ಹೈಕೋರ್ಟ್ಗೆ ಸುಳ್ಳು ಮಾಹಿತಿ ನೀಡಿದ್ಯಾ ಚಿತ್ರದುರ್ಗ ಜಿಲ್ಲಾಡಳಿತ..?
* ನೂತನ ಜಿಲ್ಲಾಧಿಕಾರಿ ಕಟ್ಟಡ ಕಾಮಗಾರಿಗೆ ಅಡೆತಡೆಗ
* ನೂತನ ಜಿಲ್ಲಾಧಿಕಾರಿ ಕಟ್ಟಡ ಕಾಮಗಾರಿಯಲ್ಲಿ ಅಕ್ರಮ ನಡೆದಿದ್ರೂ ಸೂಕ್ತ ತನಿಖೆ ಆಗ್ತಿಲ್ಲ ಎಂದು ಗ್ರಾಮಸ್ಥರ ಆರೋಪ
* ಹೈ ಕೋರ್ಟ್ ಆದೇಶದಂತೆ ತನಿಖೆ ನಡೆಸದೇ ಸುಳ್ಳು ಮಾಹಿತಿ ನೀಡಿದ್ದಾರೆಂದು ದೂರುದಾರರು ಆರೋಪ
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ, (ಜುಲೈ.07): ಚಿತ್ರದುರ್ಗದಲ್ಲಿ ನೂತನ ಜಿಲ್ಲಾಧಿಕಾರಿಗಳ ಕಚೇರಿ ಕಾಮಗಾರಿಗೂ ಮುನ್ನವೇ ಸಾಕಷ್ಟು ಅಡೆತಡೆಗಳು ಬಂದಿದ್ದವು. ಆದ್ರೂ ಅಧಿಕಾರಿಗಳು ಮಾತ್ರ ಅದನ್ನೆಲ್ಲಾ ಲೆಕ್ಕಸಿದೇ ತಮ್ಮ ಪಾಡಿಗೆ ತಾವು ಕಾಮಗಾರಿ ಮಾಡುತ್ತಲೇ ಇದ್ದಾರೆ. ಕಾಮಗಾರಿ ನೆಪದಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ ಎಂಬ ಆರೋಪ ಮಾಡಿದ್ರು, ನಮ್ಮಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಜಿಲ್ಲಾಡಳಿತ ಕೋರ್ಟ್ ಗೆ ಸುಳ್ಳು ಮಾಹಿತಿ ನೀಡ್ತಿದೆ ಎಂದು ದೂರುದಾರರು ಆಕ್ರೋಶ ಹೊರ ಹಾಕ್ತಿದ್ದಾರೆ. ಈ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.
ಎಸ್ ಜಿಲ್ಲೆಯ ತುಂಬೆಲ್ಲಾ ಬೆಟ್ಟ ಗುಡ್ಡಗಳು ದಟ್ಟವಾಗಿ ಬೆಳೆದು ನಿಂತಿರೋದ್ರಿಂದಲೇ ಚಿತ್ರದುರ್ಗ ಜಿಲ್ಲೆಯನ್ನು ಕೋಟೆನಾಡು ಎಂದು ಕರೆಯುತ್ತಾರೆ. ಆದ್ರೆ ಚಿತ್ರದುರ್ಗ ಹೊರವಲಯದಲ್ಲಿರುವ ಕುಂಚಿಗನಾಳ್ ಗ್ರಾ.ಪಂ ವ್ಯಾಪ್ತಿಗೆ ಬರುವ ಗುಡ್ಡದಲ್ಲಿ ನೂತನ ಡಿಸಿ ಆಫೀಸ್ ನಿರ್ಮಾಣ ಮಾಡಲು PNC ಕಂಪನಿಯವರಿಗೆ ಗುತ್ತಿಗೆ ನೀಡಿ ಕಾಮಗಾರಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ನಡೆಯುತ್ತಲೇ ಇದೆ. ಆದ್ರೆ ಕಾಮಗಾರಿ ವೇಳೆ ಕಲ್ಲುಗಣಿಗಾರಿ, ಮಣ್ಣು ಹಾಗೂ ಇನ್ನಿತರ ಅಕ್ರಮವಾಗಿ ಕಾಮಗಾರಿ ಮಾಡುವ ಮೂಲಕ ಕೋಟಿ ಕೋಟಿ ಹಣ ಲೂಟಿ ಮಾಡಲಾಗ್ತಿದೆ ಎಂದು ಕುಂಚಿಗನಾಳ್ ಗ್ರಾ.ಪಂ ಅಧ್ಯಕ್ಷರು ತಮ್ಮ ವಕೀಲರ ಸಮ್ಮುಖದಲ್ಲಿ ಹೈ ಕೋರ್ಟ್ ಮೊರೆ ಹೋಗಿದ್ದರು.
ಚಿತ್ರದುರ್ಗದಲ್ಲಿ ತಲೆನೋವಾದ ಗಣಿ ಲಾರಿಗಳು..!
ಅದರಂತೆ ಕಳೆದ ವರ್ಷ ಮಾರ್ಚ್ ೧೬ ನೇ ತಾರೀಖಿನಂದು ಹೈ ಕೋರ್ಟ್ ಮಹತ್ವದ ಆದೇಶ ನೀಡಿತ್ತು. ಇನ್ನು ಕೇವಲ ಮೂರು ತಿಂಗಳೊಳಗೆ ಅರ್ಜಿದಾರ ಸಮ್ಮುಖದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಸೂಕ್ತ ತನಿಖೆ ಮಾಡಿ ಸತ್ಯಾಂಶವನ್ನು ತಿಳಿಸಬೇಕು ಎಂದು ಖಡಕ್ ಆದೇಶ ನೀಡಿತ್ತು. ಆದ್ರೆ ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಈ ಮೂರು ಇಲಾಖೆಯ ಅಧಿಕಾರಿಗಳು ಸೇರಿ ಹೈ ಕೋರ್ಟ್ ಗೆ ದೂರು ಸಲ್ಲಿಸಿದ್ದ ಅರ್ಜಿದಾರರಿಗೆ ಮಾಹಿತಿಯೇ ನೀಡದೆ ಹೈ ಕೋರ್ಟ್ ಗೆ ಈ ಕಾಮಗಾರಿಯಲ್ಲಿ ಯಾವುದೇ ಅಕ್ರಮ ಕಾಮಗಾರಿ ನಡೆದಿಲ್ಲ ಎಂದು ಯಾವ ಆಧಾರದ ಮೇಲೆ ಹೇಳುತ್ತಾರೆ. ಇದ್ರಿಂದ ಜಿಲ್ಲಾಡಳಿತ ನ್ಯಾಯಾಲಯಕ್ಕೆ ಸುಳ್ಳು ಹೇಳಿ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡ್ತಿದ್ದೆ. ಇದೇನಾದ್ರು ನಮಗೆ ನ್ಯಾಯ ಸಿಗದೇ ಇದ್ದಲ್ಲಿ ಮುಂದೆ ನಾವು ಸುಪ್ರೀಂ ಕೋರ್ಟ್ ಗೆ ತೆರಳಿ ನ್ಯಾಯ ಸಿಗುವವರೆಗೂ ಹೋರಾಟ ಮಾಡ್ತೀವಿ ಎಂದು ಜಿಲ್ಲಾಡಳಿತಕ್ಕೆ ದೂರುದಾರರ ಪರ ವಕೀಲರು ಎಚ್ಚರಿಕೆ ಕೊಟ್ಟರು.
ಇನ್ನೂ ಈ ಅಕ್ರಮ ಕಾಮಗಾರಿ ಕುರಿತು ಕುಂಚಿಗನಾಳ್ ಗ್ರಾ.ಪಂ ಅಧ್ಯಕ್ಷರು ಹಾಗೂ ಸರ್ವ ಸದಸ್ಯರೆಲ್ಲರೂ ಜಿಲ್ಲಾಡಳಿತದ ವಿರುದ್ದ ಅನೇಕ ಹೋರಾಟ ಮಾಡಿದ್ರು ಯಾವುದೇ ಪ್ರಯೋಜನ ಆಗ್ತಿಲ್ಲ. ಅಲ್ಲದೇ ಹೈ ಕೋರ್ಟ್ ಆದೇಶದಂತೆ ಜಿಲ್ಲಾಡಳಿತ ನಮ್ಮ ಸಮ್ಮುಖದಲ್ಲಿಯೇ ಯಾಕೆ ತನಿಖೆ ಮಾಡ್ಲಿಲ್ಲ. ಗ್ರಾ.ಪಂ ಅಂದ್ರೆ ಇವರ ಕಣ್ಣಿಗೆ ಅಷ್ಟು ತುಚ್ಚವಾಗಿ ಕಾಣ್ತಿದೆಯೇ ಎಂದು ಪ್ರಶ್ನೆ ಮಾಡಿದ್ರು. ಇದಕ್ಕೆಲ್ಲಾ ನಾವು ನ್ಯಾಯಾಲಯದಲ್ಲಿಯೇ ಸೂಕ್ತ ಉತ್ತರ ಕೊಡ್ತೀವಿ. ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣದ ನೆಪದಲ್ಲಿ ಅಧಿಕಾರಿಗಳು ಸಿಕ್ಕಾಪಟ್ಟೆ ಹಣ ದೋಚುತ್ತಿರೋದು ಸತ್ಯ. ಅಂತವರಿಗೆ ಮುಂದಿನ ದಿನಗಳಲ್ಲಿ ಶಿಕ್ಷೆ ಆಗಿಯೇ ಆಗುತ್ತೆ ಎಂದರು.
ಒಟ್ಟಾರೆಯಾಗಿ ದೂರಿನ ಆಧಾರದ ಮೇಲೆ ಅಕ್ರಮವಾಗಿ ಕಾಮಗಾರಿ ಕುರಿತು ಅರ್ಜಿದಾರರ ಸಮ್ಮುಖದಲ್ಲಿಯೇ ತನಿಖೆ ನಡೆಸಿ ಎಂದು ಉಚ್ಚ ನ್ಯಾಯಾಲಯ ಸೂಕ್ತ ನಿರ್ದೇಶನ ನೀಡಿದ್ರು, ಅಧಿಕಾರಿಗಳು ಮಾತ್ರ ಅವರ ಗಮನಕ್ಕೆ ಬಾರದೇ ಹೈ ಕೋರ್ಟ್ ಗೆ ಪರಿಶೀಲನೆ ಮಾಡಿದ್ದೇವೆ ಎಂದು ಸುಳ್ಳು ಮಾಹಿತಿ ನೀಡಿರುವುದು ಖಂಡನೀಯ. ಕೂಡಲೇ ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕಿದೆ...