ಮಂಗಳೂರು(ಮಾ.18): ಕೊರೋನಾ ವೈರಾಣು ಕಾಯಿಲೆಯ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಸೋಂಕು ತಡೆಯುವ ಉದ್ದೇಶದಿಂದ ಜಿಲ್ಲಾ​ಧಿ​ಕಾರಿ ಆದೇ​ಶ​ದಂತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ನಿತ್ಯೋತ್ಸವದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ನಿರ್ಬಂಧಿಸಲಾಗಿದೆ.

ಕೊರೋನಾ ಕಾಟಕ್ಕೆ ಸುಸ್ತಾದ ಜನ: ಊರಿಗೆ ಹೋಗಲು ಪ್ರಯಾಣಿಕರ ಹಿಂದೇಟು!

ದೇವಳದಲ್ಲಿ ಯಾವುದೇ ಹರಕೆ ಸೇವೆಗಳು ಮುಂದಿನ ಆದೇಶದ ತನಕ ನಡೆಯುವುದಿಲ್ಲ. ಭಕ್ತರಿಗೆ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಲು ಕೂಡಾ ಅವಕಾಶವಿರುವುದಿಲ್ಲ. ಆದರೆ ಕೇವಲ ದರ್ಶ​ನಕ್ಕೆ ಮಾತ್ರ ಅವಕಾಶವಿರುತ್ತದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್‌ ತಿಳಿಸಿದ್ದಾರೆ.

ಸೇವೆಗಳಿಗೆ ಅವಕಾಶವಿಲ್ಲ:

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿದ್ದ ಪ್ರಧಾನ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷಬಲಿ, ನಾಗಪ್ರತಿಷ್ಠೆ, ಶೇಷ ಸೇವೆ, ತುಲಾಭಾರ ಸೇರಿದಂತೆ ದೇವಳದಲ್ಲಿ ಭಕ್ತರು ನೆರವೇರಿಸುತ್ತಿದ್ದ ಎಲ್ಲಾ ಹರಿಕೆ ಸೇವೆಗಳನ್ನು ಬುಧ​ವಾ​ರ​ದಿಂದ ಮುಂದಿನ ಆದೇಶದ ತನಕ ನಿರ್ಬಂಧಿಸಲಾಗಿದ್ದು, ಯಾವುದೇ ಸೇವೆಗಳನ್ನು ನಡೆಸಲು ಭಕ್ತರಿಗೆ ಅವಕಾಶವಿಲ್ಲ.ಅಲ್ಲದೆ ಭಕ್ತರು ನೆರವೇರಿಸುತ್ತಿದ್ದ ಸೇವಾ ಉತ್ಸವಗಳಿಗೂ ಕೂಡಾ ಅವಕಾಶವಿಲ್ಲ.

ಬೆಂಗಳೂರಲ್ಲಿಯೂ ಹಕ್ಕಿ ಜ್ವರದ ಭೀತಿ : ಕಾಗೆಗಳ ಸರಣಿ ಸಾವು

ಮುಂದಿನ ಆದೇಶದ ತನಕ ಭಕ್ತರು ನಡೆಸುವ ಹರಿಕೆ ಸೇವೆ ಮತ್ತು ಉತ್ಸವಗಳನ್ನು ರದ್ದುಗೊಳಿಸಲಾಗಿದೆ. ದೇವರಿಗೆ ನಿತ್ಯಪೂಜೆ ಮತ್ತು ನಿತ್ಯೋತ್ಸವಗಳು ಎಂದಿನಂತೆ ನಡೆಯಲಿದ್ದು, ನಿತ್ಯೋತ್ಸವಗಳಲ್ಲಿ ಸಾರ್ವಜನಿಕ ಭಕ್ತರ ಭಾಗವಹಿಸುವಿಕೆ ನಿರ್ಬಂಧಿಸಲಾಗಿದೆ. ಕೇವಲ ದೇವಳದ ಸಿಬ್ಬಂದಿ ಮಾತ್ರ ಭಾಗವಹಿಸಬಹುದು.