗೆ, ಹಾಥಿ ನಗರ ಕ್ರಾಸ್‌, ಶುಗರ್‌ ಫ್ಯಾಕ್ಟರಿ, ಮಲವಗೊಪ್ಪ ಚನ್ನಬಸವೇಶ್ವರ ದೇವಸ್ಥಾನ ಬಳಿ, ಕಾಡಾ ಕಚೇರಿ ಎದುರು.

ಹೊಳೆಹೊನ್ನೂರು ರಸ್ತೆ - ಸಿದ್ದೇಶ್ವರ ನಗರ 2ನೇ ಕ್ರಾಸ್‌, ಕೆನರಾ ಬ್ಯಾಂಕ್‌ ಎದುರು, ಗುರುಪುರ, ಪುರಲೆ, ಸುಬ್ಬಯ್ಯ ಮೆಡಿಕಲ್‌ ಕಾಲೇಜು.

ಎನ್‌.ಆರ್‌.ಪುರ ರಸ್ತೆ - ಜ್ಯೋತಿ ನಗರ, ಒಡ್ಡಿನಕೊಪ್ಪ.

ಬಾಲರಾಜ ಅರಸ್‌ ರಸ್ತೆ - ಮುಖ್ಯ ಅಂಚೆ ಕಚೇರಿ ಎದುರು, ತಾನಿಷ್‌್ಕ ಜ್ಯೂವೆಲರ್ಸ್‌ ಎದುರು, ತಾಲೂಕು ಕಚೇರಿ ಎದುರು, ಕೆಇಬಿ ಸರ್ಕಲ…, ಮುಖ್ಯ ರೈಲ್ವೆ ನಿಲ್ದಾಣ.

ಹೊನ್ನಾಳಿ ರಸ್ತೆ - ಸಂಗೊಳ್ಳಿ ರಾಯಣ್ಣ ಸರ್ಕಲ…, ಶೃತಿ ಶೋ ರೂಂ ಎದುರು ಹೊನ್ನಾಳಿ ರಸ್ತೆ (ಶಾಂತಿ ನಗರ), ಶ್ರೀ ನಾಗಪ್ಪ ಸರ್ಕಲ್‌ ಶಾಂತಿನಗರ, ಪೇಸ್‌ ಕಾಲೇಜ್‌ ಎದುರು, ತ್ಯಾವರೆ ಚಟ್ನಳ್ಳಿ.

ಸವಳಂಗ ರಸ್ತೆ - ಈದ್ಗಾ ಮೈದಾನದ ಎದುರು (ಡಿಸಿ ಕಚೇರಿ ಮುಂಭಾಗ), ಜಯನಗರ ಠಾಣೆ ಬಳಿ, ವಂದನಾ ಬೇಕರಿ ಬಳಿ, ಉಷಾ ನರ್ಸಿಂಗ್‌ ಹೋಂ ಬಳಿ, ಎಲ….ಬಿ.ಎಸ್‌. ನಗರ 2ನೇ ಕ್ರಾಸ್‌, ನವುಲೆ, ತ್ರಿಮೂರ್ತಿ ನಗರ ಗಣಪತಿ ದೇವಸ್ಥಾನ, ಕುವೆಂಪು ನಗರ ಕ್ರಾಸ್‌, ಜೆಎನ್‌ಸಿಇ ಕಾಲೇಜು, ಅಕ್ಷರ ಕಾಲೇಜು, ಕೃಷಿ ಕಾಲೇಜು, ಚನ್ನಮುಂಭಾಪುರ ಕ್ರಾಸ್‌, ಬಸವನಗಂಗೂರು ಕ್ರಾಸ್‌, ರತ್ನಾಕರ ಬಡಾವಣೆ, ಸರ್ಕಾರಿ ನೌಕರರ ಬಡಾವಣೆ, ರತ್ನಗಿರಿ ಬಡಾವಣೆ, ಕುವೆಂಪು ನಗರ ಎ ಬ್ಲಾಕ್‌ ವಿದ್ಯಾ ಭಾರತಿ ಕಾಲೇಜು ಬಳಿ, ಎನ….ಇ.ಎಸ್‌ ಲೇಔಟ್‌ ಕುವೆಂಪು ನಗರ.

100 ಅಡಿ ರಸ್ತೆ - ನಿರ್ಮಲಾ ಆಸ್ಪತ್ರೆ ಬಳಿ, ರಾಜೇಂದ್ರ ನಗರ ಚಾನಲ್‌ ಬಳಿ, ಗಾಂಧಿ ನಗರ, ರವೀಂದ್ರ ನಗರ ಗಣಪತಿ ದೇವಸ್ಥಾನ, ಬ್ಲಡ್‌ ಬ್ಯಾಂಕ್‌ ಬಳಿ

ಪಶ್ಚಿಮ ಸಂಚಾರಿ ಠಾಣೆ ವ್ಯಾಪ್ತಿ

ಮಿಳಘಟ್ಟಕ್ರಾಸ್‌ ನಿಂದ ಗೋಪಾಲಗೌಡ ಬಡಾವಣೆ - ಮಿಳಘಟ್ಟ, ಲಕ್ಷ್ಮೀ ಕ್ಯಾಂಟೀ ಪದ್ಮಾ ಟಾಕೀಸ್‌, ಅಣ್ಣಾ ನಗರ ಚಾನಲ…, ಗೋಪಾಳ ವಿನಾಯಕ ಸರ್ಕಲ…, ಗುಡ್‌ ಲಕ್‌ ಸರ್ಕಲ್‌ (ಸ್ವಾಮಿ ವಿವೇಕಾನಂದ ಬಡಾವಣೆ), ವೃದ್ಧಾಶ್ರಮ (ಎಲ….ಹೆಚ್‌.ಎಸ್‌)

New Year Party: ಹೊಸ ವರ್ಷ ಸಂಭ್ರಮಾಚರಣೆ ವೇಳೆ ಗನ್‌ಫೈರ್‌: ಗುಂಡು ಹಾರಿಸಿದ-ತಗುಲಿದ ಇಬ್ಬರೂ ಸಾವು

ಗೋಪಾಲ ಗೌಡ 100 ಅಡಿ ರಸ್ತೆ - ರ್ಮೊರ್‌ ಶಾಪ್‌ ಬಳಿ, ಗೋಪಾಲಗೌಡ ಬಡಾವಣೆ ‘ಎಚ್‌’ ಬ್ಲಾಕ್‌ ಪೆಟ್ರೋಲ್‌ ಬಂಕ್‌ ಎದುರು ವಿಜಯ ನಗರ ಮುಖ್ಯ ರಸ್ತೆ - ನೇತಾಜಿ ಸರ್ಕಲ…, ದ್ರೌಪದಮ್ಮ ಸರ್ಕಲ್‌

ತುಂಗಾ ನಗರ 100 ಅಡಿ ರಸ್ತೆ - ಚಾಲುಕ್ಯ ನಗರ (ಎಡಭಾಗ), ಚಾಲುಕ್ಯ ನಗರ (ಬಲಭಾಗ), ಚಾಲುಕ್ಯ ನಗರ ಓಪನ್‌ ಗ್ರೌಂಡ್‌, ತುಂಗಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹೊರ ವರ್ತುಲ ರಸ್ತೆ

Latest Videos
Follow Us:
Download App:
  • android
  • ios