ರೇಷನ್ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ ಆಗಿರುವ ಬಗ್ಗೆ ಕೋಲಾರದಲ್ಲಿ ದೂರು ದಾಸ್ತಾನು ಕೇಂದ್ರದಿಂದಲೇ ಮಿಶ್ರಣ ಮಾಡಿರುವ ಆರೋಪ
ಕೋಲಾರ (ಸೆ.22): ರೇಷನ್ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ ಆಗಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ದಾಸ್ತಾನು ಕೇಂದ್ರದಿಂದಲೇ ಮಿಶ್ರಣ ಮಾಡಿರುವ ಆರೋಪ ದಟ್ಟವಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕೀಲಗಾಣಿ ಹಾಗೂ ಊರುಕುಂಟೆ ಮಿಟ್ಟೂರು ಪಡಿತರ ಕೇಂದ್ರದಲ್ಲಿ ಪತ್ತೆಯಾಗಿರುವುದಾಗಿ ಸುದ್ದಿ ಹಬ್ಬಿದ್ದು, ಮುಳಬಾಗಿಲು ತಾಲೂಕಿನ ಆಹಾರ ವಿತರಣಾ ಕೇಂದ್ರಗಳಲ್ಲಿ ಈ ರೀತಿಯ ಅಕ್ಕಿ ವಿತರಿಸಿರುವ ದೂರುಗಳು ಕೇಳಿಬಂದಿವೆ. ಅನ್ನ ಮಾಡಲು ಇಟ್ಟರೆ ಅಕ್ಕಿ ಕರಗಿ ಹೋಗುತ್ತಿರುವುದಾಗಿ ಆರೋಪಿಸಲಾಗಿದೆ.
ಪ್ಲಾಸ್ಟಿಕ್ ಅಕ್ಕಿ ಮಾರಾಟ : ಸೂಪರ್ ಮಾರ್ಕೆಟ್ ವಿರುದ್ಧ ಆಕ್ರೋಶ
ಆದರೆ ಆಹಾರ ಇಲಾಖೆ ಅಧಿಕಾರಿಗಳು ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಅಪೌಷ್ಟಿಕ ಅಹಾರ ಕೊರತೆ ಇರುವ ಮಕ್ಕಳಿಗೆ ಪೌಷ್ಟಿಕ ಅಂಶವುಳ್ಳ ಕೆಲವು ಪದಾರ್ಥಗಳನ್ನು ಬೆರೆಸಿ ಕೊಡಲಾಗುತ್ತಿದೆ. ಇದರಿಂದಾಗಿ ಕೆಲವರಲ್ಲಿ ತಪ್ಪು ತಿಳುವಳಿಕೆ ಉಂಟಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
